ಹೊಳಲ್ಕೆರೆ
ಪಟ್ಟಣದ ತಾಲ್ಲುಕು ಕಚೇರಿಯ ಮುಂಭಾಗದಲ್ಲಿ ಒಂದು ವರ್ಷದ ಹಿಂದೆ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಇನ್ನು ಪ್ರಾರಂಭವೇ ಆಗಿಲ್ಲ. ಈ ಬಗ್ಗೆ ಯಾವ ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿ ಸಹ ನೀಡುತ್ತಿಲ್ಲ.
ಪಟ್ಟಣ ಮತ್ತು ತಾಲ್ಲುಕಿನಾದ್ಯಾಂತ ದಿನ ನಿತ್ಯ ತಮ್ಮ ತಮ್ಮ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳಿಗೆ ಸಾವಿರಾರು ಬಡ, ಮದ್ಯಮ ಮತ್ತು ವಿದ್ಯಾರ್ಥಿಗಳು ಈ ಇಂದಿರಾ ಕ್ಯಾಂಟೀನ್ ಯಾವಾಗ ಪ್ರಾರಂಭವಾಗುತ್ತೋ ಎಂಬ ನಿರೀಕ್ಷೆಯಲ್ಲೇ ಇದ್ದಾರೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಯಾರು ಹಸಿವಿನಿಂದ ಬಳಬಾರದು ಎಲ್ಲರಿಗೂ ಆಹಾರ ದೊರೆಯಬೇಕೆಂಬ ಮಹತ್ವದ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತಂದು ನಾಲ್ಕೈದು ವರ್ಷ ಕಳೆದಿದೆ. ಆದರೆ ಹೊಳಲ್ಕೆರೆಯಲ್ಲಿ ಅವರ ಮಹತ್ವಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಜನ ಸಾಮಾನ್ಯರಿಗೆ ಇನ್ನು ಲಭ್ಯವಾಗಿಲ್ಲ.
ಸರ್ಕಾರ ಬದಲಾವಣೆಯಿಂದ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಇನ್ನು ಮನಸ್ಸೆ ಕೊಟ್ಟಿಲ್ಲ. ದಿನ ನಿತ್ಯ ಸಾವಿರಾರು ಜನರು ಅತೀ ಹೆಚ್ಚು ದರಗಳನ್ನು ನೀಡಿ ಖಾಸಗಿ ಹೋಟಲ್ ಗಳಲ್ಲಿ ತಿಂಡಿ ಊಟ ಮಾಡಿದರು ಅದು ಅವರಿಗೆ ತೃಪ್ತಿಯಾಗಿಲ್ಲ. ಬಡವರಿಗಾಗಿ ಸರ್ಕಾರ ಕೈಗೊಂಡಿರುವ ಈ ಯೋಜನೆ ಜಾರಿಗೆ ಬಂದಿದ್ದರೆ ಬಡವರ ಹಸಿವು ನೀಗುತ್ತಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕಾರಿಗಳಾಗಲೀ, ಚುನಾಯಿತ ಪ್ರತಿನಿಧಿಗಳಾಗಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ಊಟ ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ಇಂದಿರಾ ಕ್ಯಾಂಟೀನ್ ಕಟ್ಟಡದ ಬಳಿಗೆ ಬಂದು ನಿರಾಸೆಯಿಂದ ಹಿಂದಿರುಗುವ ದೃಶ್ಯವನ್ನು ಕಾಬಹುದಾಗಿದೆ.
ಅದರ ಈ ಬಗ್ಗೆ ಸಂಬಂಧಪಟ್ಟವರು ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡುವ ಬಗ್ಗೆ ಆಲೋಚನೆ ಮಾಡಿಲ್ಲ. ಇಂದಿರಾ ಕ್ಯಾಂಟೀನ್ ಕಟ್ಟಡ ನೋಡಲಿಕ್ಕೆ ಒಂದು ರೀತಿಯ ಪ್ರದರ್ಶನವಾಗಿದೆ ಹೊರತು ಅದರಿಂದ ಯಾವುದೇ ಪ್ರಯೋಜನ ಜನರಿಗೆ ಸಿಕ್ಕಿಲ್ಲ. ತಾಲ್ಲುಕಿನ ಸಾವಿರಾರು ಬಡವರ ಆಶಾ ಭಾವನೆ ಇನ್ನು ಪೂರ್ಣವಾಗಲಿಲ್ಲ. ಈ ಬಗ್ಗೆ ಇಂದಿರಾ ಕ್ಯಾಂಟೀನ್ ಯಾವ ಇಲಾಖೆಗೆ ಸೇರಿದೆ ಎಂಬ ಮಾಹಿತಿಯು ಸಹ ಗೊತ್ತಿಲ್ಲ. ಈಲ್ಲೆಯ ಎಲ್ಲಾ ತಾಲ್ಲುಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿವೆ. ಹೊಳಲ್ಕೆರೆ ಪಟ್ಟಣದಲ್ಲಿ ಕಾರ್ಯ ನಿರ್ವಹಿಸುವಲ್ಲಿ ವಿಳಂಬವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ