ಸಮಾಳ ನುಡಿಸಿ ಮೆರವಣಿಗೆಗೆ ಚಾಲನೆ ನೀಡಿದ ಡಿಸಿ

ದಾವಣಗೆರೆ:

     63ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾಡಳಿತದಿಂದ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ತಾಯಿ ಭುವನೇಶ್ವರಿಯ ಮೆರವಣಿಗೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಾಯಿ ಭುವನೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಸಮಾಳ ನುಡಿಸುವ ಮೂಲಕ ಚಾಲನೆ ನೀಡಿದರು.

      ನಗರದ ಪ್ರೌಢ ಶಾಲಾ ಮೈದಾನದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಿಲ್ಲಾ ಕ್ರೀಡಾಂಗಣ ತಲುಪಿ ಮುಕ್ತಾಯವಾಯಿತು.

      ಮೆರವಣಿಗೆಯಲ್ಲಿ ವೀರಗಾಸೆ, ಜಕ್ಕಲಿಗೆ, ಕಹಳೆ, ಡೊಳ್ಳು ಕುಣಿತ, ಹಲಗೆ ವಾದನ, ಮೈಸೂರು ನಗಾರಿ, ಗೊಂಬೆಕುಣಿತ, ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದ್ದವರು. ಅದರಲ್ಲೂ ಬೆಳ್ಳೂಡಿ ಶ್ರೀಬೀರಲಿಂಗೇಶ್ವರ ಡೊಳ್ಳು ಕುಣಿತ ತಂಡದಲ್ಲಿ ಕಲಾವಿರೊಬ್ಬರು ಡೊಳ್ಳು ಬಾರಿಸುತ್ತಲೇ ಬಾಯಿಯಿಂದ ನೆಗಿಲು ಹಿಡಿದು ವಿಶೇಷ ಗಮನ ಸೆಳೆಸದರು

       ಆರೋಗ್ಯ ಇಲಾಖೆ, ರೇಷ್ಮೆ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಆಯುಷ್ ಇಲಾಖೆ, ಕೆಎಸ್‍ಆರ್‍ಟಿಸಿ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಶಾಲೆಗಳು ತಮ್ಮ ತಮ್ಮ ಇಲಾಖೆಗೆ ಸಂಬಂಧಪಟ್ಟ ಜಾಗೃತಿ ಮೂಡಿಸುವ ಸ್ತಬ್ದಚಿತ್ರಗಳನ್ನು ಪ್ರದರ್ಶಿಸಿದರು. ರಕ್ತದಾನಿ ಮಹಡಿ ಮನೆ ಶಿವಕುಮಾರ್ ಮೈಯಿಗೆ ಬಣ್ಣ ಬಳಿದುಕೊಂಡು ರಕ್ತದಾನದ ಕುರಿತು ಜಾಗೃತಿ ಮೂಡಿಸಿದರು.

      ಸ್ತಬ್ಧಚಿತ್ರ ಪ್ರದರ್ಶಸಿದ ತಂಡಗಳಲ್ಲಿ ಆರೋಗ್ಯ ಇಲಾಖೆ, ಕೆಎಸ್‍ಆರ್‍ಟಿಸಿ ಮತ್ತು ಶ್ರೀಮತಿ ಗುರುಬಸಮ್ಮ ವಿ.ಚಿಗಟೇರಿ ಶಾಲೆ ಸ್ತಬ್ದಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದರು.

        ಈ ಸಂರ್ದಭದಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ಜಿ.ಪಂ. ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಉಪ ನಿರ್ದೇಶಕ ಕುಮಾರ್ ಬೆಕ್ಕೇರಿ,ಡಾ.ರಾಜಕುಮಾರ್ ಅಭಿಮಾನಿಗಳ ಬಳಗದ ಕೆ.ಜಿ.ಶಿವಕುಮಾರ್, ಸ್ಫೂರ್ತಿ ಸೇವಾ ಸಂಸ್ಥೆಯ ಎನ್.ಎಸ್.ರಾಜು ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link