ಅಕ್ರಮವಾಗಿ ಸಾಗಿಸುತ್ತಿದ್ದ ಶೇಂಗಾ ವಶ..!!

ಜಗಳೂರು :      ಸರ್ಕಾರ ಕೃಷಿ ಇಲಾಖೆ ಮೂಲಕ ಬಿತ್ತನೆಗೆ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಣೆ ಮಾಡುತ್ತಿರುವ ಶೇಂಗಾಕಾಯಿ ಚೀಲವನ್ನು ಅನುಮಾನಸ್ಪದವಾಗಿ ಸಾಗಾಟ ಮಾಡುತ್ತಿದ್ದ ಟಾಟಾ ಏಸ್ ವಾಹನವನ್ನು ತಾಲೂಕಿನ ಹಿರೇಮಲ್ಲನಹೊಳೆ ಸಮೀಪ ತಡೆದ ರೈತರು ಪೊಲೀಸರಿಗೆ ಒಪ್ಪಿಸಿದ್ದಾರೆ.

      ಬೆಳಗ್ಗೆ ಜಗಳೂರಿನಿಂದ ಟಾಟಾ ಏಸ್ ವಾಹನದಲ್ಲಿ ಸುಮಾರು 55 ಶೇಂಗಾ ಚೀಲಗಳನ್ನು ತುಂಬಿಕೊಂಡು ಬಿಜಿಕೆರೆ ಕಡೆ ಚಿಕ್ಕಮಲ್ಲನಹೊಳೆ ಮಾರ್ಗವಾಗಿ ತೆರಳುವಾಗ ರಸ್ತೆಯಲ್ಲಿದ್ದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಿರಂಜೀವಿ, ತಿಪ್ಪೇಸ್ವಾಮಿ, ಹಾಲೇಶ್, ದಿಬ್ಬದಹಳ್ಳಿ ಗಂಗಾಧರಪ್ಪ, ತಿಪ್ಪೇಸ್ವಾಮಿ ವಾಹನವನ್ನು ತಡೆದು ಶೇಂಗಾ ಚೀಲಗಳನ್ನು ಎಲ್ಲಿಗೆ ಕೊಂಡೊಯ್ಯುತ್ತಿರಾ ಎಂದು ಕೇಳಿದ್ದಾರೆ. ಎಣ್ಣೆ ಮಿಲ್‍ಗೆ ಹೋಗುತ್ತಿದೆ ಎಂದು ಚಾಲಕ ತಿಳಿಸಿದ್ದಾರೆ. ಕೂಡಲೇ ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಅವರಿಗೆ ಕರೆ ಮಾಡಿ ಶೇಂಗಾ ಅಕ್ರಮ ಸಾಗಿಸಲಾಗುತ್ತಿದೆ ಎಂದು ರೈತರು ದೂರಿದ್ದಾರೆ. ಸ್ಥಳಕ್ಕೆ ಪೊಲೀಸರನ್ನು ಕಳುಹಿಸಿದ ತಹಸೀಲ್ದಾರ್ ವಾಹನವನ್ನು ಜಪ್ತಿ ಮಾಡಿ ಜಗಳೂರು ಠಾಣೆ ತರಲಾಗಿದೆ.

ದಿನವಿಡಿ ಕಾದರು ಶೇಂಗಾ ಸಿಗುತ್ತಿಲ್ಲ:

       ಬಿತ್ತನೆ ಮಾಡಲು ರೈತರು ಇಲ್ಲಿನ ಎಪಿಎಂಸಿ ಆವರಣದ ಬೀಜ ವಿತರಣಾ ಕೇಂದ್ರದಲ್ಲಿ ಹಗಲು, ರಾತ್ರಿ ಸರದಿ ಸಾಲಿನಲ್ಲೂ ನಿಂತರೂ ಶೇಂಗಾ ಚೀಲ ಸಿಗದೇ ನೂರಾರು ರೈತರು ಕಷ್ಟ ಅನುಭವಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ರೈತರು ಅಧಿಕಾರಿಗಳು ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಇಂತಹ ಪರಿಸ್ಥಿತಿ ಇರುವಾಗ 55 ಶೇಂಗಾ ಚೀಲಗಳು ಮುಂಜಾನೆ ವೇಳೆ ಗಡಿ ತಾಲೂಕಿಗೆ ಸಾಗಾಣೆಯಾಗುತ್ತಿರುವುದು ರೈತರನ್ನು ಕೆರಳಿಸಿದೆ. ಈ ಬಗ್ಗೆ ತನಿಖೆ ನಡೆಸುವಂತೆ ರೈತ ಸಂಘಟನೆಗಳು ಒತ್ತಾಯಿಸಿವೆ.

ಪ್ರಕರಣ ದಾಖಲಿಸಿದ ಪೊಲೀಸರು:

        ಯಾವುದೇ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ ಶೇಂಗಾ ಕಾಯಿ ಚೀಲವನ್ನು ವಶಪಡಿಸಿಕೊಂಡ ಪೊಲೀಸರು ತಪ್ಪಿತಸ್ಥರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳದೇ ವಿಚಾರಿಸಿ ಕೈಬಿಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
“ ಜಪ್ತಿ ಮಾಡಿರುವ ಶೇಂಗಾ ಚೀಲಗಳು ರೈತರಿಗೆ ಸಂಬಂಧಪಟ್ಟಿದ್ದರೆ ಪರ್ಮಿಟ್ ಪರಿಶೀಲಿಸಿ ಕೊಡಿ, ಆದರೆ ದಾಖಲೆಗಳಿಲ್ಲದೇ ಇದ್ದರೆ ಅವರ ವಿರುದ್ದ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಅಕ್ರಮವಾಗಿ ಸಾಗಾಟವಾಗುತ್ತಿರುವ ಬಗ್ಗೆ ರೈತರು ಹಲವು ಬಾರಿ ದೂರು ನೀಡಿದ್ದಾರೆ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲಾಗುವುದು’

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap