ಮಧುಗಿರಿ
ಲಾರಿಯಲ್ಲಿ ಗೊಬ್ಬರವನ್ನು ಕಾಣುವಂತೆ ಮಾಡಿ ಕೆಳಗೆ ಅಕ್ರಮವಾಗಿ ಮರಳು ತುಂಬಿ ಸಾಗಿಸುತ್ತಿದ್ದ ಸಾರ್ವಜನಿಕರ ಖಚಿತ ಮಾಹಿತಿ ಮೇರೆಗೆ ಪೊಲೀಸರು ಲಾರಿ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಸಿಪಿಐ ಅಂಬರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಪುರವರ ಗ್ರಾಮದ ಸಮೀಪ ಗೊಬ್ಬರ ತುಂಬಿ ಹೋಗುತ್ತಿದ್ದ ಕೆ.ಎ. 02 ಸಿ 6237 ಲಾರಿಯ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದಾಗ ಲಾರಿಯಲ್ಲಿ ಮೇಲೆ ಗೊಬ್ಬರ ಅದರ ಕೆಳಭಾಗದಲ್ಲಿ ಮರಳು ಇರುವುದು ಕಂಡು ಬಂದಿದೆ. ಲಾರಿಯು ಬ್ಯಾಲ್ಯದಿಂದ ಬೈರೇನಹಳ್ಳಿ ಮಾರ್ಗವಾಗಿ ಬೆಂಗಳೂರಿಗೆ ಮರಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಕೆಲ ತಿಂಗಳುಗಳ ಹಿಂದೆ ಉಪವಿಭಾಗಾಧಿಕಾರಿಯಾಗಿದ್ದ ಡಾ.ವೆಂಕಟೇಶಯ್ಯ ನವರು ಕೊಡಿಗೇನಹಳ್ಳಿ ಕೆಲಭಾಗದಲ್ಲಿ ಅಕ್ರಮವಾಗಿ ತಲೆ ಎತ್ತಿದ್ದ ಮರಳು ಅಡ್ಡೆಗಳ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಅಂದಿನಿಂದ ಇಂದಿನವರೆವಿಗೂ ಮರಳು ಸಾಗಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದರಿಂದ ಮರಳು ಲೂಟಿಕೋರರು ಇಂತಹ ವಾಮ ಮಾರ್ಗವನ್ನು ಕಂಡುಕೊಂಡಿದ್ದಾರೆಂದು ಕೊಡಿಗೇನಹಳ್ಳಿ ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ