ಚಳ್ಳಕೆರೆ
ಕಳೆದ ಕೆಲವು ವರ್ಷಗಳಿಂದ ನಿರೀಕ್ಷೆಗೂ ಮೀರಿ ಹೆಚ್ಚಿನ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಚಳ್ಳಕೆರೆ ಕ್ಷೇತ್ರ ಈಗ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಪಡೆದಿದ್ದು, ಈಗಾಗಲೇ ಬಹು ವರ್ಷಗಳ ನಿರೀಕ್ಷೆಯಲ್ಲಿದ್ದ ಶ್ರೀರಂಗಪಟ್ಟಣ-ಬೀದರ್ ರಾಷ್ಟ್ರೀಯ ಹೆದ್ದಾರಿ 150/ಎ ಹೆಸರಿನಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದೆ.
ತಾಲ್ಲೂಕಿನ ಬುಡ್ನಹಟ್ಟಿ ಗ್ರಾಮದಿಂದ ಲಕ್ಷ್ಮೀಪುರ ಗೇಟ್ ತನಕ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿಗೆ ಇತ್ತೀಚಿಗಷ್ಟೇ ಚಾಲನೆ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧಿನ ಅಧಿಕಾರಿ ಜಿ.ಸಿದ್ದಪ್ಪ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಈ ರಾಷ್ಟ್ರೀಯ ಹೆದ್ದಾರಿ ಈ ಯೋಜನೆಯ ಎರಡು ಮತ್ತು ಮೂರನೇ ಭಾಗವೆಂದು ಪರಿಗಣಿಸಿ ಕಾಮಗಾರಿಯನ್ನು ಪ್ರಾರಂಭಿಸಿದ್ದು, ಮೊಳಕಾಲ್ಮೂರು ತಾಲ್ಲೂಕಿನ ಬೈರಾಪುರ ಗ್ರಾಮದಿಂದ ಚಳ್ಳಕೆರೆ ತನಕ ನಂ.2ರ ವಿಭಾಗ ಚಳ್ಳಕೆರೆಯಿಂದ ಹಿರಿಯೂರು ತನಕ ನಂ.3ರ ವಿಭಾಗ ಕಾಮಗಾರಿಯನ್ನು ನಡೆಸಲಿದೆ.
ಪ್ರಸ್ತುತ ಚಿಕ್ಕಮ್ಮನಹಳ್ಳಿಯಿಂದ ಬುಡ್ನಹಟ್ಟಿ ಮೂಲಕ ಬೈಪಾಸ್ ಮಾರ್ಗದಲ್ಲಿ ಎಲ್‍ಪಿ ಗೇಟ್ ಈ ರಸ್ತೆ ತಲುಪಲಿದ್ದು, ಈಗಾಗಲೇ ರಸ್ತೆ ವಿಸ್ತರಣಾ ಕಾರ್ಯಕ್ಕೆ ಚಾಲನೆ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಮಾರ್ಗದಲ್ಲಿ ಜಮೀನುಗಳನ್ನು ಈಗಾಗಲೇ ಪ್ರಾಧಿಕಾರಿ ವಶಕ್ಕೆ ಪಡೆದುಕೊಂಡು ಪರಿಹಾರವನ್ನು ಸಹ ನೀಡುತ್ತಿದೆ. ಸುಮಾರು 200ಕ್ಕೂ ಹೆಚ್ಚು ರೈತರು ಪರಿಹಾರವನ್ನು ಪಡೆದಿದ್ದು, ಬ್ಯಾಂಕ್ ಖಾತೆಯ ಮೂಲಕ ದಾಖಲಾತಿಗಳನ್ನು ನೀಡಿದ ಎರಡ್ಮೂರು ದಿನಗಳಲ್ಲಿ ಅವರ ಖಾತೆಗೆ ಪ್ರಾಧಿಕಾರದಿಂದ ಹಣ ಜಮಾವಾಗಲಿದೆ.
ರಾಷ್ಟ್ರೀಯ ಹೆದ್ದಾರಿ 150/ಎ ಕಾಮಗಾರಿಯ ಅಂದಾಜು ಮೊತ್ತ 3500 ಕೋಟಿ ಎನ್ನಲಾಗಿದ್ದು, ಬೈರಾಪುರದಿಂದ ಚಳ್ಳಕೆರೆ ಹೊರವಲಯದ ತನಕ ರಸ್ತೆ ಆಗಲೀಕರಣ ಮತ್ತು ಸಮತಟ್ಟು ಕಾಮಗಾರಿಯನ್ನು ಮಹರಾಷ್ಟ್ರದ ಮೂಲಕ ದೀಲೀಪ್ ಬಿಲ್ಡ್ ಕಾನ್ ಪಂಕನಿಗೆ ನೀಡಲಾಗಿದೆ. ಚಳ್ಳಕೆರೆಯಿಂದ ಹಿರಿಯೂರು ತನಕ ಪಿಎನ್‍ಸಿ ಕಂಪನಿ ರಸ್ತೆ ಅಗಲೀಕರಣ ಕಾಮಗಾರಿಯನ್ನು ಕೈಗೊಳ್ಳಲಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯ ಕಚೇರಿ ಹೊಸಪೇಟೆಯಲ್ಲಿದ್ದು, ಅವರ ಮೂಲಕವೇ ಈ ಎಲ್ಲಾ ಕಾಮಗಾರಿಗಳು ಚಾಲ್ತಿಯಲ್ಲಿವೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಜಮೀನು ಮತ್ತು ಮನೆಗಳನ್ನು ಕಳೆದುಕೊಂಡವರು ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಸಂಪೂರ್ಣ ದಾಖಲಾತಿಗಳನ್ನು ನೀಡಿದಲ್ಲಿ ಅವರಿಗೆ ಪರಹಾರದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಪ್ರಸ್ತುತ ಹೆದ್ದಾರಿ ಪ್ರಾಧಿಕಾರ ವಶಪಡಿಸಿಕೊಂಡ ಜಮೀನು ಒಂದು ಸ್ವಯರ್‍ಪೀಟ್‍ಗೆ 496 ರೂಗಳನ್ನು ಇಲ್ಲಿನ ಉಪನೊಂದಾವಣೆ ಅಧಿಕಾರಿಗಳ ಕಚೇರಿಯ ಸೂಚನೆ ಮೇರೆಗೆ ನಿಗದಿ ಪಡಿಸಿದ್ದು, ಅದೇ ರೀತಿ ಮೊತ್ತವನ್ನು ಫಲಾನುಭವಿಗಳಿಗೆ ಪಾವತಿ ಮಾಡುತ್ತಿದೆ.
ಪ್ರಸ್ತುತ ಚಳ್ಳಕೆರೆ ಕಾರ್ಯಾಲಯ ವ್ಯಾಪ್ತಿಗೆ ಹಿರಿಯೂರಿನಿಂದ ಬೈರಾಪುರದ ತನಕ ಸುಮಾರು 103 ಕಿ.ಮೀಟರ್ ವ್ಯಾಪ್ತಿ ಒಳಪಡುತ್ತಿದ್ದು, ಈ ರಸ್ತೆಗಳನ್ನು ಅಗಲೀಕರಣಗೊಳಿಸಲಾಗುತ್ತದೆ. ಚಳ್ಳಕೆರೆ ತಾಲ್ಲೂಕಿನ ಸಮಸ್ತ ಜನತೆ ಎರಡೂ ರಾಷ್ಟ್ರೀಯ ಹೆದ್ಧಾರಿ ಸದುಪಯೋಗವನ್ನು ಇನ್ನು ಹೆಚ್ಚು ಪಡೆದುಕೊಂಡು ಆರ್ಥಿಕ ಲಾಭದತ್ತ ಮುನ್ನಡೆಯಬಹುದಾದೆ. ಕಾರಣ, ರಾಷ್ಟ್ರೀಯ ಹೆದ್ಧಾರಿ ಪೂರ್ಣಗೊಂಡಲ್ಲಿ ಇಲ್ಲಿನ ಎಲ್ಲಾ ವ್ಯವಹಾರಗಳಿಗೆ ಹೆಚ್ಚಿನ ಉತ್ತೇಜನ ದೊರಕಲಿದೆ ಎಂಬುವುದು ಉದ್ಯಮಿಗಳ ಅಭಿಪ್ರಾಯವಾಗಿದೆ.
ಪ್ರಸ್ತುತ ಚಳ್ಳಕೆರೆ ನಗರದ ಬಳ್ಳಾರಿ ಮತ್ತು ಬೆಂಗಳೂರು ರಸ್ತೆಯ ಅಗಲೀಕರಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.
ಈಗಾಗಲೇ ಪ್ರಾಧಿಕಾರ ಒಟ್ಟು 100 ಅಡಿಗಳ ರಸ್ತೆ ಸಾರ್ವಜನಿಕರ ಉಪಯೋಗಕ್ಕೆ ಅವಶ್ಯಕವಾಗಿಬೇಕೆಂಬ ನಿರ್ಧಾರಕ್ಕೆ ಬಂದಿದ್ದು, ಅದೇ ರೀತಿ ಈಗಾಗಲೇ ಅಳತೆ ಮಾಡಿ ಗುರುತನ್ನು ಸಹ ಹಾಕಲಾಗಿದೆ. ಬಳ್ಳಾರಿ ರಸ್ತೆ ಅಗಲೀಕರಣಗೊಂಡಲ್ಲಿ ಚಳ್ಳಕೆರೆ ನಗರದ ಜನತೆ ಪ್ರತಿನಿತ್ಯ ವಾಹನ ಸಂಚಾರ ದಟ್ಟಣೆಯಿಂದ ಬಿಡುಗಡೆ ಹೊಂದುತ್ತಾರೆ. ಪ್ರತಿನಿತ್ಯ ಬಳ್ಳಾರಿ ರಸ್ತೆಯಲ್ಲಿ ಹಾದು ಹೋಗುವುದು ಎಂದರೆ ಎಲ್ಲರಿಗೂ ಪ್ರಯಾಸದ ಕೆಲಸವಾಗಿದ್ದು, ಅತಿ ವೇಗವಾಗಿ ಬಳ್ಳಾರಿ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಕೈಗೊಳ್ಳಬೇಕೆಂದು ಯುವ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್.ಎನ್.ಆದರ್ಶರಾಜ್, ತಾಲ್ಲೂಕು ಅಧ್ಯಕ್ಷ ಬಿ.ಪಾಪಣ್ಣ, ಪ್ರಗತಿಪರ ರೈತ ಆರ್.ಎ.ದಯಾನಂದಮೂರ್ತಿ, ಎಲ್‍ಐಸಿ ದುಗ್ಗಾವರ ರಂಗಸ್ವಾಮಿ ಬಳಗ ಒತ್ತಾಯಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ