ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ವತಿಯಿಂದ : ಇಂದಿರಾಗಾಂಧಿ ಜನ್ಮೋತ್ಸವ

ಹಿರಿಯೂರು :

       ಇಂದಿರಾಗಾಂಧಿಯವರ 101ನೇ ಜನ್ಮ ದಿನದ ಪ್ರಯುಕ್ತ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಇಂದಿರಾಗಾಂಧಿ ಜನ್ಮೋತ್ಸವವನ್ನು ಇಂದಿರಾಟ್ರೀ ನೆಡುವುದರ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.

        ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಪಿ.ಸಿ.ಸಿ ಅಧ್ಯಕ್ಷರಾದ ದಿನೇಶ್‍ಗುಂಡೂರಾವ್‍ರವರು ಮಾತನಾಡಿ, ನಮ್ಮ ಪಕ್ಷದ ಪರಮೋಚ್ಚ ನಾಯಕಿಯ ಹೆಸರಿನಲ್ಲಿ ಹುಟ್ಟಿರುವ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆ ಈ ಸಂಘಟನೆಯಿಂದ ನಮ್ಮ ಪಕ್ಷಕ್ಕೂ ನಮ್ಮ ನಾಯಕಿಗೂ ಹೆಚ್ಚಿನ ಗೌರವ ಬರುವಂತಹ ಸಮಾಜಮುಖಿ ಕೆಲಸಗಳಾಗಲಿ ಎಂಬುದಾಗಿ ಶುಭ ಹಾರೈಸಿದರು.

        ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಇಂದಿರಾಗಾಂಧಿ ಅಭಿಮಾನಿಗಳ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ರಂಗಪ್ಪಯಾದವ್‍ರವರು ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ದೇಶದ ಪ್ರಗತಿ ಸಾಧ್ಯ. ಬಡವರ, ದೀನದಲಿತರ, ಅಲ್ಪಸಂಖ್ಯಾತರ ಏಳ್ಗೆಯೇ ಕಾಂಗ್ರೆಸ್ ಪಕ್ಷದ ಗುರಿಯಾಗಿದೆ ಎಂದರು.

         ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷರಾದ ಮುನಿರತ್ನಯಾದವ್, ಗೌ|| ಅಧ್ಯಕ್ಷರಾದ ಅಚ್ಚಪ್ಪ, ಅಪ್ಪಾಜಿ, ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾದ ಎಂ.ಡಿ.ಲಕ್ಷ್ಮೀನಾರಾಯಣ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರೇಖಾರಾವ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ವೆಂಕಟೇಶ್, ಕೆಪಿಸಿಸಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ರಾಜ್‍ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್, ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಫಾತ್ಯರಾಜನ್, ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಮುತ್ತುರಾಜ್, ಶಾಂತವೀರ್, ರಾಜಣ್ಣ, ವೇದಿಕೆಯ ಪದಾಧಿಕಾರಿಗಳಾದ ವಿ.ಎಸ್.ಮಂಜುಳಾ, ಶಿಲ್ಪಾಗೌಡ, ಮಮತಶೆಟ್ಟಿ, ರುಕ್ಮಿಣಿಗೌಡ, ಲಕ್ಷ್ಮೀಲೋಹಿತ್, ಲಕ್ಷ್ಮೀನಾರಾಯಣ್, ಹಾಗೂ ವೇದಿಕೆಯ ನೂರಾರು ಕಾರ್ಯಕರ್ತರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap