ಹೊಸದುರ್ಗ:
ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಮುನ್ನುಡಿಯೊಂದಿಗೆ 2019-20 ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯ ಆವರಣದಲ್ಲಿ ಶುಕ್ರವಾರ ತಹಶೀಲ್ದಾರ್ ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡಿದರು.
ಈ ಮಾಹಿತಿ ರಥವು ತಾಲ್ಲೂಕಿನ ಪ್ರತೀ ಗ್ರಾಮಕ್ಕೂ ಭೇಟಿ ನೀಡಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿಯನ್ನು ನೀಡುತ್ತದೆ, ಪ್ರಸ್ತುತ ಇಲಾಖೆಯಲ್ಲಿ ರೈತರು ಯಾವುದೇ ಸೌಲಭ್ಯವನ್ನು ಪಡೆಯಬೇಕೆಂದರೆ ಫ್ರೂಟ್ಸ್ ಎಂಬ ತಂತ್ರಾಂಶದಲ್ಲಿ ತಮ್ಮ ಎಲ್ಲಾ ದಾಖಲಾತಿಗಳಾದ ವೈಯುಕ್ತಿಕ ಪಹಣಿ,ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಭಾವಚಿತ್ರಗಳನ್ನು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ನೀಡಿ ನೋಂದಾಯಿಸಿಕೊಳ್ಳಲು ಮನವಿ ಮಾಡಿದ ಅವರು ಪ್ರಸ್ತುತ ಈ ತಂತ್ರಾಂಶದಲ್ಲಿ ನೋಂದಾಯಿಸಿ ಕೊಳ್ಳದಿದ್ದರೆ ಬೀಜ, ಗೊಬ್ಬರ ಹಾಗೂ ಕೃಷಿ ಯಾಂತ್ರೀಕರಣ ಯೋಜನೆಗಳ ಸವಲತ್ತುಗಳು ರೈತರು ಪಡೆಯಲು ಸಾಧ್ಯವಾಗುವುದಿಲ್ಲವೆಂದು ಆದ್ದರಿಂದ ರೈತರು ಕೂಡಲೆ ಈ ಕುರಿತು ಜಾಗೃತರಾಗಬೇಕೆಂದು ಮನವಿ ಮಾಡಿದರು ಮತ್ತು ಹಾಲಿ ವರ್ಷವನ್ನು ಜಲಾಮೃತ ವರ್ಷವೆಂದು ಗುರುತಿಸಲಾಗಿದ್ದು ರೈತರು ನೀರಿನ ಸಂರಕ್ಷಣೆ ಕುರಿತು ಎಚ್ಚರ ವಹಿಸಬೇಕೆಂದು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಡಾ. ಎ.ಸಿ. ಮಂಜು ತಿಳಿಸಿದರು.
ಕಸಬಾ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶ್ರೀಮತಿ ಉಲ್ಫತ್ ಜೈಬಾ ಕೃಷಿ ಅಧಿಕಾರಿಗಳಾದ ಕುಮಾರಿ ಪವಿತ್ರ, ಇಲಾಖೆ ಸಿಬ್ಬಂದಿ ಹಾಜರಿದ್ದರು.