ಬೆಂಗಳೂರು
ದೇಶದ ಪ್ರಸಿದ್ಧ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಬೆಂಗಳೂರು ಮೂಲದ ಇನ್ಫೋಸಿಸ್ ಕಂಪೆನಿ ಷೇರುಗಳು ಇಂದು ಬೆಳಗಿನ ವಹಿವಾಟಿನ ಸಂದರ್ಭದಲ್ಲಿ ಭಾರಿ ಕುಸಿತ ಕಂಡಿವೆ, ಕಳೆದ 6 ವರ್ಷಗಳಲ್ಲೇ ಈ ರೀತಿ ಕುಸಿತ ಎಂದೂ ಕಂಡಿರಲಿಲ್ಲ ಎಂದು ಕಂಪನಿ ತಿಳಿಸಿದೆ.ಬೆಳಗ್ಗೆ 10.53ರ ಹೊತ್ತಿಗೆ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 109.25 ರುಪಾಯಿ ಕುಸಿತ ಕಂಡು 658.50 ರುಪಾಯಿಗೆ ಬಂದು ನಿಂತಿದೆ.
ಈ ಸಮಯಕ್ಕೆ 11.32ಕ್ಕೆ ಬಿಎಸ್ಇಯಲ್ಲಿ 110.30 ರು ಕಳೆದುಕೊಂಡು 14.43% ಕುಸಿತ ಕಂಡು 656.95 ರು ನಂತೆ ವಹಿವಾಟು ನಡೆಸಿದೆ. ಇದೇ ವೇಳೆ ಎನ್ಎಸ್ಇಯಲ್ಲಿ 110.50 ರು ಕಳೆದುಕೊಂಡು 14.33% ಕುಸಿದು 657.85 ರು ನಂತೆ ವ್ಯವಹಾರ ನಡೆಸುತ್ತಿದೆ.
ಅಮೆರಿಕದಲ್ಲಿ ಇನ್ಫೋಸಿಸ್ ಕಂಪೆನಿ ವಿರುದ್ಧ ಅನೈತಿಕವಾದ ಪದ್ಧತಿ ಅನುಸರಿಸುತ್ತಿರುವ ಬಗ್ಗೆ ಆರೋಪ ಮಾಡಿ,ಯಾರೊ ಸಿಇಒ ಸಲೀಲ್ ಪರೇಖ್ ವಿರುದ್ಧವೇ ದೂರು ಕೇಳಿ ಬಂದಿದ್ದು, ಲಾಭದ ಸಂಖ್ಯೆ ಹೆಚ್ಚಳವಾಗಿದೆ ಎಂದು ತೋರಿಸಲು ವಾಮಮಾರ್ಗ ಬಳಿಸಲಾಗಿದೆ ಎಂದು ಅಮೆರಿಕದ ಷೇರುಪೇಟೆಯ ಸೆಕ್ಯುರಿಟೀಸ್ ಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








