ಸೋಲಾರ್ ಕಂಪನಿಯ ಅಕ್ರಮ ಒತ್ತುವರಿ

 ಮಿಡಿಗೇಶಿ

          ಸರ್ಕಾರಕ್ಕೆ ಸೇರಿದ 3 1/4 (ಮೂರು ಕಾಲು) ಎಕರೆ ಭೂಮಿ ಖಾಸಗಿ ಸೋಲಾರ್ ಕಂಪನಿಯ ಒತ್ತುವರಿ ಮಾಡಿ ಕೊಳ್ಳುತ್ತಿದ್ದರೂ ರೆವಿನ್ಯೂ ಇಲಾಖೆ ಮೌನ ವಾಗಿರುವ ಒಳ ಮರ್ಮವಾದರೂ ಏನು?

        ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯಿಂದ ಇಟಕದಿಬ್ಬನಹಳ್ಳಿ (ಐ.ಡಿ.ಹಳಿ)್ಳ_ ಗ್ರಾಮಮಕ್ಕೆ ಹಾದು ಹೋಗುವ ಪಿ.ಡಬ್ಲ್ಯೂ.ಡಿ ರಸ್ತೆಯ ಪುಲಮಾಚಿ ಗ್ರಾಮದ ಸಮೀಪದ ಪುಲಮಾಚಿ ವಲಯಕ್ಕೆ ಸೇರಿದ ಸರ್ವೆ ನಂಬರಿನ ಹನ್ನೇರಡು ಎಕರೆ ಹಾಗೂ ಮಾಲಗೊಂಡನಹಳ್ಳಿಗೆ ಸೇರಿದ ಸರ್ವೆನಂಬರಿನ 101 ಎಕರೆ ಭೂಮಿಯ ನುಮಂತಪುರ ಗ್ರಾಮಕ್ಕೆ ಸೇರಿದ ಜಮೀನುದಾರರಾಗಿರುತ್ತಾ

        ಸದರಿಯವರಿಂದ (ಜಿ.ಪಿ.ಎ) ಜನರಲ್ ಪವರ್ ಆಪ್ ಅಟಾರ್ನಿ ಸೋಲರ್ ಕಂಪನಿ ಪವರ್ ಪ್ಲಾಂಟ್ ರವರು ಖರೀದಿಸಿದ್ದು ಜಿ.ಪಿ.ಎ ಎಂದರೆ ಖರೀದಿಗಲ್ಲ ಎಂಬುದಾಗಿರುತ್ತದೆ. ಅಗ್ರಿಮೆಂಟ್ ಮಾತ್ರ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಸದರಿ ಸೋಲಾರ್ ಕಂಪನಿ ಪ್ರಾರಂಭಗೊಂಡು ಸರಿ ಸುಮಾರು ಎರಡು ವರ್ಷಳಾಗುತ್ತಾ ಬಂದಿದದೆಯಾದರೂ ಈ ಕಂಪನಿಗಳ ಪರವಾಗಿ ನೀಡಬೇಕಾದ ಎನ್.ಓ.ಸಿ ಬೇಡತ್ತೂರು ಗ್ರಾಮ ಪಂವಾಯ್ತಿಯ ಅಧಿಕಾರಿಗಳು ಹಾಗೂ ಚುನಾಯಿತಿ ಜನಪ್ರತಿನಿಧಿಗಳವರು ಇಷ್ಠುದಿನ ಸುಮ್ಮನಿದ್ದು

       ಕಳೆದ ಎರಡು ಮೂರು ತಿಂಗಳ ಹಿಂದೆಯಷ್ಠೇ ಎನ್.ಓ.ಸಿ ಕೊಟ್ಟಿರುತ್ತಾರೆ 450 ಕೋಟಿ ರೂಪಾಯಿಗಳ ಅಂದಾಜು ಮೊತ್ತದ ಸೋಲಾರ್ ಕಂಪನಿಯವರಿಂದ ಕೇವಲ 325000-00 (ಮೂರುಕಾಲು ಲಕ್ಷ) ರೂಗಳ ಹಣವನ್ನು ಕಟ್ಟಿಸಿಕೊಂಡಿದ್ದು ಪರವಾನಗಿ ನೀಡಿರುತ್ತಾರೆ ಇದು ಎಷ್ಠರ ಮಟ್ಟಿಗೆ ಸರಿ? ಗ್ರಾಮದ ಪಂಚಾಯ್ತಿರವರ ನಿವೇಶನ ಮನೆ ಕಂದಾಯ, ನೀರಿನ ಕೆರ, ಇನ್ನಿತರೆ ಮನೆಗಳನ್ನು ನಿರ್ಮಿಸಿಕೊಳ್ಳಬೇಕೇಂದಲ್ಲಿ ಸಾವಿರ ರೂಗಳ ಕಂದಾಯ ವಸೂಲಾತಿ ಮಾಡುತ್ತಾರೆ. ಆದರೆ 450 ಕೋಟಿ ರೂಗಳ ವೆಚ್ಚದ ಸೋಲಾರ್ ಕಂಪನಿಯ ವರಿಂದ ಕೇವಲ ಮೂರು ಕಾಲು ಲಕ್ಷ ರೂಗಳನ್ನು ಪರವಾನಗಿ ನೀಡಲು ಪಡೆದಿರುತ್ತಾರೆಂದರೆ

        ಗ್ರಾಮ ಪಂಚಾಯಿತಿಯ ಅಭಿವೃದ್ದಿಯ ಬಗ್ಗೆ ಕಾಳಜಿ ಇದೆಯೇ? ಎನ್ನುವುದು ಎಂತಹ ಅಮಾಯಕರಿಗೂ ತಿಳಿಯದೇ ಇರುವ ವಿಷಯವಾಗಿರುವುದಿಲ್ಲವೆ? ಇದೆಲ್ಲಾ ಒಂದು ಕಡೆ ಇರಲಿ ಇದೆಲ್ಲಾ ಸಮಸ್ಯೆ ಅಲ್ಲ ಒಟ್ಟು 113 ಎಕ್ಕರೆ ಜಮೀನಿನ ಬಳಿ ಸರ್ಕಾರದ ಮೂರು ಕಾಲು ಎಕ್ಕರೆ ಭೂಮಿಯಿರುವುದು ಸರಿಯಷ್ಟೇ. ಈ ಸರ್ಕಾರದ ಭೂಮಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೃಷಿ ಇಲಾಖೆ ಯೋಜನೆಯಡಿಯಲ್ಲಿ ಎರಡು ಕೃಷಿ ಹೊಂಡಾ ನಿರ್ಮಿಸಿ ಹಣವನ್ನು ಸಹ ಪಡೆದು ಕೊಂಡಿರುವರಿದ್ದಾರೆ.

      ಈ ಭಾಗದ ನಾಗಲಾಪುರ, ಪುಲಮಾಚಿ, ಮಾಳಗೊಂಡನಹಳ್ಳಿ, ಹನುಮಂತಪುರ ಗ್ರಾಮಗಳಿಗೆ ಸೇರಿದ ದನ-ಕರು, ಕುರಿ, ಮೇಕೆ, ಎತ್ತು, ಎಮ್ಮೆ, ಸೀಮೆಹಸು, ನಾಟಿ ಹಸುಗಳು, ಕರಡಿ, ಚಿರತೆ, ತೋಳ, ಹಕ್ಕಿ- ಪಕ್ಷಿಗಳು, ನವಿಲುಗಳು ಹಾಗೂ ಅತಿಮುಖ್ಯವಾಗಿ ಸುಮಾರು ಇನ್ನೂರಕ್ಕೂ ಅತ್ಯಧಿಕ ಜಿಂಕೆಗಳಿಗೆ ಅತ್ಯಾನುಕೂಲಕರವಾಗಿ ಕುಡಿಯಲು ನೀರಿನ ವ್ಯವಸ್ತೆಯ “ಬಿಂದಪ್ಪನಕಟೆ’’ ಅಥವಾ “ವಡಕ ಕಟ್ಟೆ’’ಯಲ್ಲಿನ ನೀರನ್ನು ಕುಡಿದು ಮೇಲ್ಕಂಡ ಪ್ರಾಣಿಗಳು ದಾಹ ನೀಗಿಸಿಹೊಳ್ಳುತ್ತಿದ್ದವು.

      ಇಂತಹ ಜಾಗದಲ್ಲಿ ಜನರಲ್ ಪವರ್ ಆಫ್ ಅಟಾರ್ನಿ ಎಂಬ ಕಂಪನಿಯವರು ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ. ಇಲ್ಲಿನ ಬಂದಪ್ಪನ ಕಟ್ಟೆಯನ್ನು ಮಚ್ಚುಹಾಕುತ್ತಿರುವ ಬಗ್ಗೆ ಈಗಾಗಲೇ ಸದರಿ ಭೂಮಿಯ ಸುತ್ತಲೂ ಕಾಂಪೌಂಡ್ ಗೋಡೆಯನ್ನು ನಿರ್ಮಿಸಿದ್ದು ಇನ್ನು ಕೇವಲ ನೂರಾರು ಅಡಿಗಳ ಉದ್ದದ ಕಾಂಪೌಂಡ್ ನಿರ್ಮಿಸುವುದಷ್ಟೇ ಬಾಕಿಯಿರುತ್ತದೆ.

      ಉಳಿದ ನೂರಾರು ಅಡಿಗಳ ಕಾಂಪೌಂಡ್ ನಿರ್ಮಿಸಿದಲ್ಲಿ ಈ ಭಾಗದ ದನ-ಕರು, ಕುರಿ, ಮೇಕೆ, ಸೇರಿದಂತೆ ಎಲ್ಲಾ ಮೂಕ ಪ್ರಾಣಿಗಳ ಬಾಯಿಗೆ ಬೀಗ ಜಡಿದಂತೆ, ಸದರಿ ಸೋಲಾರ್ ಕಂಪನಿಯವರು ಸಕಾರದ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆಂಬ ಮಾಹಿತಿ ರೆವೆನ್ಯೂ ಇಲಾಖೆಯ ಗ್ರಾಮ ಲೆಕ್ಕಿಗರಿಂದ, ರೆವೆನ್ಯೂ ಕಂದಾಯಾಧಿಕಾರಿ(ಐ.ಡಿ.ಹಳ್ಳಿ ಹೋಬಳಿಗೆ) ಸೇರಿ ಹಾಗೂ ತಾಲ್ಲೂಕಿನ ದಂಢಾಧಿಕಾರಿಗಳವರು, ಉಪ ತಹಶಿಲ್ದಾರರು, ಉಪವಿಭಾಗಾಧಿಕಾರಿಗಳವರಿಗೆಲ್ಲರಿಗೂ ತಿಳಿದಿರುವ ವಿಷಯವೇ ಆಗಿದ್ದರೂ ಸಹ ಈ ಮೇಲ್ಕಂಡ ಎಲ್ಲಾ ರೆವಿನ್ಯೂ ಅಧಿಕಾರಿಗಳವರು

        ಸಕಾರದ ಭೂಮಿಯನ್ನು ಖಾಸಗಿ ಕಂಪನಿಯ ಸೋಲಾರ್‍ನವರು ಒತ್ತುವರಿ ಮಾಡಿಕೊಳ್ಳುತ್ತಿರುವವರನ್ನು ನಿಯಂತ್ರಿಸುಲ್ಲಿ ಮಧುಗಿರಿ ತಾಲ್ಲೂಕಿನ ರೆವೆನ್ಯೂ ಕಂದಾಯ ಇಲಾಖಾಧಿಕಾರಿಗಳವರು ಸಂಪೂರ್ಣ ವಿಫಲವಾಗಿರುತ್ತಾರೆಂಬುದು. ಈ ಭಾಗದ ಪ್ರಜ್ಞಾವಂತ ನಾಗರೀಕರ ಹಾಗೂ ಸಾರ್ವಜನಿಕರ, ರೈತಾಪಿವರ್ಗದವರ ನೇರ ಆರೋಪವಾಗಿರುತ್ತದೆ. ಆದ್ದರಿಂದ ಜಿಲ್ಲೆಯ ಜಿಲ್ಲಾಧಿಕಾರಿಗಳವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಉಪ ಮುಖ್ಯಮಂತ್ರಿಗಳವರು, ರಾಜ್ಯದ ಕಾರ್ಮಿಕ ಸಚಿವರು, ಹಾಗೂ ತಾಲ್ಲೂಕಿನ ವಿಧಾನಸಭಾ ಸದಸ್ಯರು ಸರ್ಕಾರದ ಭೂಮಿಯನ್ನು ಗುಳುಂ ಮಾಡಿಕೊಳ್ಳುತ್ತಿರುವ ಸೋಲಾರ್ ಕಂಪನಿಯ ಬಗ್ಗೆ ಗಮನಿಸುವ ಮೂಲಕ ಸಕಾರದ ಭೂಮಿಯನ್ನು ಉಳಿಸಿಕೊಳ್ಳುವರೇ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link