ರಾಯಚೂರು :
ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ವೋಟ್ ಮಾಡಿ ಎಂದು ಕೇಳುವ ಬಿಜೆಪಿಯಲ್ಲಿ ನರೇಂದ್ರ ಮೋದಿಯಷ್ಟೇ ಗಂಡು, ಉಳಿದವರೆಲ್ಲ ಜೋಗಮ್ಮಗಳು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದ್ದಾರೆ.
ಸಿಂಧನೂರಿನ ತಾಲೂಕಿನ ಜವಳಾಗೇರಾ ಗ್ರಾಮದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ 543 ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದರೂ ಮೋದಿಗೆ ವೋಟ್ ಹಾಕಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಬರೀ ಮೋದಿಯ ಹೆಸರಷ್ಟೇ ಹೇಳುವುದಾದರೆ ಮೋದಿಯಷ್ಟೇ ಗಂಡು, ಉಳಿದವರೆಲ್ಲಾ ಜೋಗಮ್ಮಗಳೇನು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. !
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ