ದೀಪಾವಳಿ ಶಾಪಿಂಗ್ ಕಾರ್ನಿವಲ್” ಗೆ ಚಾಲನೆ

ಬೆಂಗಳೂರು

       ದೀಪಾವಳಿ ಹಬ್ಬಕ್ಕೆ ಬೇಕಾದ ದೀಪಗಳು, ಬಟ್ಟೆಗಳು, ಕಲಾಕೃತಿಗಳು, ಮನೆಯನ್ನು ಸಿಂಗರಿಸಲು ಬೇಕಾಗಿರುವ ಎಲ್ಲಾ ಸಾಮಗ್ರಿಗಳು ಸಾಮಗ್ರಿಗಳು ಒಂದೇ ವೇದಿಕೆಯಲ್ಲಿ ಹಾಗೂ ಕೈಗೆಟಕುವ ದರದಲ್ಲಿ ದೊರೆಯುವಂತೆ ಮಾಡುವ ಉದ್ದೇಶದಿಂದ “ದೀಪಾವಳಿ ಶಾಪಿಂಗ್ ಕಾರ್ನಿವಲ್” ಗೆ ಇಂದು ಚಾಲನೆ ನೀಡಲಾಯಿತು.

ಮಾಜಿ ಸಭಾಪತಿ ಹಾಗೂ ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ. ಬಿ.ಎಲ್ ಶಂಕರ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ವಿವಿಧ ಭಾಗಗಳ ಕಲಾವಿದರ ಕೈಯಲ್ಲಿ ಅರಳಿರುವ ದೀಪಗಳು, ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತಿವೆ. ಇಂತಹ ಮೇಳಗಳಲ್ಲಿ ದೇಶದ ವಿವಿಧ ಕಲಾ ರಚನೆಯ ಕಲಾವಿದರ ಕಲಾಕೃತಿಗಳೂ ಕೈಗೆಟಕುವ ದರದಲ್ಲಿ ದೊರಕಲಿವೆ ಎಂದರು.

ಬೆಂಗಳೂರು ಉತ್ಸವದ ಆಯೋಜಕರಾದ ಅಪ್ತಾಬ್ ಮಾತನಾಡಿ, ದೀಪಾವಳಿ ಹಬ್ಬದ ಪ್ರಯುಕ್ತ ಒಂದೇ ವೇದಿಕೆಯಡಿ ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳು ನವೆಂಬರ್ 4 ವರೆಗೆ ಚಿತ್ರಕಲಾ ಪರಿಷತ್ ನಲ್ಲಿ ದೊರೆಯಲಿದೆ.

ದೀಪಾವಳಿಯ ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು, ಆಭರಣಗಳು, ಮೂರ್ತಿಗಳು, ಮನೆ ಮಂದಿಗೆ ಬೇಕಾದ ಬಟ್ಟೆಗಳು, ಸಿಹಿ ತಿಂಡಿಗಳು ಇಲ್ಲಿ ಲಭ್ಯವಿರಲಿವೆ. ದೇಶದ ಮೂಲೆ ಮೂಲೆಗಳಿಂದಲೂ ಕಲಾವಿದರ ಕೈಚಳಕದಲ್ಲಿ ತಯಾರಾಗಿರುವ ದೀಪಗಳು ಇಲ್ಲಿ ಪ್ರಮುಖ ಆಕರ್ಷಣೆಯಾಗಿರಲಿವೆ. ಲೋಹ, ಗಾಜು, ಕಲ್ಲು, ಮರ ಸೇರಿದಂತೆ ಹತ್ತು ಹಲವು ವಸ್ತುಗಳನ್ನು ಬಳಸಿ ರಚಿಸಲಾಗಿರುವ ದೀಪಗಳನ್ನು ಹಾಗೂ ಇನ್ನಿತರ ಕರಕುಶಲ ವಸ್ತುಗಳನ್ನು ಇಲ್ಲಿ ಕಲಾವಿದರು ಪ್ರದರ್ಶನ ಹಾಗೂ ಮಾರಾಟಕ್ಕಿಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap