ಚಿತ್ರದುರ್ಗ:
ಪವಿತ್ರ ರಂಜಾನ್ ಮಾಸದ ಉಪವಾಸ ಆಚರಿಸುತ್ತಿರುವ ಮುಸ್ಲಿಂ ಬಾಂಧವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕ ದೇವರಾಜ್ ಹಾಗೂ ಸಿಬ್ಬಂದಿಯವರು ಮೆದೇಹಳ್ಳಿ ರಸ್ತೆಯಲ್ಲಿರುವ ನೋಬಲ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಂಗಳವಾರ ಸಂಜೆ ಇಫ್ತಿಯಾರ್ ಕೂಟವನ್ನು ಏರ್ಪಡಿಸಿದ್ದರು.
ಅನ್ನದಾನ ಶ್ರೇಷ್ಟದಾನವಾಗಿರುವುದರಿಂದ ವಿಶೇಷವಾಗಿ ರಂಜಾನ್ ಉಪವಾಸದಲ್ಲಿ ತೊಡಗುವ ಮುಸ್ಲಿಂ ಬಾಂಧವರಿಗೆ ಇಫ್ತಿಯಾರ್ ಕೂಟ ಏರ್ಪಡಿಸುವುದರಿಂದ ಸ್ನೇಹ, ಸೌಹಾರ್ಧತೆ, ಅನ್ಯೋನ್ಯತೆ, ಸಹೋದರತ್ವ ಭಾವನೆ ಬೆಳೆಯಲಿದೆ ಎಂದು ಡಿ.ಡಿ.ಪಿ.ಐ.ಕಚೇರಿ ಪತ್ರಾಂಕಿತ ಸಹಾಯಕ ದೇವರಾಜ್ ಇಫ್ತಿಯಾರ್‍ಕೂಟದ ಉದ್ದೇಶ ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಸಿಬ್ಬಂದಿಗಳಾದ ರಾಜಣ್ಣ, ಸದಾನಂದ, ರೇವಣಸಿದ್ದೇಶ್ವರ, ಆಂಜನೇಯ, ರಾಮಮೂರ್ತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಕೆ.ಜಿ.ಜಗದೀಶ್, ಮುಸ್ಲಿಂ ನೌಕರರ ಸಂಘದ ಅಧ್ಯಕ್ಷ ಸೈಯದ್ ಅಫಾಖ್‍ಅಹಮದ್, ನೋಬಲ್ ಶಾಲೆಯ ಕಾರ್ಯದರ್ಶಿ ಭಾಷಿದ್ ಇನ್ನು ಮುಂತಾದವರು ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿದ್ದರು.