ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರಮ

ಹರಿಹರ

    ಸರ್ಕಾರದಿಂದ ಕೃಷಿ ಇಲಾಖೆಗೆ ಬರುವ ಪ್ರತಿಯೊಂದು ಯೋಜನೆ ಹಾಗೂ ಸೌಲಭ್ಯಗಳನ್ನು ತಾಲೂಕಿನ ಜನರಿಗೆ ತಲುಪಿಸುವುದೇ ನಮ್ಮ ಕರ್ತವ್ಯ ಎಂದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ವಿ.ಪಿ ಗೋವರ್ಧನ್ ಭರವಸೆ ನೀಡಿದರು.

    ನಗರದ ಸ್ತ್ರೀ ಶಕ್ತಿ ಭವನದಲ್ಲಿ ಕೃಷಿ ಇಲಾಖೆಯಿಂದ ಆಯೋಜಿತ, ಕೃಷಿ ಅಭಿಯಾನ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕಾರ್ಯಕ್ರಮದ ಕಡೆಯ ದಿನದಂದು ತಾಲೂಕಿನ ರೈತರು ಮತ್ತು ಕೃಷಿ ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲಾಖೆಗೆ ಬರುವಂತ ಎಲ್ಲಾ ಯೋಜನೆಗಳನ್ನು ಮತ್ತು ಸೌಕರ್ಯಗಳನ್ನು ತಾಲೂಕಿನ ಪ್ರತಿಯೊಬ್ಬ ರೈತರಿಗೂ ತಿಳಿಯುವಂತೆ ನಾವು ಮಾಡುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.

     ಇಲಾಖೆಯಲ್ಲಿ ಚಾಲ್ತಿಯಲ್ಲಿ ಇರುವ ಪ್ರಮುಖ ಯೋಜನೆಗಳಾದ ಕೃಷಿಭಾಗ್ಯ, ಮಣ್ಣು ಆರೋಗ್ಯ ಅಭಿಯಾನ, ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮತ್ತು ಬೆಳೆ ವಿಮೆಗಳ ಬಗ್ಗೆ ಮಾಹಿತಿ ನೀಡಿದರು. ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳನ್ನು ರೈತರು ಉತ್ತಮವಾಗಿ ಸದುಪಯೋಗ ಮಾಡಿಕೊಳ್ಳ. ಆಸೆ ಪಟ್ಟು ಯೋಜನೆಗಳನ್ನು ಪಡೆಯದೆ, ಉಪಯುಕ್ತ ಕಾರ್ಯಗಳಿಗೆ ಇಲಾಖೆಯ ಸೌಲಭ್ಯ ಪಡೆಯಿರಿ ಎಂದು ಹೇಳಿದರು.

    ನಂತರ ಮಾತನಾಡಿದ ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಡಾ. ಜಯದೇವಪ್ಪ, ರೈತರು ತಮ್ಮ ಕೃಷಿಯ ಜೊತೆಯಲ್ಲಿ ಉಪಕಸುಬಾಗಿ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ. ಜಾನುವಾರುಗಳನ್ನು ಕಾಪಾಡಿಕೊಳ್ಳಲು, ಪ್ರಸ್ತುತ ದಿನಮಾನದಲ್ಲಿ ಜಾನುವಾರುಗಳಿಗೆ ಬರುವ ರೋಗಗಳ ನಿರ್ವಹಣೆ, ರಾಸುಗಳಿಗೆ ಉತ್ತಮ ಹಾಗೂ ಪೌಷ್ಠಿಕ ರಸಮೇವು ತಯಾರಿಸುವ ಕುರಿತು ರೈತರಿಗೆ ಮಾಹಿತಿ ನೀಡಿದರು.

    ನಂತರ ಮಾತನಾಡಿದ, ಕತ್ತಲಗೆರೆ ಕೃಷಿ ಸಂಶೋದನಾ ಕೇಂದ್ರದ ಬೇಸಾಯ ತಜ್ಞರಾದ ಡಾ. ಕುಮಾರ್, ತಾಲೂಕಿನ ಮುಖ್ಯ ಬೆಳೆಗಳಾದ ಭತ್ತ ಮತ್ತು ಮೆಕ್ಕೆಜೋಳ ಬೆಳೆಗಳ ಬೇಸಾಯ ಕ್ರಮಗಳ ಬಗ್ಗೆ ವಿಸ್ತಾರವಾಗಿ ಮಾಹಿತಿ ತಿಳಿಸಿದರು ಹಾಗೂ ಬೀಜೋಪಚಾರದ ಬಗ್ಗೆ ರೈತ ಬಾಂಧವರಿಗೆ ತಿಳಿಸಿಕೊಟ್ಟರು.

    ನಂತರ ರೈತರನ್ನು ಉದ್ದೇಶಿಸಿ ಮಾತನಾಡಿದ ಕತ್ತಲಗೆರೆ ಕೃಷಿ ಸಂಶೋದನಾ ಕೇಂದ್ರದ ಕೃಷಿ ವಿಸ್ತರಣಾ ಅಧಿಕಾರಿ ಡಾ. ರಾಮಪ್ಪ ಪಾಟೀಲ, ಪ್ರಪಂಚದಲ್ಲಿಯೇ ಇಸ್ರೇಲ್ ಮತ್ತು ಅಮೇರಿಕ ದೇಶಗಳು ಕೃಷಿ ಕ್ಷೇತ್ರದಲ್ಲಿ ಮಾದರಿಯಾಗಿವೆ. ನಮ್ಮ ದೇಶದಲ್ಲಿಯೂ ಸಹ ಕೂರಿಗೆ ಬಿತ್ತನೆ ಭತ್ತ ಮತ್ತು ಯಾಂತ್ರೀಕೃತ ಭತ್ತ ನಾಟಿ ಯಂತ್ರಗಳು ಹೆಜ್ಜೆ ಇಟ್ಟಿದ್ದು, ರೈತರು ಈ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಿ ಎಂದು ವಿಸ್ತಾರವಾಗಿ ಮಾಹಿತಿ ನೀಡಿದರು.

     ನಂತರ ಮಾತನಾಡಿದ ಹರಿಹರದ ಪಶು ಸಂಗೋಪನ ಇಲಾಖೆಯ ಡಾ. ಬೂದಿಹಾಳ್ ಇವರು ತಮ್ಮ ಇಲಾಖೆಯಲ್ಲಿ ದೊರೆಯುವ ಯೋಜನೆಗಳ ಬಗ್ಗೆ ಹಾಗೂ ರೈತರಿಗೆ ಉಚಿತವಾಗಿ ಮೇವು ಬೆಳೆಯ ಕಿಟ್‍ಗಳನ್ನು ಮುಂದಿನ ದಿನದಲ್ಲಿ ವಿತರಿಸಲಾಗುವುದು ಎಂದು ತಿಳಿಸಿರು.

    ನಂತರ ಮಾತನಾಡಿದ ಹರಿಹರದ ಮಿನೂಗಾರಿಕೆ ಇಲಾಖೆಯ ಡಾ. ಪ್ರದೀಪ, ತಮ್ಮ ಇಲಾಖೆಯಲ್ಲಿ ದೊರೆಯುವ ಯೋಜನೆಗಳ ಬಗ್ಗೆ ತಿಳಸಿದರು. ಇದೇ ವೇಳೆ ಆತ್ಮ ಶ್ರೇಷ್ಟ ಕೃಷಿಕ ಪ್ರಶಸ್ತಿ ಪಡೆದ ರೈತರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿಗಳಾದ ನಟರಾಜ್.ಎಸ, ಎಂ.ಎಂ. ಹುಣಶೀಕಟ್ಟೆ, ದೇವೆಂದ್ರಪ್ಪ, ಚಂದ್ರಶೇಖರ, ಪ್ರಸಾದ್, ರೈತ ಫಲಾನುಭವಿಗಳು ಹಾಗೂ ಪ್ರಗತಿ ಪರ ರೈತರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link