ಕೇಂದ್ರದ ನೂತನ ಹಾಲು ನೀತಿಯಿಂದ ಹೆಚ್ಚಿದ ರೈತರ ಆತ್ಮಹತ್ಯೆ..!

ಬೆಂಗಳೂರು

    ವಿದೇಶದಿಂದ ಹಾಲು ಹಾಗೂ ಹಾಲಿನ ಉತ್ಪನ್ನ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ತೀವ್ರವಾಗಿ ವಿರೋಧಿಸಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ವಿದೇಶದಿಂದ ಹಾಲಿನ ಉತ್ಪನ್ನಗಳು ಅಮದಾದರೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

     ವಿದೇಶದಿಂದ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಅಂತಿಮ ಸಹಿ ಹಾಕಬೇಕಿದೆ. ಒಂದು ವೇಳೆ ಕೇಂದ್ರ ಸರ್ಕಾರ ಸಹಿ ಹಾಕಿದ್ದೇ ಆದಲ್ಲಿ ದೇಶದ ಹೈನುಗಾರಿಕೆ ಕೊನೆಯಾಗಲಿದೆ ಎಂದು ಸುದ್ದಿಗೋಷ್ಟಿಯಲ್ಲಿ ಆರೋಪ ಮಾಡಿದರು.

    ದೇಶದ ರೈತರು ಹೈನುಗಾರಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ದೇಶದಿಂದಲೇ ಹೈನುಗಾರಿಕೆ ಉತ್ಪನ್ನಗಳನ್ನು ರಫ್ತು ಮಾಡುವ ಸಾಮರ್ಥ್ಯ ನಮ್ಮ ದೇಶಕ್ಕಿದೆ. ಸದ್ಯ ಕೇಂದ್ರ ಮಾಡಿಕೊಳ್ಳಲು ಹೊರಟಿರುವ ಒಪ್ಪಂದದಿಂದ ವಿದೇಶದಿಂದ ಆಮದು ಮಾಡಿಕೊಳ್ಳಲೇ ಬೇಕಾಗುತ್ತೆ ಎಂದರು.

       ನ್ಯೂಜಿಲ್ಯಾಂಡ್ ಜನಸಂಖ್ಯೆ 42 ಲಕ್ಷ ಇದ್ದರೆ, ಭಾರತದಲ್ಲಿ 120 ಕೋಟಿ ಇದೆ. 240 ಲಕ್ಷ ಮೆಟ್ರಿಕ್ ಟನ್ ಹಾಲನ್ನು ನ್ಯೂಜಿಲ್ಯಾಂಡ್ ನಲ್ಲಿ ಉತ್ಪಾದನೆ ಮಾಡಿದರೆ,ಭಾರತದಲ್ಲಿ 1800 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತೆ ಎಂದ ಅವರು, ಆ ದೇಶದಲ್ಲಿ ಡೈರಿ ರೈತರ ಸಂಖ್ಯೆ ಹತ್ತು ಸಾವಿರ ಮಾತ್ರ, ಭಾರತದಲ್ಲಿ 10 ಕೋಟಿ ರೈತರು.ಕೇಂದ್ರದ ಈ ನೀತಿಯಿಂದ ದೇಶದ ರೈತರ ಆರ್ಥಿಕ ಪರಿಸ್ಥಿತಿ ಪತನ ವಾಗಲಿದೆ ಎಂದು ವಿವರಿಸಿದರು.

    ದೇಶದಲ್ಲಿ ಹೈನುಗಾರಿಕೆ ಉತ್ಪಾದನೆಯಲ್ಲಿ ಗುಜರಾತ್ ಮೊದಲನೇ ಸ್ಥಾನದಲ್ಲಿದ್ದರೆ, ಕರ್ನಾಟಕ ದ್ವಿತೀಯ ಸ್ಥಾನದಲ್ಲಿದೆ.ಇಂತಹ ಅನೇಕ ಅಂಶಗಳನ್ನು ಹಾಗೂ ವಾಸ್ತವ ಸ್ಥಿತಿ ಅರಿಯದೇ ಅವಸರದಲ್ಲಿ ಕೇಂದ್ರ ಸರ್ಕಾರ ಈ ತೀರ್ಮಾನ ಮಾಡಿರುವುದು ದುರಂತವೇ ಸರಿ ಎಂದು ವೀರಪ್ಪ ಮೊಯ್ಲಿ ಹೇಳಿದರು.

     ಕೇಂದ್ರವು ಹಾಲಿನ ಉತ್ಪನ್ನಗಳು ಅಮದು ಮಾಡಿಕೊಳ್ಳುವ ತೀರ್ಮಾನದಿಂದ ದೇಶದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಬಹುದು.ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದೇನೆ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಹೋಗುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿರುತ್ತೆ ಎಂದು ಆಪಾದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap