ನವದೆಹಲಿ
ಭಾರತದ ಮಾಹಿತಿ ತಂತ್ರಜ್ಞಾನ ವಲಯದ ದಿಗ್ಗಜ ಸಂಸ್ಥೆ ಇನ್ಫೋಸಿಸ್ ತನ್ನ ಮಧ್ಯಮ ಹಂತದ ಹಾಗೂ ಮೇಲಿನ ಹಂತದ ಸಾವಿರಾರು ಉದ್ಯೋಗಿಗಳನ್ನು ಕೈಬಿಡಲಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ವಿವಿಧ ಹುದ್ದೆಗಳಲ್ಲಿರುವ ಸುಮಾರು 10,000 ಉದ್ಯೋಗಿಗಳು ಕೆಲಸ ಕಳೆದುಕೊಳ್ಳವ ಭೀತಿ ಎದುರಿಸುತ್ತಿದ್ದಾರೆ.
ಇದು ಐಟಿ ಉದ್ಯಮದ ಸಾಮಾನ್ಯ ಲೇ ಆಫ್ ಪ್ರಕ್ರಿಯೆ ಎಂದು ಕಂಪೆನಿ ಹೇಳಿಕೊಂಡಿದೆ. ಇತ್ತೀಚಿಗಿನ ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಇನ್ಫೋಸಿಸ್ ಲೇ-ಆಫ್ ಮಾಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಇತ್ತೀಚೆಗೆಷ್ಟೇ ಕಾಗ್ನಿಜೆಂಟ್ ಕಂಪೆನಿ ಉದ್ಯೋಗ ಕಡಿತ ಮಾಡುವುದಾಗಿ ಘೋಷಣೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
