ಅಕ್ರಮ ಕಟ್ಟಡಗಳನ್ನು ತೆರವು ಮಾಡಿ ಅಂಗಡಿ ಮಳಿಗೆ ನಿರ್ಮಾಣ :ಸೊಗಡು ವೆಂಕಟೇಶ್

ಪಾವಗಡ

    ಪಾವಗಡ ಪಟ್ಟಣದ ಬಾಪೂಜಿ ಶಾಲಾ ಮುಂಬಾಗದಲ್ಲಿರುವ ತಾ.ಪಂ. ಸ್ಥಳದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿರುವ ಮನೆಗಳನ್ನು ತೆರವುಗೊಳಿಸಿ, ಅಂಗಡಿಮಳಿಗೆಗಳನ್ನು ನಿರ್ಮಾಣ ಮಾಡಲಾಗುವುದು ಎಂದು ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್ ತಿಳಿಸಿದರು.

     ತಾ.ಪಂ ಸಭಾಂಗಣದಲ್ಲಿ ನಡೆದ ಹಣಕಾಸು ಸ್ಥಾಯಿ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ.ಸಿ.ಇ.ಓ. ರವರುಗಳು ಬಾಪೂಜಿ ಶಾಲೆ ಬಳಿ ನಿರ್ಮಾಣ ಮಾಡಿರುವ ಅಕ್ರಮ ಮನೆಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದು, ಜಿಲ್ಲಾ ಎಸ್.ಪಿ. ಆದೇಶದಂತೆ ಪೋಲೀಸ್ ಬಂದೋಭಸ್ತ್ ನೊಂದಿಗೆ ಈ ಕಾರ್ಯಾಚರಣೆ ನಡೆಯಲಿದೆ ಎಂದರು, ತಾ.ಪಂ. ಆವರಣದಲ್ಲಿ 65 ಲಕ್ಷ ವೆಚ್ಚದಲ್ಲಿ ನೂತನ ಸಭಾಂಗಣ ನಿರ್ಮಾಣಕ್ಕೆ ಇನ್ನೆರಡು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು, ತಾ.ಪಂ. ಅವರಣದಲ್ಲಿರುವ ಮೀನುಗಾರಿಕೆ ಇಲಾಖೆಗೆ ಸೇರಿದ ವ್ಯರ್ಥವಾಗಿರುವ ಮೀನು ಸಾಕಾಣಿಕೆ ತೊಟ್ಟಿಗಳನ್ನು ತೆರವುಗೊಳಿಸಿ ಪಾರ್ಕ ನಿರ್ಮಾಣ ಮಾಡಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

      ಬಿ.ಸಿ.ಎಂ. ಇಲಾಖೆಯಲ್ಲಿ ಮೆನು ಪ್ರಕಾರ ಊಟ ನೀಡುವುದಿಲ್ಲ ಮತ್ತು ನಿಲಯಪಾಲಕರು ವಸತಿನಿಲಯಗಳಿಲ್ಲದೆ ಇರದೇ ಖಾಸಗಿ ವ್ಯಕ್ತಿಗಳಿಂದ ವಸತಿನಿಲಯಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ ಇದೇ ರೀತಿ ಮುಂದುವರೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾ.ಪಂ. ಉಪಾಧ್ಯಕ್ಷರು ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಐ.ಜಿ. ನಾಗರಾಜ್ ಇಲಾಖಾಧಿಕಾರಿ ಸುಬ್ಬರಾಯಗೆ ತಾಕೀತು ಮಾಡಿದರು, ಈ ವೇಳೆ, ತಾ.ಪಂ. ಸದಸ್ಯ ಪುಟ್ಟಣ್ಣ ಮಾತನಾಡಿ,

     ಇತ್ತೀಚೆಗೆ ಬಿ. ಸಿ. ಎಂ. ಕಛೇರಿಯಲ್ಲಿನ ಮಹಿಳಾ ಕಂಪ್ಯೂಟರ್ ಅಪರೇಟರ್ ರೊಬ್ಬರನ್ನು ನಿಲಯಪಾಲಕ ಚಂದ್ರಾನಾಯ್ಕ ಎನ್ನುವರು ದೌರ್ಜನ್ಯ ಎಸಗಿ ಆ ಯುವತಿಯನ್ನು ಹೊಡೆದಿದ್ದು , ಸರ್ಕಾರಿ ಕಛೇರಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದರೂ ನೀವು ಮತ್ತು ಜಿಲ್ಲಾ ಬಿ.ಸಿ.ಎಂ. ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲಾ ಎಂದು ಇಲಾಖಾಧಿಕಾರಿ ಸುಬ್ಬರಾಯ ವಿರುದ್ದ ಕೆಂಡಾಮಂಡಲರಾದರು, ಇದೇ ಚಂದ್ರಾನಾಯ್ಕ 4 ವಸತಿನಿಲಯಗಳ ಉಸ್ತುವಾರಿ ವಹಸಿಕೊಂಡಿದ್ದು,

      ಕನಿಷ್ಟ ಪಕ್ಷ 2 ದಿನಕೊಮ್ಮೆಯಾದರೂ ಈತ ವಸತಿನಿಲಯಗಳಿಗೆ ಬೇಟಿ ನೀಡುವುದಿಲ್ಲ ಮಕ್ಕಳ ಉಸ್ತುವಾರಿಯಲ್ಲಿ ಬೇಜವಾಬ್ದಾರಿ ವಹಿಸುತ್ತಿದ್ದು, ಕಳೆದಬಾರಿ ಸಚಿವರು ಇತನಿಗೆ ಬುದ್ದಿ ಹೇಳಿ ಕಳಿಹಿಸಿದ್ದರೂ ಇತನ ವರ್ತನೆ ಸರಿಮಾಡಿಕೊಂಡಿಲ್ಲ, ಅನೇಕ ಬಾರಿ ದೂರುಗಳು ಬಂದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ,ಇಂತಹ ನಿಲಯಪಾಲಕರನ್ನು ಬೇರೆ ತಾಲ್ಲೂಕಿಗೆ ವರ್ಗಾವಣೆ ಮಾಡಿ ಎಂದು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ ಗುಡುಗಿದರು.

      ಇದಕ್ಕೆ ಧನಿ ಗೂಡಿಸಿದ ತಾ.ಪಂ. ಸದಸ್ಯ ನರಸಿಂಹ, ಪಟ್ಟಣದಲ್ಲಿರುವ ಬಿ.ಸಿ.ಎಂ. ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳು ಕ್ರೀಕೆಟ್ ಬೆಟ್ಟಿಂಗ್ ಆಡುತ್ತಿದ್ದರೂ ನಿಲಯ ಪಾಲಕರೂ ಕ್ಯಾರೆ ಎನ್ನುವುದಿಲ್ಲ ಎಂದು ರೇಗಿದರು. ಐ.ಜೆ ನಾಗರಾಜ್ ಮಾತನಾಡಿ, ರೊಪ್ಪ ಸೇರಿದಂತೆ ಕೆಲ ಗ್ರಾ.ಪಂ.ಗಳಲ್ಲಿ ವಸತಿ ಯೋಜನೆಯಲ್ಲಿ ಮೂಂಜೂರಾದ ವರ್ಕ ಆರ್ಡರನ್ನು ನೀಡದೇ ಲಂಚ ಕೊಟ್ಟವರಿಗೆ ಮನೆ ಮೂಂಜೂರಾತಿ ಪತ್ರವನ್ನು ನೀಡುತ್ತಿದ್ದು, ಈ ಬಗ್ಗೆ ತಾಲ್ಲೂಕಿನ ಎಲ್ಲಾ ಗ್ರಾ.ಪಂ, ಗಳಿಗೂ ಬೇಟಿ ನೀಡಿ ತನಿಖೆ ಕೈಗೊಳ್ಳಬೇಕು ಎಂದು ಇ.ಓ. ನರಸಿಂಹಮೂರ್ತಿಗೆ ಸೂಚಿಸಿದರು.

      ಕೃಷಿ ಇಲಾಖೆಯಲ್ಲಿ ಲಂಚಗುಳಿತನ ಹೆಚ್ಚಾಗಿದ್ದು ಹಣ ಕೊಟ್ಟವರಿಗೆ ಕೃಷಿ ಹೊಂಡಗಳ ಬಿಲ್ ನೀಡುತ್ತಿದ್ದೀರಾ, ಹಣ ನೀಡಲಿಲ್ಲ ಎಂದರೆ ಕೃಷಿ ಇಲಾಖೆಯಲ್ಲಿ ಯಾವುದೇ ಸೌಲಭ್ಯ ಸಿಗುವುದಿಲ್ಲ ಎಂದು ಕೃಷಿ ಅಧಿಕಾರಿ ಪುಟ್ಟರಂಗಯ್ಯ ವಿರುದ್ದ ತಾ.ಪಂ. ಸದಸ್ಯ ನರಸಿಂಹ ತೀವ್ರ ವಾಗ್ದಾಳಿ ನಡೆಸಿದಾಗ, ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದಾಗ ತಾ.ಪಂ. ಸದಸ್ಯ ಗೋವಿಂದಪ್ಪ, ಮತ್ತು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮಂತರಾಯಪ್ಪ ಧನಿಗೂಡಿಸಿ, ಉದ್ಯೋಗ ಖಾತ್ರಿಯಲ್ಲಿ ನಿರ್ಮಾಣ ಮಾಡಿರುವ ಕಾಂಗಾರಿಗಳಲ್ಲಿ ಯೂ ಸಹ ಅವ್ಯವಹಾರ ಎಸಗಿದ್ದು, ಸಂಪೂರ್ಣ ತನಿಖೆ ಮಾಡಲು ಸಭೆಯಲ್ಲಿ ತಿರ್ಮಾನಿಸಲಾಯಿತು.

       ಶಿರಾರಸ್ತೆಯ ಮಾರ್ಗದಲ್ಲಿರುವ ಮತ್ತು ಟೋಲ್ ಗೇಟ್ ಬಳಿ ಇರುವ ತಾ.ಪಂ. ಅಂಗಡಿಮಳಿಗೆಗಳ ಬಾಡಿಗೆ ಹೆಚ್ಚು ಮಾಡಲು ಹಾಗೂ ಕೆ.ಜಿ.ಬಿ. ಬ್ಯಾಂಕುಗಳಿಗಾಗಿ ನಾಗಲಮಡಿಕೆ, ಕೆ.ಟಿ.ಹಳ್ಳಿ. ಸಿ.ಕೆ.ಪುರ, ನ್ಯಾಯದಗುಂಟೆ ಗ್ರಾಮಗಳಲ್ಲಿರುವ ತಾ.ಪಂ. ನಿಂದ ಕಟ್ಟಡಗಳನ್ನು ನಿರ್ಮಾಣ ಕಡಿಮೆ ಬಾಡಿಗೆಗೆ ನೀಡಿದ್ದು ಕನಿಷ್ಟ 5 ಸಾವಿರ ಬಾಡಿಗೆ ನಿಗದಿ ಮಾಡಬೇಕು ಮತ್ತು ಪೆನುಕೊಂಡ ರಸ್ತೆಯ ಮಾರ್ಗದಲ್ಲಿರುವ ನೂತನ ಅಂಗಡಿ ಮಳಿಗೆಗಳ ಹರಾಜಿನಲ್ಲಿ ಪೂರ್ತಿ ಹಣ ಕಟ್ಟದೆ ಇರುವವರ ಅಡ್ವಾನ್ಸ್ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಭೆಯಲ್ಲಿ ತಿರ್ಮಾನಿಸಲಾಯಿತು,

      ಸಮಾಜಕಲ್ಯಾಣ ಇಲಾಖೆಯ ಶಿವಣ್ಣ, ಎಸ್.ಟಿ. ಇಲಾಖಾಧಿಕಾರಿ ದಿವಾಕರ್, ಬಿ.ಇ.ಓ. ಸಿದ್ದಗಂಗಯ್ಯ, ಅಕ್ಷರದಾಸೋಹ ಸಹಾಯಕ ನಿದೇರ್ಶಕ ಹನುಮಂತರಾಯಪ್ಪ, ಸಿ.ಡಿ.ಪಿ.ಓ. ಇಲಾಖೆಯ ರಕೀಬ್, ರೇಷ್ಮೆ ಇಲಾಖೆಯ ರಂಗನಾಥ್, ತಮ್ಮ ಇಲಾಖೆಗಳ ಪ್ರಗತಿಯನ್ನು ವಿವರಿಸಿದರು. ಅಲ್ಪಸಂಖ್ಯಾತ ಇಲಾಕೆಯ ಮುಜಾಮಿಲ್, ಸಿಬ್ಬಂದಿ ಕುಮಾರ್, ಪಾಷಾ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link