ಸುತ್ತೋಲೆಗಳ ಅಸಮರ್ಪಕ ಭಾಷಾಂತರವೇ ಗೊಂದಲಗಳಿಗೆ ಕಾರಣ : ಷ .ಶೆಟ್ಟರ್

ಬೆಂಗಳೂರು

  ಸರ್ಕಾರಗಳು ಹೊರತರುವ ಕೆಲ ಸುತ್ತೋಲೆಗಳು ಭಾಷಾಂತರವಾಗದಿರುವುದರಿಂದ ಜನರಿಗೇ ಅರ್ಥವೇ ಆಗುವುದಿಲ್ಲ ಮುಂದಿನ ದಿನಗಳಲ್ಲಾದರೂ, ಇದನ್ನು ಸುಧಾರಣೆ ಮಾಡಬೇಕಾದ ಅಗತ್ಯವನ್ನು ಇತಿಹಾಸ ತಜ್ಞ ಷ.ಶೆಟ್ಟರ್ ಅವರು ಪ್ರತಿಪಾದಿಸಿದರು.

   ನಗರದ ಅರಮನೆ ರಸ್ತೆಯ ಜೈನ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕೆ.ಎಸ್.ನರಸಿಂಹಮೂರ್ತಿ ಟ್ರಸ್ಟ್ ಆಯೋಜಿಸಿದ್ದ, ಅಂತರರಾಷ್ಟ್ರೀಯ ದೇಶ ಭಾಷೆಗಳ ವರ್ಷ-ಅನುವಾದದ ಅನು ಸಂಧಾನ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿ ಅತ್ಯಂತ ಗಂಭೀರ ಅಂಶವುಳ್ಳ ಸುತ್ತೋಲೆಗಳನ್ನು ಸರಿಯಾದ ರೀತಿಯಲ್ಲಿ ಭಾಷಾಂತರ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಷಾದಿಸಿದರು.

    ಆಂಗ್ಲ ಭಾಷೆಯ ಕೆಲ ಪದಗಳನ್ನು ತಿದ್ದುಪಡಿ ಮಾಡುವ ಸಹಾಸವನ್ನು ಅಮೆರಿಕ ಮಾಡಿದೆ. ಅಷ್ಟೇ ಅಲ್ಲದೆ, ಹೊಸ ಸಾಹಿತ್ಯ ವನ್ನು ಹುಟ್ಟು ಹಾಕಿದೆ. ಆದರೆ, ಅಮೆರಿಕ ದೇಶಕ್ಕಿಂತ ನಾವು ಮೊದಲು ಆಂಗ್ಲವನ್ನು ಪರಿಚಯ ಮಾಡಿಕೊಂಡರೂ , ಯಾವುದೇ ಬದಲಾವಣೆ ಗೆ ಮುಂದಾಗಿಲ್ಲ. ಇಂಗ್ಲಿಷ್ ಶಿಕ್ಷಣದಲ್ಲೂ ಕ್ರಾಂತಿಕಾರಿ ಬದಲಾವಣೆ ಆಗಿಲ್ಲ ಎಂದರು.

    ಭಾಷಾಂತರ ಮಾಡಿದ ಕೃತಿಗಳಲ್ಲಿ ನಮಗೆ ಮೂಲ ಭಾವನಾತ್ಮಕ ದೊರೆಯಲು ಸಾಧ್ಯವಿಲ್ಲ. ಕೇವಲ ಮಾಹಿತಿ ಆಧಾರದಲ್ಲಿಟ್ಟುಕೊಳ್ಳಬಹುದು. ಅಲ್ಲದೆ, ಶಾಸ್ತ್ರಿಯ ಗ್ರಂಥಗಳನ್ನು, ಮಹಾಭಾರತ-ರಾಮಾಯಣ ಕಾವ್ಯವನ್ನು ಭಾಷಾಂತರ ಮಾಡಿದರೂ, ಅದರ ಮೂಲ ಓದುಗ ಆಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

   ಭಾಷೆ ನಮ್ಮ ಯೋಚನೆಗಳನ್ನು ನಿಯಂತ್ರಿಸುತ್ತದೆ. ಯೋಚನೆಗಳ ಮಿತಿ ಭಾಷೆಯ ಮಿತಿ ಕೂಡ ಹೌದು. ಭಾಷಾಂತರ ಕೇವಲ ಪದಗಳ ಅರ್ಥೈಸುವಿಕೆ ಮಾತ್ರವಲ್ಲ, ಅದೊಂದು ಒಂದು ಸಂಸ್ಕೃತಿಯು ಮತ್ತೊಂದು ಸಂಸ್ಕೃತಿಯ ಜತೆಗೆ ನಡೆಸುವ ಸಂವಾದ ಕೂಡ ಆಗಿರುತ್ತದೆ. ಆದ್ದರಿಂದ, ಭಾಷೆಯ ಸಂಸ್ಕೃತಿಯನ್ನು ಹಿಡಿಯದಿದ್ದರೆ ಭಾಷಾಂತರ ಸಾಧ್ಯವಿಲ್ಲ ಎಂದರು.ವಿಚಾರಸಂಕಿರಣ ಅಧ್ಯಕ್ಷತೆಯನ್ನು ಬಹುಮುಖಿ ಚಿಂತಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಜೈನ್ ವಿವಿಯ ಉಪಕುಲಪತಿ ಡಾ.ಸಂದೀಪ ಶಾಸ್ತ್ರಿ, ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link