ಜವನಗೊಂಡನಹಳ್ಳಿ ಕ್ರಾಸ್ ಬಳಿ ಅಕ್ರಮ ಗಾಂಜ ವಶ

ಹಿರಿಯೂರು :

     ಹಿರಿಯೂರು ತಾಲ್ಲೂಕು ಜವನಗೊಂಡನಹಳ್ಳಿ ಹೋಬಳಿಯ ದಿಂಡಾವರಗ್ರಾಮದ ಜವನಗೊಂಡನಹಳ್ಳಿ ಕ್ರಾಸ್ ಬಳಿ ಚಿಕ್ಕಣ್ಣ ಬಿನ್ ಚಿತ್ತಪ್ಪ, ಎಂಬ ವ್ಯಕ್ತಿಯಿಂದ ಅಬಕಾರಿ ಅಧಿಕಾರಿ ಗಳು ಹಾಗೂ ಸಿಬ್ಬಂದಿವರ್ಗ ಸುಮಾರು 2 ಕೆ ಜಿ 700 ಗ್ರಾಂಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ ಎಂಬುದಾಗಿ ಅಬಕಾರಿ ನಿರೀಕ್ಷಕರಾದ ಮಧುಸೂದನ್.ಎಲ್ ತಿಳಿಸಿದ್ದಾರೆ.

     ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಲಯ ವ್ಯಾಪ್ತಿ ಯಲ್ಲಿ ಗಸ್ತುಕಾರ್ಯ ನಿರ್ವಹಿಸುತ್ತಿರುವಾಗ ಬಂದಖಚಿತ ಮಾಹಿತಿಯ ಮೇರೆಗೆ ಮಾನ್ಯಅಬಕಾರಿ ಉಪಆಯುಕ್ತರು, ಚಿತ್ರದುರ್ಗಜಿಲ್ಲೆ, ಚಿತ್ರದುರ್ಗರವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರು, ಹಿರಿಯೂರು ಉಪ ವಿಭಾಗ, ಹಿರಿಯೂರುರವರ ನಿರ್ದೇಶನದಮೇರೆಗೆ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ
ದಾಗ ಸುಮಾರು 65 ಸಾವಿರ ರೂಗಳ ಮೌಲ್ಯದ ಗಾಂಜ ವನ್ನು ಅಕ್ರಮವಾಗಿ ಈ ವ್ಯಕ್ತಿ ಹೊಂದಿದ್ದು ಸ್ಥಳೀಯರಿಗೆ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳ ಲಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

      ಅಕ್ರಮವಾಗಿ ಗಾಂಜವನ್ನು ಮಾರಾಟ ಮಾಡಲಾಗುತ್ತಿದ್ದ ವ್ಯಕ್ತಿಯನ್ನು ಚಿಕ್ಕಣ್ಣ ಬಿನ್ ಚಿತ್ತಪ್ಪ ಎಂಬುದಾಗಿ ಗುರುತಿಸಲಾ ಗಿದ್ದು ವಯಸ್ಸು: 60 ವರ್ಷ, ಜಾತಿ:ಗೊಲ್ಲಜನಾಂಗ, ಈ ವ್ಯಕ್ತಿಯನ್ನು ತುಮಕೂರುಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿ ನ ಹುಳಿಯಾರು ಹೋಬಳಿಯ ಎಮ್ಮೆಕರಿಹಟ್ಟಿಗ್ರಾಮದ ನಿವಾಸಿ ಎಂಬುದಾಗಿ ಪತ್ತೆಹಚ್ಚಲಾಗಿದೆ.

      ಗಾಂಜವನ್ನು ಮಾರಾಟ ಮಾಡುವುದು ಕಾನೂನಿನ ರೀತಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಆದಕಾರಣ, ಸದರಿ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿ ಆರೋಪಿತನಿಂದ2 ಕೆಜಿ 700ಗ್ರಾಂಗಾಂಜಾವನ್ನು ನಿಯಮಾನುಸಾರ ಪಂಚರ ಸಮಕ್ಷಮ ಸ್ಥಳಮಹಜರ್ ಕ್ರಮಜರುಗಿಸಿ ಸರ್ಕಾರಕ್ಕೆ ವಶಪಡಿಸಿಕೊಂಡು ಸದರಿಆರೋಪಿಯ ವಿರುದ್ಥ ಮೊಕದ್ದಮೆ ಯನ್ನು ದಾಖಲು ಮಾಡಿ, ಆರೋಪಿತನನ್ನು ಮಾನ್ಯಘನ ಜಿಲ್ಲಾ ಸತ್ರ ನ್ಯಾಯಾಲಯ, ಚಿತ್ರದುರ್ಗಜಿಲ್ಲೆ, ಚಿತ್ರದುರ್ಗ ಇಲ್ಲಿನ ನ್ಯಾಯಾಂಗ ವಶಕ್ಕೆ ನೀಡಲಾಗಿರುತ್ತದೆ ಎಂಬುದಾಗಿ ಅಬಕಾರಿ ನಿರೀಕ್ಷಕರಾದ ಮಧುಸೂದನ್ ತಿಳಿಸಿದ್ದಾರೆ.

      ಅಬಕಾರಿ ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಮಧು ಸೂದನ್ ರವರ ಜೊತೆ ಅಬಕಾರಿ ಉಪ ನಿರೀಕ್ಷಕ ಸಂದೀಪ್, ಪರಿಕ್ಷಾರ್ಥ ಅಬಕಾರಿ ಉಪ ನಿರೀಕ್ಷಕ ಸಿದ್ದೇಶನಾಯ್ಕ, ಅಬಕಾರಿರಕ್ಷಕರಾದ ಲೋಹಿತ್, ಸತೀಶ್‍ಎಸ್, ಶಿವರಾಜ್, ತಿಮ್ಮಣ್ಣ, ರಮೇಶ್ದೇವು ರಾಠೋಡ, ಅಬಕಾರಿ ವಾಹನ ಚಾಲಕರು ಸೇರಿದಂತೆ ಸಿಬ್ಬಂದಿವರ್ಗ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap