ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿಗಳ ವಶ

ಹರಪನಹಳ್ಳಿ

    ತಾಲ್ಲೂಕಿನ ತುಂಗಭದ್ರ ನದಿ ತೀರದ ವಟ್ಲಹಳ್ಳಿ ಗ್ರಾಮದ ಬಳಿ ಅಕ್ರಮ ಮರಳು ಸಾಗಣಿಕೆ ಮಾಡುತ್ತಿದ್ದು ಮೂರು ಟಿಪ್ಪರ್ ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರಸನ್ನಕುಮಾರ ತಿಳಿಸಿದ್ದಾರೆ.

    ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ರಾತ್ರಿ ಗಸ್ತು ಮಾಡುತ್ತಿದ್ದಾಗ ಖಚಿತ ಮಾಹಿತಿ ಪಡೆದು ಅಕ್ರಮ ಮರಳು ತುಂಬುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ್ದಾರೆ. ಅಕ್ರಮ ಮರಳು ತುಂಬುತ್ತಿದ್ದ 9ಕ್ಕೂ ಅಧಿಕ ಜನರು ಅಧಿಕಾರಿಗಳನ್ನು ಕಂಡ ಪರಾರಿಯಾಗಿದ್ದಾರೆ. ಮರಳು ತುಂಬಿದ್ದ ಟಿಪ್ಪರ್ ಲಾರಿಗಳನ್ನು ಹಾಗೂ ಸಾಮಗ್ರಿಗಳನ್ನು ವಶ ಪಡಿಸಿಕೊಂಡು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

     ಕಂದಾಯ ಇಲಾಖೆಯ ನೀರಿಕ್ಷಕ ದರಸಪರ ರಾಜಪ್ಪ, ಗ್ರಾಮ ಲೆಕ್ಕಾಧಿಕಾರಿ ಸಿದ್ದೇಶ್, ಗ್ರಾಮ ಸಹಾಯಕ ತಳವಾರ ರಾಜಪ್ಪ, ಮಹಂತೇಶ್, ಮಂಜಪ್ಪ ಹಾಗೂ ಇತರರು ದಾಳಿಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link