ಇಲಾಖೆಗಳಲ್ಲಿ ಅಂವಿಕಲರಿಗೆ ಮೀಸಲಾತಿ ಕೊಡಿ : ಡಾ.ರೇವಣ್ಣ

ಚಿತ್ರದುರ್ಗ:

    ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ವಿಕಲಚೇತನರಿಗೆ ಶೇ.10 ರಷ್ಟು ಮೀಸಲಾತಿ ನೀಡಬೇಕು ಎಂದು ಹಿರಿಯ ವಕೀಲ ದಾವಣಗೆರೆಯ ಡಾ.ರೇವಣ್ಣ ಬಳ್ಳಾರಿ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

    ಈಲ್ಲಾ ವಿಶೇಷ ಚೇತನರ ವೀಣಾಪಾಣಿ ಸಾಹಿತ್ಯ ಸಾಂಸ್ಕತಿಕ ಸಂಘದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಭಾನುವಾರ ರೋಟರಿ ಬಾಲಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

     ವಿಕಲಚೇತನರು ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ವಿಕಲಚೇತರನ್ನು ಯಾರು ಕೇವಲವಾಗಿ ಕಾಣಬಾರದು. ಅನುಕುಂಪ, ಸಹಾಯಕ್ಕಿಂತ ಪ್ರೋತ್ಸಾಹ ನೀಡಬೇಕಾಗಿದೆ. ರೈಲು, ಬಸ್ ಸೇರಿದಂತೆ ಉನ್ನತ ಶಿಕ್ಷಣದಲ್ಲಿ ವಿಕಲಚೇತನರಿಗೆ ಮೀಸಲಾತಿ ಒದಗಿಸಬೇಕು. ವಿಕಲಚೇತನರಲ್ಲಿ ಸಾಕಷ್ಟು ಮನೋಬಲವಿದೆ. ಯಾರು ವಿಕಲಚೇತನರನ್ನು ಕೇವಲವಾಗಿ ಕಾಣಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಸವಲತ್ತುಗಳು ವಿಕಲಚೇತನರಿಗೆ ತಲುಪಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸೌಲಭ್ಯಗಳು ಸಿಕ್ಕಾಗ ಮಾತ್ರ ವಿಕಲಚೇತನರು ಸಮಾಜದಲ್ಲಿ ಎಲ್ಲರಂತೆ ಬದುಕಲು ಸಾಧ್ಯ ಎಂದು ಹೇಳಿದರು.

    ಸಾಹಿತಿ ಹಾಗೂ ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಬಸವರಾಜ್ ಟಿ.ಬೆಳಗಟ್ಟ ಮಾತನಾಡಿ ಭಾಷೆ ಸಮಸ್ಯೆ ಮತ್ತು ಮುಜುಗರದಿಂದ ಅಂಗವಿಕಲರು ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಆಗುತ್ತಿಲ್ಲ. ಆದರೂ ಸ್ವಾಭಿಮಾನ ದೃಢಸಂಕಲ್ಪ ಅವರಲ್ಲಿದೆ. ಮಾಧ್ಯಮಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ.ಸಂಸ್ಕತಿ, ಸಂಸ್ಕಾರವುಳ್ಳ ವಿಕಲಚೇತನರಲಿ ಚಲನಶೀಲವಾದ ಗುಣ ದೇವರ ಕೊಡುಗೆ ನೇರ ನಡೆ, ನುಡಿ, ದಿಟ್ಟ ನಿರ್ಧಾರ ಅವರಲ್ಲಿದೆ. ಅದಕ್ಕಾಗಿ ವಿಕಲಚೇತನರಿಗೆ ಉತ್ತೇಜನ ಸಿಗಬೇಕಾಗಿದೆ ಎಂದರು.

    ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ಮಾತನಾಡಿ ವಿಕಲಚೇತನರಿಗೆ ಕರುಣೆ, ಅನುಕಂಪ, ಪ್ರೀತಿ ಬೇಡ. ಅದಕ್ಕೆ ಬದಲಾಗಿ ಸರ್ಕಾರದ ಪ್ರೋತ್ಸಾಹ ಬೇಕು. ಅಂಗವಿಕಲರುಗಳು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಜಡತ್ವ ಎಂಬುದು ಒಂದು ಶಾಪ. ಸದಾ ಚೈತನ್ಯಶೀಲರಾಗಿರುವವರಿಗೆ ಯಾವಾಗಲೂ ಯಶಸ್ಸು ಸಿಗುತ್ತದೆ ವಿಕಲಚೇತನರ ಈ ಸಂಘ ಬಲಿಷ್ಟವಾಗಿ ಬೆಳೆಯಲಿ ಎಂದು ಹಾರೈಸಿದರು.

     ಲೇಖಕ ಆನಂದಕುಮಾರ್ ಮಾತನಾಡುತ್ತ ಅಂಗವಿಕಲರಲ್ಲಿ ನೂನ್ಯತೆಯಿರುವಂತೆ ಮಾನಸಿಕ ಖಿನ್ನತೆಗೊಳಗಾಗಿರುವವರು ಕೂಡ ಅಂಗವಿಕಲರಿದ್ದಂತೆ. ಅದಕ್ಕಾಗಿ ಸಾಮಾನ್ಯರಂತೆ ವಿಕಲಚೇತನರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಎಲ್ಲರ ಸಹಕಾರ ಅಗತ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಗವಿಕಲರಿಗೆ ನೆರವಿಗೆ ಮುಂದೆ ಬರಲಿ ಎಂದು ಮನವಿ ಮಾಡಿದರು.

    ಎಸ್.ಕೆ.ಪಿ.ಸೊಸೈಟಿ ನಿರ್ದೇಶಕ ಬ್ರಹ್ಮಾನಂದಗುಪ್ತ ಮಾತನಾಡಿ ವಿಕಲಚೇತರ ವೀಣಾಪಾಣಿ ಸಾಹಿತ್ಯ ಸಾಂಸ್ಕತಿಕ ಸಂಘ ಬಲಿಷ್ಟವಾಗಿ ಬೆಳೆದು ತಮಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಕೋರಿದರು.ಈಲ್ಲಾ ವಿಶೇಷಚೇತನ ರ ವೀಣಾಪಾಣಿ ಸಾಹಿತ್ಯ ಸಾಂಸ್ಕತಿಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆಯ ಅಧ್ಯಕ್ಷ ದಯಾಪುತ್ತೂರ್ಕರ್ ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap