ಹೊಸದುರ್ಗ:
ತಾಲ್ಲೂಕಿನಲ್ಲಿ ಅಕ್ರಮವಾಗಿ ಕಸಾಯಿ ಖಾನೆಗಳಿಗೆ ಗೋ ಸಾಗಾಣಿಕೆ ಮಾಡುತ್ತಿರುವ ಹಾಗೂ ಕಾನೂನು ಬಾಹಿರ ಚಟವಟಿಕೆಗಳ ಬಗ್ಗೆ ಮಾಹಿತಿ ಜನ ಸಾಮಾನ್ಯರಿಗೆ ಸಿಗುತ್ತಿದೆ ಅದರೆ ಇಲ್ಲಿನ ಪೊಲೀಸರಿಗೆ ಮಾಹಿತಿ ಸಿಗುತ್ತಿಲ್ಲವೆಂದು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.
ಕಳೆದ ಐದಾರು ವರ್ಷಗಳಿಂದ ವರುಣನ ಅವಕೃಪೆಗೆ ನೀರು ಮೇವಿಲ್ಲದೆ ರೈತಾಪಿ ಜನಗಳು ತಮ್ಮ ಬೆನ್ನಲಬುಗಳಾದ ಧನ-ಕರುಗಳನ್ನು ಸಾಕಲಾರದೆ ತತ್ತರಿಸಿ ಹೋದ ರೈತ ಗೋ ಸಂಪತ್ತನ್ನು ಉಳಿಸಿಕೊಳ್ಳಲು ಆಗದೇ ಅಶಸ್ತ ಹಾಗೂ ಉಪಯೋಗಕ್ಕೆ ಬಾರದ ಜಾನುವಾರುಗಳ ಸಾಕಾಣೆ ಮಾಡಲಾರದೆ ಮಾರಾಟ ಮಾಡುತ್ತಿದ್ದಾರೆ.
ಇದನ್ನೆ ಬಂಡವಾಳ ಮಾಡಿಕೊಂಡ ಕೆಲವು ಕಿಡಿಗೇಡಿಗಳು ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಗವಿರಂಗಾಪುರ, ಹೊಸದುರ್ಗ ಸಂತೆಗಳಿಂದ ಗೋವುಗಳನ್ನು ಕೊಂಡು ತಂದು ಕೇರಳ, ಆಂದ್ರ, ತಮಿಳುನಾಡು, ರಾಜ್ಯದ ಶಿರಾ ಇತರ ನಗರಗಳಲ್ಲಿರುವ ಕಸಾಯಿ ಖಾನೆಗಳಿಗೆ ಸಾಗಾಟ ಮಾಡುತ್ತಿದ್ದಾರೆ,
ತಾಲ್ಲೂಕಿನ ಕೆಲವು ಸಂಘಟನೆ ಕಾರ್ಯಕರ್ತರು ಹೊಸದುರ್ಗದಿಂದ ದೂರದ ಕೇರಳ ಹಾಗೂ ರಾಜ್ಯದ ನಾನಾ ಭಾಗಗಳಲ್ಲಿರುವ ಕಸಾಯಿ ಖಾನೆಗೆ ಗೋವುಗಳನ್ನು ಹೊತ್ತು ಹೋಗುವ ವಾಹನಗಳನ್ನು ತಡೆದು ಪೊಲೀಸರ ವಶಕ್ಕೆ ನೀಡಿದರೂ ಸಂಬಂಧಿಸದವರ ಮೇಲೆ ಕಠಿಣ ಕಾನೂನ ಕ್ರಮ ಜರಗಿಸದೆ ಇರುವುದರಿಂದ ನಿರಂತರವಾಗಿ ಗೋವುಗಳು ಕಟುಕರ ಪಾಲಾಗುತ್ತಿವೆ.
ಕಳೆದ ಜುಲೈ ತಿಂಗಳಿನಲ್ಲಿ ತಾಲ್ಲೂಕಿನ ಭಜರಂಗದಳದ ಕಾರ್ಯಕರ್ತರು ಕಸಾಯಿ ಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 30 ಹಸು, 8 ಎಮ್ಮೆ, 2 ಎತ್ತುಗಳು ಹಾಗೂ ಕಳೆದ ವಾರದಲ್ಲಿ 4 ಎತ್ತುಗಳು, ಶ್ರೀರಾಂಪುರ ಹೋಬಳಿಯ ಗವಿರಂಗನಾಥ ಬೆಟ್ಟದಲ್ಲಿ 30 ಹಸು ಕರುಗಳನ್ನು ಸಾಗಾಟ ಮಾಡುತ್ತಿದ್ದ ಕಿಡಿಗೇಡಿಗಳ ಆಟೋಗಳನ್ನು ತಡೆದು ಪಟ್ಟಣದ ಪೊಲೀಸರ ವಶಕ್ಕೆ ಒಪ್ಪಿಸಿ ಮಾನವೀಯತೆ ಮೆರೆದು ಜಾನುವಾರುಗಳನ್ನು ಗೋ ಶಾಲೆಗೆ ತಲುಪಿಸಿದ್ದಾರೆ.
ಅಕ್ರಮವಾಗಿ ದಂಧೆ ನಡೆಯುತ್ತಿರುವ ಕಾರಣ ಜಾನುವಾರುಗಳ ಕಳವು ಪ್ರಕರಣಗಳು ಸಹ ಹೆಚ್ಚಾಗುತ್ತಿದ್ದರೂ ಪೊಲೀಸರೂ ಇದಕ್ಕೂ ನಮಗೂ ಸಂಬಂದವಿಲ್ಲ ಎನ್ನುವಂತೆ ಇರುವುದು ತಾಲೂಕಿನ ಜನತೆ ಇಲಾಖೆಯ ಬಗ್ಗೆ ಅಸಮಾಧಾನದ ಮಾತುಗಳನ್ನು ಆಡುತ್ತಿದ್ದಾರೆ
ಸಾರ್ವಜನಿಕ ವಲಯದಲ್ಲಿ ಇಲಾಖೆಯ ಬಗ್ಗೆ ವ್ಯಕ್ತವಾಗುತ್ತಿರುವ ಸಂಶಯದ ಮಾತುಗಳಿಗೆ ಕಡಿವಾಣ ಹಾಕಬೇಕಾದರೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಸಂಭಂದಿಸಿದವರ ಮೇಲೆ ಕಾನೂನು ಕ್ರಮ ಕೈಗೊಂಡು ತಾಲೂಕಿನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟವಟಿಕೆಗಳಿಗೆ ಕೊನೆಗಾಣಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.