ಮುಂಬರುವ ವರ್ಷದಲ್ಲಿ 2 ಲಕ್ಷ ಉದ್ಯೋಗ ಸೃಷ್ಠಿ:ಪರಮೇಶ್ವರ್

ತುಮಕೂರು

        ಬೆಂಗಳೂರು- ತುಮಕೂರು-ವಸಂತನರಸಾಪುರ ಸಂಪರ್ಕದ ಸಬ್ ಅರ್ಬನ್ ರೈಲು ಇಲ್ಲವೆ ಮೆಟ್ರೋ ಯೋಜನೆ ಅನುಷ್ಠಾನಕ್ಕೆ ಗಂಭೀರ ಪ್ರಯತ್ನ ನಡೆದಿದೆ. ಈ ಮಹತ್ವದ ಯೋಜನೆಯ ಸಾಧಕ ಬಾಧಕಗಳ ಚರ್ಚೆ ನಡೆದಿದೆ. ಇನ್ನು ಐದಾರು ವರ್ಷಗಳಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 50 ಸಾವಿರ ಕೋಟಿ ರೂಗಳ ಬಂಡವಾಳದ ಉದ್ದಿಮೆಗಳು ಸ್ಥಾಪನೆಯಾಗಲಿವೆ, ಸುಮಾರು ಎರಡು ಲಕ್ಚ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಹೇಳಿದರು.

      ನಗರದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಸಂತನರಸಾಪುರದ ಚೆನ್ನೈ, ಬೆಂಗಳೂರು ಕೈಗಾರಿಕಾ ನೋಡ್ ಕಾರಿಡಾರ್ ಅಭಿವೃದ್ಧಿ, ಇಂಡಸ್ಟ್ರೀ ಟೌನ್‍ಶಿಪ್ ಸ್ಥಾಪನೆ ಮಾಡಲಾಗುತ್ತಿದೆ. ವಸಂತನರಸಾಪುರ, ತುಮಕೂರು, ಬೆಂಗಳೂರು, ಹಾಸನ, ರಾಮನಗರ ಮಾರ್ಗವಾಗಿ ರೇಲಾ ಆಧಾರಿತ ಸಾಗಾಣಿಕ ವ್ಯವಸ್ಥೆ ಮಾಡಲಾಗುವುದು ಎಂದರು.

        ರಾಜ್ಯ ಸರ್ಕಾರದ ಈ ಸಾಲಿನಲ್ಲಿ ಜನಪರ, ರೈತಪರ, ಅಭಿವೃದ್ಧಿಪರವಾದ ಬಜೆಟ್ ಮಂಡಿಸಿದೆ. ತುಮಕೂರು ಜಿಲ್ಲೆಗೆ ಹೆಚ್ಚಿನ ಹಣ ನೀಡಬೇಕೆಂದು ತಾವು ಮುಖ್ಯಮಂತ್ರಿಗಳನ್ನು ಮಾಡಿದ್ದು ಅದರ ಫಲವಾಗಿ ಈ ಬಾರಿ ಪ್ರಮುಖ ಯೋಜನೆಗಳಿಗೆ ಆದ್ಯತೆ ದೊರಕಿದೆ ಎಂದು ಹೇಳಿದರು.

        13,500 ಕೋಟಿ ರೂ ಗಳ ಎತ್ತಿನ ಹೊಳೆ ಯೋಜನೆಯ ಕೆಲಸ ಆರಂಭವಾಗಿದೆ. ಈ ಯೋಜನೆಯಡಿ ಕೊರಗೆರೆ ತಾಲ್ಲೂಕು ಬೈರಗೊಂಡ್ಲು ಜಲಾಶಯ ನಿರ್ಮಾಣ ಮಾಡಲಾಗುತ್ತಿದ್ದು, ಜಲಾಶಯಕ್ಕೆ ಭೂಮಿ ಮುಳುಗಡೆಯಾಗುವ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಸಮಗ್ರ ಅಭಿವೃದ್ದಿಗಾಗಿ ಬಜೆಟ್‍ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ ಎಂದರು.

       ಈ ಯೋಜನೆಗೆ ಬೈರಗೊಂಡ್ಲು ರೀತಿ ದೊಡ್ಡಬಳ್ಳಾಪುರ ಬಳಿಯೂ ಜಲಾಶಯ ನಿರ್ಮಾಣ ಮಾಡಲಾಗುತ್ತಿದೆ. ಎರಡೂ ಜಲಾಶಯಕ್ಕೆ 5ಸಾವಿರ ಎಕರೆ ಭೂಮಿ ಮುಳುಗಡೆಯಾಗುತ್ತಿದೆ. ಭೂಮಿ ನೀಡಿದ ಎರಡೂ ಕಡೆಯ ರೈತರಿಗೆ ಒಂದೇ ರೀತಿಯ ಪರಿಹಾರ ಮೊತ್ತ ನೀಡಲಾಗುವುದು ಎಂದು ಹೇಳಿದರು.

        ಹೆಮಾವತಿ ನಾಲೆ ಆಧುನೀಕರಣಕ್ಕಾಗಿ 200 ಕೋಟಿ ರೂ, ಕೊರಟಗೆರೆ, ಮಧುಗಿರಿ, ಪಾವಗಡ, ತುಮಕೂರು ತಾಲ್ಲೂಕಿನ ಸಣ್ಣ ನೀರಾವರಿ ಕೆರೆಗಳ ಸಮಗ್ರ ಅಭಿವೃದ್ಧಿ ನೀರಾವರಿಗಾಗಿ 50 ಕೋಟಿ ರೂ, ಶಿರಾ ತಾಲ್ಲೂಕಿನ ಅಂತರ್ಜಲ ಅಭಿವೃದ್ದಿಗೆ 20 ಕೋಟಿ ರೂ, ತುರುವೇಕೆರೆ ತಾಲ್ಲೂಕುಮಾಯಸಂದ್ರದ ಆದಿಶಕ್ತಿ ವೃದ್ದಾಶ್ರಮಕ್ಕೆ 2ಕೋಇ ರೂ, ತಿಪಟೂರಿನಲ್ಲಿ ಹಾಸ್ಯ ನಟ ದ. ನರಸಿಂಹರಾಜು ಅವರ ಹೆಸರಿನಲ್ಲಿ ಸ್ಮಾರಕ ಸಭಾ ಮಂದಿರನಿರ್ಮಾಣಕ್ಕೆ 2 ಕೋಟಿ ರೂ.ಗಳಮ್ಮು ಬಜೆಟ್‍ನಲ್ಲಿ ಮೀಸಲಿಡಲಾಗಿದೆ ಎಂದಿ ಡಾ. ಪರಮೇಶ್ವರ್ ಹೇಳಿದರು.

         ಬೆಂಗಳೂರಿನ ಕಿದ್ವಾಯ್‍ಕ್ಯಾನ್ಸರ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದೇ ಸೌಲಭ್ಯಗಳ ಕ್ಯಾನ್ಸರ್ ಆಸ್ಪತ್ರೆಗಳನ್ನು ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪನೆ ಮಾಡುವ ಉದ್ದೇಶವಿದ್ದು ಮೊದಲ ಹಂತದಲ್ಲಿ ತುಮಕೂರಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 60 ಕೋಟಿ ರೂ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ಹಾಗೂ 10 ಕೊಟಿ ರೂ ವೆಚ್ಚದಲ್ಲಿ ಡಿಜಿಟಲ್ ಸ್ತನ ರೇಖನ ವ್ಯವಸ್ಥೆ ಪ್ರಾರಂಭಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

        ತುಮಕೂರು ನಗರದ ಅಭಿವೃದ್ಧಿಗೆ ನಗರಪಾಲಿಕೆಗೆ 125 ಕೋಟಿ ರೂ, ನಗರದಲ್ಲಿ ಐಟಿ ಇನೋವೇಷನ್ ಸೆಂಟರ್ ಸ್ಥಾಪನೆ ಮಾಡಲು 7 ಕೋಟಿ ರೂ, ಸಿದ್ಧಗಂಗಾಮಠದಲ್ಲಿ ಪ್ರಾರ್ಥನಾ ಮಂದಿರಕ್ಕೆ 5 ಕೋಟಿ ರೂ, ಮೊರಾರ್ಜಿ ಮುಸ್ಲಿಂ ಹೆಣ್ಣುಮಕ್ಕಳ ವಸತಿ ಶಾಲೆಗೆ 20 ಕೋಟಿ ರೂ, ಹೊಸ ಉದ್ದಿಮೆಗಳ ಸ್ಥಾಪನೆಗೆ 7 ಕೋಟಿ ರೂ ವೆಚ್ಚದಲ್ಲಿ ನಾವಿನ್ಯತೆ ಕೇಂದ್ರ ಸ್ಥಾಪನೆಗೆ ಬಜೆಟ್‍ನಲ್ಲಿ ಹಣ ಮೀಸಲಿಡಲಾಗಿದೆ ಎಂದು ಹೇಳಿದರು.

        ಇದರ ಜೊತೆಗೆ ಜಿಲ್ಲೆಯ ನಾಲ್ಕು ಕಡೆ ಪರಿಶಿಷ್ಟಜಾತಿ ವಸತಿಶಾಲೆ ಸ್ಥಾಪನೆ ಮಾಡಲಾಗುತ್ತಿದೆ. ತುರುವೇಕೆರೆ ತಾಲ್ಲೂಕು ಮಣಿಚೆಂಡೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸಂಕೀರ್ನ. ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗದಲ್ಲಿ ಇಂದಿರಾಗಾಂಧಿ ವಸತಿ ಶಾಲೆ, ಗುಬ್ಬಿ ತಾ. ಮಾವಿನಹಳ್ಳಿಯಲ್ಲಿ ಡಾ. ಅಂಬೇಡ್ಕರ್ ವಸತಿ ಶಾಲೆ, ಚಿ ನಾ ಹಳ್ಳಿ ತಾ. ಹಂದನ ಕೆರೆಯಲ್ಲಿ ಡಾ. ಅಂಬೇಡ್ಕರ್ ವಸತಿ ಶಾಲೆ ಅಲ್ಲದೆ, ಕೊರಟಗೆರೆ ತಾ. ಕೋಳಾಲದಲ್ಲಿ ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಡಾ ಅಂಬೇಡ್ಕರ್ ವಸತಿ ಶಾಲೆ ನಿಮಾನ ಮಾಡಲಾಗುವುದು ಎಂದು ಡಾ. ಪರಮೇಶ್ವರ್ ಹೇಳಿದರು.

        ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಎಸ್ಪಿ ಡಾ. ಕೋನ ವಂಶಿಕೃಷ್ಣ, ಜಿಪಂ ಸಿಇಓ ಶುಭ ಕಲ್ಯಾಣ್, ಡಿಹೆಚ್‍ಓ ಡಾ ಚಂದ್ರಿಕಾ ಸುದ್ದಿಗೋಷ್ಠಿಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link