ಅಕ್ರಮ ಗಾಂಜಾ ವಶ

ಚಿಕ್ಕನಾಯಕನಹಳ್ಳಿ

         ತಾಲ್ಲೂಕಿನ ಹಂದನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗುಲಿ ಹಳೇಹಟ್ಟಿಯ ಗೋಪಾಲಯ್ಯ ಎನ್ನುವವರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದಾರೆ ಎಂಬ ದೂರಿನ ಮೇಲೆ ಸಿ.ಪಿ.ಐ ಸುರೇಶ್ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ.
ಗಾಂಜಾ ಬೆಳೆಯುತ್ತಿದ್ದ ಪ್ರದೇಶ ಸರ್ಕಾರಿ ಗೋಮಾಳ ಎಂದು ತಿಳಿದು ಬಂದಿದ್ದು 10 ಗಿಡಗಳಿಂದ 5 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ . ಚಿ.ನಾ.ಹಳ್ಳಿ ಪಿ.ಎಸ್.ಐ ಮಂಜುನಾಥ್, ಹಂದನಕೆರೆ ಪಿಎಸ್‍ಐ ನರಸಿಂಹಮೂರ್ತಿ ಹಾಗೂ ತಹಸೀಲ್ದಾರ್ ಸೋಮಪ್ಪಕಡಕೋಳ ಸ್ಥಳ ಪರಿಶೀಲಿಸಿದ್ದಾರೆ.

       ಈ ಸಂಬಂಧ ಹಂದನಕೆರೆ ಪೊಲೀಸರು ಮಾದಕ ವಸ್ತು ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದರಿ ಗೋಪಾಲಯ್ಯ ಪರಾರಿಯಾಗಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link