ತುಮಕೂರು:
ತಾಲ್ಲೂಕಿನ ಗೇರಹಳ್ಳಿ ಗ್ರಾಮದ ಬಳಿ ಇರುವ ಗೋಡನ್ದ ಒಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಕ್ಕಿಯನ್ನು ಖಚಿತ ಮಾಹಿತಿ ಮೇರೆಗೆ ತುಮಕೂರು ಗ್ರಾಮಾಂತರ ಪೊಲಿಸರು 227 ಕ್ವಿಂಟಾಲ್ 54 ಕೆಜಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಾದ ಬೆಂಗಳೂರಿನ ಶ್ರೀನಿವಾಸ ಕೆ.ಎನ್ ಮತ್ತು ಅನ್ಬು ಎಂಬುವವರನ್ನು ಬಂಧಿಸಿದ್ದಾರೆ.
ಆರೋಪಿ ಶ್ರೀನಿವಾಸ್ರವರು ಚಿಕ್ಕಗುಂಡಗಲ್ ಗ್ರಾಮದ ಬಳಿ ಇರುವ ಕುಮಾರಸ್ವಾಮಿ ಎಂಬುವವರಿಗೆ ಸೇರಿದ ಶ್ರೀ ಕೇಸರಿ ನಂದನ್ ರೈಸ್ಮಿಲ್ ನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 212 ಕ್ವಿಂಟಾಲ್, 79 ಕೆಜಿ, ಒಟ್ಟು-440 ಕ್ವಿಂಟಾಲ್ 33 ಕೆಜಿ ( 44 ಟನ್, 33 ಕೆಜಿ ) ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ