ತುಮಕೂರು
ಜಿಲ್ಲೆಯಲ್ಲಿ ಕೊರೊನಾ ತಲ್ಲಣ ಮುಂದುವರೆದಿದೆ. ಭಾನುವಾರ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 23ಕ್ಕೆ ಏರಿದೆ. ಭಾನುವಾರ ಮತ್ತೆ 46 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 700ರ ಗಡಿಯಲ್ಲಿದೆ. ಇದೂವರೆಗೆ ವರದಿಯಾದ ಪಾಸಿಟೀವ್ ಪ್ರಕರಣಗಳ ಸಂಖ್ಯೆ 699ಕ್ಕೆ ಏರಿಕೆಯಾಗಿವೆ.
ತುಮಕೂರು ತಾಲ್ಲೂಕು ಭೀಮಸಂದ್ರದ 62 ವರ್ಷದ ಪುರುಷರು ಕೋವಿಡ್‍ನಿಂದ ಅಸುನೀಗಿದ್ದಾರೆ. ಇವರು ಜ್ವರ, ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು, ಇವರ ಗಂಟಲು ದ್ರವ ಪರೀಕ್ಷಿಸಿದಾಗ ಪಾಸಿಟೀವ್ ವರದಿ ಬಂದಿತ್ತು, ಇವರು ಇದೇ 17ರಂದು ಮೃತಪಟ್ಟರು.
ಪಾವಗಡ ತಾಲ್ಲೂಕು ಹೊಸಹಳ್ಳಿ ತಾಂಡಾದ 60 ವರ್ಷದ ಗಂಡಸು ಮೃತಪಟಿದ್ದಾರೆ. ಇವರು ಮೂತ್ರಪಿಂಡ ಸಮಸ್ಯೆಯಿಂದ ಅನಂತಪುರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಪಾವಗಡದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್‍ನಲ್ಲಿ ಇವರ ಗಂಟಲು ದ್ರವ ತೆಗೆದು ಪರೀಕ್ಷೆ ಮಾಡಲಾಗಿದ್ದು, ಸೋಂಕು ಖಚಿತವಾಗಿತ್ತು. ಇವರು ಈ ತಿಂಗಳ 16ರಂದು ಅಸುನೀಗಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರಿನ 55 ವರ್ಷದ ಪುರುಷ ಕೊರೊನಾಗೆ ಬಲಿಯಾಗಿದ್ದಾರೆ. ಇವರು ಜ್ವರ, ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಇವರ ಗಂಟಲು ದ್ರವ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿತ್ತು, ಇವರು ಈ ತಿಂಗಳ 18 ರಂದು ಸಾವಿಗೀಡಾದರು ಎಂದು ಡಿಹೆಚ್‍ಓ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.
ಭಾನುವಾರದ ವರದಿಯಾದ 46 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕು 25, ಪಾವಗಡ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳಲ್ಲಿ ತಲಾ 4, ಕುಣಿಗಲ್, ಮಧುಗಿರಿ, ಶಿರಾ ತಾಲ್ಲೂಕುಗಳಲ್ಲಿ ತಲಾ 3, ಕೊರಟಗೆರೆ 2, ಗುಬ್ಬಿ ಹಾಗೂ ತುರುವೇಕೆರೆ ತಾಲ್ಲೂಕಿನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿವೆ .
ಇವರಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ, 5 ವರ್ಷಕ್ಕೂ ಕಡಿಮೆ ವಯಸ್ಸಿನ ಒಬ್ಬರು, 60 ವರ್ಷ ಮೇಲ್ಪಟ್ಟ ವಯಸ್ಸಿನ 7 ಜನ ಇದ್ದಾರೆ. ಗುಣಮುಖರಾಗಿ ಭಾನುವಾರ 71 ಜನ ಆಸ್ಪತ್ರೆಯಿಂದ ಬಿಡುಗಡೆಯಾದರು, ಈವರೆಗೆ ಒಟ್ಟು 358 ಜನ ಬಿಡುಗಡೆಯಾಗಿದ್ದಾರೆ. 318 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ ವರದಿಯಾದ ಒಟ್ಟು 699 ಸೋಂಕು ಪ್ರಕರಣಗಳಲ್ಲಿ ತುಮಕೂರು ತಾಲ್ಲೂಕಿನಲ್ಲಿ ಅತಿಹೆಚ್ಚು ಪ್ರಕರಣಗಳಿವೆ, ಇದೂವರೆಗೆ ತುಮಕೂರು ತಾ. 318, ಪಾವಗಡ ತಾ. 64, ಶಿರಾ 57, ಮಧುಗಿರಿ ತಾ. 56, ಕೊರಟಗೆರೆ ತಾ. 38, ಗುಬ್ಬಿ ತಾ. 34. ಚಿಕ್ಕನಾಯಕನಹಳ್ಳಿ ತಾ. 46, ಕುಣಿಗಲ್ ತಾ. 39, ತಿಪಟೂರು ತಾ. 25, ತುರುವೇಕೆರೆ ತಾ. 24 ಪ್ರಕರಣ ವರದಿಯಾಗಿವೆ. 361 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು, ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತುಮಕೂರು
ತುಮಕೂರು ನಗರದ ಮರಳೂರುದಿಣ್ಣೆಯ 16 ವರ್ಷದ ಪುರುಷ, ಬಾರ್‍ಲೈನ್ ರಸ್ತೆಯ 40 ವರ್ಷದ ಹೆಂಗಸು, ಪಿ.ಜಿ.ಲೇಔಟ್‍ನ 65 ವರ್ಷದ ಗಂಡಸು, ಎಸ್‍ಐಟಿ 16ನೇ ಕ್ರಾಸಿನ 17 ವರ್ಷದ ಯುವತಿ, ಹೊಸಬಡಾವಣೆಯ 43 ವರ್ಷದ ಗಂಡು, ಶಿರಾಗೇಟ್ ಸಿ.ವಿ.ಪಾಳ್ಯದ 50 ವರ್ಷದ ಪುರುಷ, 36 ವರ್ಷದ ಮಹಿಳೆ, ಎನ್‍ಇಪಿಎಸ್‍ನ 43 ವರ್ಷದ ಗಂಡಸು, ಕ್ಯಾತ್ಸಂದ್ರದ ಇಂದಿರಾನಗರದ 45 ವರ್ಷದ ಹೆಂಗÀಸು, ವಿನೋಬ ನಗರದ 77 ವರ್ಷದ ಗಂಡಸು, ವಾಲ್ಮೀಕಿನಗರದ 43 ವರ್ಷದ ಹೆಂಗಸು, ನೃಪತುಂಗ ಬಡಾವಣೆಯ 30 ವರ್ಷದ ಮಹಿಳೆ, ಬಾರ್‍ಲೈನ್‍ನ 30 ವರ್ಷದ (ಪೊಲೀಸ್) ಪುರುಷ, ಸಿದ್ಧರಾಮೇಶ್ವರ ಬಡಾವಣೆಯ ಕೆಎಸ್‍ಆರ್‍ಟಿಸಿ ಕಂಡಕ್ಟರ್ 25 ವರ್ಷದ ಪುರುಷ, ಟೌನ್ ಪೊಲೀಸ್ ಠಾಣೆಯ 39 ವರ್ಷದ ಗಂಡಸು, 41 ವರ್ಷದ ಗಂಡಸು, ಶಿರಾಗೇಟ್‍ನ 21 ವರ್ಷದ ಯುವತಿ, ಮರಳೂರು ದಿಣ್ಣೆಯ 27 ವರ್ಷದ ಗಂಡಸು, ಎಸ್‍ಐಟಿ 8ನೇ ಕ್ರಾಸಿನ 24 ವರ್ಷದ ಯುವಕ, ಅಶೋಕ ನಗರದ 47 ವರ್ಷದ ಪುರುಷ, ಬಾರ್‍ಲೈನ್ ರಸ್ತೆಯ 27 ವರ್ಷದ ಪುರುಷ, ಕೃಷ್ಣಾನಗರದ 28 ವರ್ಷದ ಗಂಡಸು, ಎಸ್ಪಿ ಕಚೇರಿಯ 29 ವರ್ಷದ ಪುರುಷ, ಸದಾಶಿವ ನಗರದ 58 ವರ್ಷದ ಮಹಿಳೆ, 51 ವರ್ಷದ ಗಂಡಸು, ತುಮಕೂರು ತಾಲ್ಲೂಕು ನೇರಳಾಪುರದ 55 ವರ್ಷದ ಹೆಂಗಸು, ಸಿದ್ಧಾರ್ಥ ಮೆಡಿಕಲ್ ಕಾಲೇಜಿನ 24 ವರ್ಷದ ಯುವಕ, 24 ವರ್ಷದ ಯುವತಿ, ಊರುಕೆರೆಯ 38 ವರ್ಷದ ಮಹಿಳೆ, ಹೆಗ್ಗೆರೆಯ 57 ವರ್ಷದ ಪುರುಷ, ಹಿರೇಹಳ್ಳಿಯ 30 ವರ್ಷದ ಗಂಡಸಿಗೆ ಸೋಂಕು ಖಚಿತವಾಗಿದೆ.
ಗುಬ್ಬಿ:- ಗುಬ್ಬಿ ತಾಲ್ಲೂಕಿನ ಕೆ.ಜಿ.ಟೆಂಪಲ್‍ನ 28 ವರ್ಷದ ಗಂಡಸು, ಚೆನ್ನೇನಹಳ್ಳಿಯ 36 ವರ್ಷದ ಗಂಡಸಿಗೆ ಕೊರೊನಾ ದೃಢಪಟ್ಟಿದೆ.ತಾಲ್ಲೂಕು ಹುಲಿಯೂರುದುರ್ಗದ 16 ವರ್ಷದ ಬಾಲಕ, ಶಿರಾ ನಗರದ 31 ವರ್ಷದ ಪುರುಷನಿಗೆ ಪಾಸಿಟೀವ್ ವರದಿ ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ