8 ತಿಂಗಳಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ಚಿತ್ರಣವೇ ಬದಲಾಗಲಿದೆ : ಶಾಸಕ

ಜಗಳೂರು:

     ಪಟ್ಟಣವನ್ನು ಮಾಧರಿ ನಗರವನ್ನಾಗಿ ಮಾಡುವ ಗುರಿ ಹೊಂದಲಾಗಿದ್ದು, ಇನ್ನು ಎಂಟು ತಿಂಗಳಲ್ಲಿ ಜಗಳೂರು ಪಟ್ಟಣ ಪಂಚಾಯಿತಿ ಚಿತ್ರಣವೇ ಬದಲಾಗಲಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

     ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಬುಧುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರಿಗೆ ಸಮವಸ್ತ್ರ, ಸಾಧನ ಸಲಕರಣೆ ಮತ್ತುಸುರಕ್ಷ ದರಿಸು ವಿತರಣೆ ಕಾರ್ಯಕ್ರಮ ಹಾಗೂ ಘನ ತ್ಯಾಜ್ಯ ನಿರ್ವಾಹಣೆಯ 3 ಟಾಟಾ ಏಸ್ ವಾಹನಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗಸಹಿಸಿ ಅವರು ಮಾತನಾಡಿದರು.ಪಟ್ಟಣದ ಅಭಿವೃದ್ಧಿಗೆ ಅನುಧಾನ ತರುವ ಮೂಲಕ ವಿವಿಧ ಕಾಮಗಾರಿಗಳ ಕೆಲಸಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿವೆ. ಪಟ್ಟಣದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಸದಸ್ಯರುಗಳು ಸಹಕಾರ ನೀಡಬೇಕು. ಕೊರೋನಾ ಅಂಟು ರೋಗವಾದರೂ ಅದರ ಬಗ್ಗೆ ಎದರಬಾರದು .ನಮ್ಮ ಜಿಲ್ಲೆಯಲ್ಲಿ ಎಲ್ಲಿಯೂ ಕೋರೋನಾ ಪ್ರಕರಣಗಳು ಕಂಡು ಬಂದಿಲ್ಲ. ಮುಂಜಾಗೃತ ಕ್ರಮ ಕೈಗೊಳ್ಳಬೇಕು.

   ಸ್ವಚ್ಚತೆ ಪೌರಕಾರ್ಮಿಕರು ತಮಗೆ ನೀಡಿರುವ ಸಮ ವಸ್ತ್ರವನ್ನು ಬಳಸಿಕೊಂಡು ಕೆಲಸ ನಿರ್ವಹಿಸಬೇಕೆಂದರು .ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಚಾಲನೆಯಲ್ಲಿದ್ದು, 6 ಕಿ.ಮೀ. ವ್ಯಾಪ್ತಿಯಲ್ಲಿ ಕೆಲಸ ನಡೆಯುತ್ತಿದೆ. ಮಳೆಗಾಲದ ಹೊತ್ತಿಗೆ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತರುವ ಗುರಿ ಹೊಂದಿದ್ದೇವೆ ಎಂದರು.

    ಈ ಸಂದರ್ಭದಲ್ಲಿ ತಹಶೀಲ್ದಾರ್ ಹುಲ್ಲಮನೆ ತಿಮ್ಮಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಬಣಕಾರ, ಪಟ್ಟಣ ಪಂಚಾಯಿತಿ ಸದಸ್ಯರಾದ ಆರ್.ತಿಪ್ಪೇಸ್ವಾಮಿ, ದೇವರಾಜ್, ರಮೇಶ್, ರವಿಕುಮಾರ್, ಷಕೀಲ್ ಅಹಮ್ಮದ್‍ಖಾನ್, ಲುಕ್ಮಾನ್‍ಖಾನ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ಪಾಪಣ್ಣ, ಮುಖಂಡರಾದ ಬಿಸ್ತುವಳ್ಳಿ ಬಾಬು, ಆರೋಗ್ಯ ನಿರೀಕ್ಷಕ ಕಿಫಾಯಿತ್, ಇಂಜಿನಿಯರ್, ಪ.ಪಂ.ಸದಸ್ಯರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link