ತುಮಕೂರು
ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ಜಿಲ್ಲಾ ಅಧ್ಯಕ್ಷ ಡಿ.ಎನ್.ಸಂಪತ್‍ರವರ ಅಧ್ಯಕ್ಷತೆಯಲ್ಲಿ ಭಾರvದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ನಡೆಸಲಾಯಿತು. ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ರಾಷ್ಟ್ರಧ್ವಜವನ್ನು ಅಧ್ಯಕ್ಷರು ಅನಾವರಣ ಮಾಡಿ ಕೊರೊನಾ ಕಾರಣಕ್ಕೆ ಸ್ವಾತಂತ್ರ್ಯೋತ್ಸವವನ್ನು ಜನ ಸಂಭ್ರಮದ ನಡುವೆ ಆಚರಿಸಲು ಸಾಧ್ಯವಾಗದಿರುವುದಕ್ಕೆ ವಿಷಾದಿಸಿದರು.ಸಂಘದ ಕಾರ್ಯದರ್ಶಿಗಳಾದ ಟಿ.ಎಮ್.ಬಸವರಾಜು ಹಾಗೂ ಕೆ.ಆರ್.ಎಂ. ಸುದರ್ಶನ್‍ರವರು ದೇಶದ ಸ್ವಾತಂತ್ರ್ಯ ಹೋರಾಟ ಹಾಗೂ ಬಲಿದಾನದ ಬಗ್ಗೆ ಸ್ಮರಣೆ ಮಾಡಿ ಕೊರೊನಾ ಹಾಗೂ ದೇಶದ ಅಭಿವೃದ್ಧಿ ಗೆ ಜನತೆ ಕೈಜೋಡಿಸಬೇಕೆಂದರು. ಸಂಘದ ಪದಾಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ