ದೇಶದಲ್ಲಿ ಗುಣಮಟ್ಟದ ಶಿಕ್ಷಣದ ಅವಶ್ಯಕತೆಯಿದೆ : ವೀರಪ್ಪ ಮೊಯ್ಲಿ

ಬೆಂಗಳೂರು

      ದೇಶದಲ್ಲಿ ಗುಣಮಟ್ಟದ ಶಿಕ್ಷಣದ ಅವಶ್ಯಕತೆಯಿದ್ದು ಪ್ರತಿ ವಿದ್ಯಾರ್ಥಿ ನಾನು ಏನಾಗಬೇಕು ಎಂಬ ಗಟ್ಟಿ ಆಲೋಚನೆಗಳು ಇದ್ದಲ್ಲಿ ಮಾತ್ರವೇ ಭವಿಷ್ಯದ ನಾಗರೀಕನಾಗಬಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅವರು ಪ್ರತಿಪಾದಿಸಿದ್ದಾರೆ.

      ನಗರದ ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಟಿಟ್ಯೂಟ್‍ನ ವಜ್ರ ಮಹೋತ್ಸವದಲ್ಲಿ ಭಾಗವಹಿಸಿ, ವಜ್ರಶ್ರೀ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳ ದೂರದೃಷ್ಟಿ ಯಾವಾಗಲೂ ಅದರ ಶಿಕ್ಷಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಉತ್ತಮ ಚಿಂತನೆಗಳು ಶಿಕ್ಷಣ ಸಂಸ್ಥೆಗಳಿಗೆ ಇರಬೇಕು ಎಂದು ಹೇಳಿದರು.

     ಜಾಗತಿಕ ಉದ್ಯೋಗ ಕ್ಷೇತ್ರದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೂಲಕ ಹೊರಬಂದವರೇ ಸಿಇಒ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಉದ್ಯೋಗ ಕ್ಷೇತ್ರದ ಸಿಇಒಗಳು ಭಾರತೀಯರಾಗಿದ್ದಾರೆ ಎಂಬುದೇ ಹೆಮ್ಮೆಯ ಸಂಗತಿ. ಇವರೆಲ್ಲಾ ಭಾರತೀಯ ಶಿಕ್ಷಣವನ್ನು ಪಡೆದೇ ಮುಂದೆಬಂದವರು ಎಂದರು.

      ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ. ಹೀಗಾಗಿ ಇಂತಹ ಪ್ರಯತ್ನಗಳು ಶಿಕ್ಷಣ ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯಬೇಕು. ತಾವು ಸಣ್ಣ ಕೈಗಾರಿಕಾ ಸಚಿವರಾಗಿದ್ದ ವೇಳೆ ನಗರವನ್ನು ಸಿಲಿಕಾನ್ ಸಿಟಿ ಮಾಡುವ ಪ್ರಯತ್ನಕ್ಕೆ ಮುಂದಾದಾಗ ನನಗೆ ಯಾರಿಂದಲೂ ಸಹಕಾರ ಸಿಗಲಿಲ್ಲ. ಒಂದು ಸಾವಿರ ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಐಟಿಪಿಎಲ್ ಮಾಡಲು ಮುಂದಾದಾಗಲೂ ಸಹಕಾರ ಸಿಗಲಿಲ್ಲ. ಆದರೆ ನಾನು ನಿರಾಶನಾಗಲಿಲ್ಲ. ನನ್ನ ಪ್ರಯತ್ನಗಳನ್ನು ನಾನು ಬಿಡಲಿಲ್ಲ. ಹಾಗಾಗಿಯೇ ಇಂದು ಬೆಂಗಳೂರು ನಗರ ಸಿಲಿಕಾನ್ ಸಿಟಿಯಾಗಿದೆ ಎಂದರು.

     ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಪ್ರೀಂ ಕೋರ್ಟ್‍ನ ಮಾಜಿ ಮುಖ್ಯನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ ಅವರು ಮಾತನಾಡಿ, ಇಂದು ಗಣಿತ ಶಾಸ್ತ್ರಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಇಲ್ಲದಿದ್ದಲ್ಲಿ ಶಿಕ್ಷಣದ ಗುಣಮಟ್ಟ ಉತ್ತಮವಾಗದು ಎಂದು ಅಭಿಪ್ರಾಯಪಟ್ಟರು.ಶಿಕ್ಷಣ ವ್ಯವಸ್ಥೆ ಅಮೂಲಾಗ್ರವಾಗಿ ಬದಲಾಗಬೇಕಿದೆ. ಶಿಕ್ಷಣದ ಪಠ್ಯಕ್ರಮಗಳನ್ನು ಬದಲಿಸುವ ಬಗ್ಗೆ ಚಿಂತಕರು ಆಲೋಚಿಸಬೇಕಿದೆ.ವಿದ್ಯಾರ್ಥಿಯ ಶಿಕ್ಷಣದ ದೃಷ್ಟಿಕೋನ ಬಹಳ ವಿಶಾಲವಾಗಿರಬೇಕು. ಹಲವು ದಶಕಗಳ ಶಿಕ್ಷಣದ ವ್ಯವಸ್ಥೆಯ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.

     ದಿ ಕಮ್ಯುನಿಟಿ ಸೆಂಟರ್ ಗ್ರೂಪ್ ಆಫ್ ಎಜುಕೇಷನ್ ಇನ್ಸ್ಟಿಟ್ಯೂಟ್‍ನ ಅಧ್ಯಕ್ಷ ಕೆ.ಎನ್. ನಾಗರಾಜ್ ಅವರು, ಅಧ್ಯಕ್ಷ ಭಾಷಣದಲ್ಲಿ ಮಾತನಾಡಿ ಅವಿದ್ಯಾವಂತರನ್ನು ವಿದ್ಯಾವಂತರನ್ನಾಗಿ ಮಾಡುವುದು, ಅನಾಗರೀಕರನ್ನು ನಾಗರೀಕರನ್ನಾಗಿ ಮಾಡುವುದೇ ನಮ್ಮ ಶಿಕ್ಷಣ ಸಂಸ್ಥೆಯ ಪ್ರಮುಖ ಧ್ಯೇಯ ಎಂದು ಹೇಳಿದರು.

    ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚು ಆದ್ಯತೆ ನೀಡಲಾಗುವುದು. ಬಡವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದೇ ಸಂಸ್ಥೆಯ ಮೊದಲ ಆದ್ಯತೆ ಎಂದು ಹೇಳಿದರು.ತಾವು ಅಧ್ಯಕ್ಷನಾಗಬೇಕು ಎಂದು, ಎಂದೂ ಬಯಸಿರಲಿಲ್ಲ. ಆದರೆ ಕೆಲವರ ಮನವಿಯ ಮೇರೆಗೆ ಅಧ್ಯಕ್ಷನಾಗಿ ಆಯ್ಕೆಯಾದೆ ಎಂದು ಅವರು ಹೇಳಿದರು.

      ಸಮಾರಂಭದಲ್ಲಿ ಶಾಸಕ ಉದಯ ಗರುಡಾಚಾರ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್,ನಗರ ಪೆÇಲೀಸ್ ಆಯುಕ್ತ ಭಾಸ್ಕರ್ ರಾವ್, ಜಯನಗರ ಕೋ – ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ.ಆರ್. ವಾಸುದೇವ್, ಬಿಬಿಎಂಪಿ ಜಂಟಿ ಆಯುಕ್ತ (ಆರೋಗ್ಯ, ಘನತ್ಯಾಜ್ಯ ವಿಭಾಗ) ಸರ್ಪರಾಜ್ ಖಾನ್, ಸಂಸ್ಥೆಯ ಕಾರ್ಯದರ್ಶಿ ಚಿಕ್ಕಯ್ಯ ಉಪಸ್ಥಿತರಿದ್ದರು. ಮಾಧ್ಯಮ ಸಮನ್ವಯ ಅಧಿಕಾರಿ ಕರಣ್ ಅವರು ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap