ಜಾತಿ ಹೆಸರಿನ ಸಂಘಗಳ ಸ್ಥಾಪನೆ ಅಪಾಯಕಾರಿ

ಚಿತ್ರದುರ್ಗ

       ಜಾತಿಯನ್ನು ನಿರ್ಮೂಲನೆ ಮಾಡಿ ಜಾತ್ಯಾತೀತವಾಗಿ ನಿರ್ಮಾಣವಾಗಬೇಕಾದ ಯುವಕ ಸಂಘಗಳು ಜಾತಿಯ ಹೆಸರಿನಲ್ಲಿ ಸ್ಥಾಪನೆ ಯಾಗುತ್ತಿರುವುದು ವಿಷಾಧನೀಯ ಎಂದು ನೆಹರು ಯುವ ಕೇಂದ್ರದ ಹಿರಿಯ ಅಧಿಕಾರಿ ಎಂ.ಎನ್.ನಟರಾಜ್ ತಿಳಿಸಿದರು.ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಶ್ರೀ ಜೇಡರದಾಸಿಮಯ್ಯ ಯುವಕ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಪಿಳ್ಳೇಕೇರನ ಹಳ್ಳಿಯ ಬಾಪೂಜಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಿತ್ರದುರ್ಗ ಜಿಲ್ಲಾ ಮಟ್ಟದ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

       ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಕಡಿಮೆ ಇದ್ದ ಜನ ಸಂಖ್ಯೆ ಇದು ಹೆಚ್ಚಾಗಿದೆ ಆದರಲ್ಲಿ ಯುವ ಜನತೆ ಪ್ರಮಾಣ ಹೆಚ್ಚಾಗಿರುವುದನ್ನು ಮನಗಂಡು ಕೇಂದ್ರ ಸರ್ಕಾರ 2004ರಲ್ಲಿ ಪ್ರಧಾನ ಮಂತ್ರಿ ನೆಹರುರವರ ಹಸರಿನಲ್ಲಿ ಯುವ ಕೇಂದ್ರವನ್ನು ಪ್ರಾರಂಭ ಮಾಡುವುದರ ಮೂಲಕ ಅವರಿಗೆ ಮಾರ್ಗದರ್ಶನವನ್ನು ನೀಡುತ್ತಾ ಸರಿದಾರಿಗೆ ತರುವ ಕಾರ್ಯವನ್ನು ಮಾಡುತ್ತಿದೆ ಇಂದಿನ ದಿನಮಾನದಲ್ಲಿ ಎಲ್ಲಡೆ ವಿದೇಶಿಯ ಆಟವಾದ ಕ್ರಿಕೇಟ್‍ಗೆ ಹೆಚ್ಚಿನ ಮಾನ್ಯತೆಯನ್ನು ನೀಡಲಾಗುತ್ತಿದೆ ಇದರಿಂದ ಗ್ರಾಮೀಣ ಪ್ರದೇಶದ ಕ್ರೀಡೆಗಳು ನಶಿಸುತ್ತಿದೆ ಇದನ್ನು ಮನಗಂಡ ಗ್ರಾಮೀಣ ಕ್ರೀಡೆಗಳು ಬೆಳೆಯಲು ಸಹಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

       ನೆಹರು ಯುವ ಕೇಂದ್ರ ಯುವಕ ಸಂಘಗಳನ್ನು ಮಾತ್ರಲ್ಲದೆ ಯುವತಿಯರ ಸಂಘಗಳನ್ನು ಸ್ಥಾಪನೆ ಮಾಡುವುದರ ಮೂಲಕ ಅವರಲ್ಲಿಯೂ ಸಹಾ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಯುವಜನತೆಯಲ್ಲಿ ಯಾವುದೇ ರೀತಿಯ ಜಾತಿಯ ಭಾವನೆ ಇಲ್ಲದೆ ಎಲ್ಲರು ಒಂದಾಗಿ ಇರಬೇಕು ಎಲ್ಲರು ಸಮಾನರು ಎಂಬ ಭಾವನೆಯಿಂದ ನೋಡಲಾಗುತ್ತಿದೆ ಆದರೆ ಯುವಕ ಸಂಘಗಳ ಸ್ಥಾಪನೆ ಮಾತ್ರ ಬಸವೇಶ್ವರ ಯುವಕ ಸಂಘ, ವಾಲ್ಮಿಕಿ ಯುವಕ ಸಂಘ, ಅಂಬೇಡ್ಕರ್ ಯುವಕ ಸಂಘ, ಅಕ್ಕ ಮಹಾದೇವಿ ಮಹಿಳಾ ಸಂಘ ಎಂಬ ಹೆಸರಿನಲ್ಲಿ ಸಂಘಗಳನ್ನು ಸ್ಥಾಪನೆ ಮಾಡುವುದರ ಮೂಲಕ ಜಾತಿಯನ್ನು ಮತ್ತೇ ಎಳೆಯುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ವಿಷಾಧಿಸಿದರು.

       ನೆಹರು ಯುವ ಕೇಂದ್ರವೂ ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆ, ಸಾಂಸ್ಕತಿಕ, ಉತ್ತೇಜನ, ಶ್ರಮದಾನ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾಗಿ ಬೇಕಾದ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡುವುದರ ಮೂಲಕ ಯುವಜನತೆಯನ್ನು ಮುನ್ನೆಡೆಯುವ ಕಾರ್ಯವನ್ನು ಮಾಡಲಾಗುತ್ತದೆ ಎಂದ ಅವರು ಈಗ ಚುನಾವಣೆಯ ಕಾಲವಾಗಿದ್ದು, ಸಂಘದ ಪದಾಧಿಕಾರಿಗಳು ಒಂದೊಂದು ಗುಂಪು ಮಾಡಿಕೊಂಡು ರಾಜಕೀಯ ಪಕ್ಷಗಳ ಜೊತೆಯಲ್ಲಿ ಗುರುತಿಸಿಕೊಂಡು ಕೆಲಸ ಮಾಡುತ್ತಾರೆ ಇದು ಚುನಾವಣೆಗೆ ಮಾತ್ರ ಸೀಮಿತವಾಗಬೇಕಿದೆ ತದ ನಂತರ ಎಂದಿನಂತೆ ಎಲ್ಲರು ಸಂಘದ ಕೆಲಸವನ್ನು ಮಾಡಬೇಕಿದೆ ಎಂದು ಕರೆ ನೀಡಿದರು.

       ಅಧ್ಯಕ್ಷತೆಯನ್ನುವಹಿಸಿದ್ದ ಬಾಪೂಜಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವಿರೇಶ್ ಮಾತನಾಡಿ ಯುವ ಜನಾಂಗ ದೇಶ ಕಟ್ಟುವ ಕೆಲಸ ಮಾಡಬೇಕು. ಭಾರತ ಯುವಜನಾಂಗದಿಂದ ಕೂಡಿರುವ ದೇಶ. ಅವರೆ ನಮ್ಮ ದೇಶದ ಆಸ್ತಿ. ದೇಶದ ಅರ್ಧದಷ್ಟು ಜನ ಸಂಖ್ಯೆ ಯುವಜನರಿದ್ದಾರೆ.

        ಗಾಂಧಿಜೀ ಹಾಗೂ ಸ್ವಾಮೀ ವಿವೇಕಾನಂದರ ಕನಸು ಸಾಕಾರ ಮಾಡುವ ಶಕ್ತಿ ಅವರಿಗೆ ಇದೇ. ಒಳ್ಳಯ ಮಾರ್ಗ ಆಯ್ಕೆ ಮಾಡಿಕೊಂಡು ಸಮಾಜ ಕಟ್ಟು ಕೆಲಸ ಮಾಡಬೇಕು. ಹಿಂದಿಗಿಂತ ಈಗ ದೇಶದಲ್ಲಿ ಯುವಕರಿಗೆ ಬೆಳೆಯಲು ನಾನಾ ಮಾರ್ಗಗಳು ಇವೆ. ನಾನಾ ಯೋಜನೆಗಳನ್ನು ಬಳಸಿಕೊಂಡು ಯುವಕರು ಜೀವನ ಕಟ್ಟಿಕೊಳ್ಳಬಹುದು. ನೆಹರು ಯುವಕೇಂದ್ರದ ನಾನಾ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅಲ್ಲಿನ ಯೋಜನೆಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.

       ದೂರ ಶಿಕ್ಷಣ ವಿಭಾಗದ ಸಂಯೋಜಕರಾದ ರುದ್ರಪ್ಪ, ಪ್ರಚಾರ್ಯರಾದ ಜಯಲಕ್ಷ್ಮೀ, ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಚಿತ್ತಪ್ಪ ಯಾದವ್, ಮಾತೃಶ್ರೀ ಕಲಾ ಸಂಸ್ಕತಿಕ ಮತ್ತು ಕ್ರೀಡಾ ಯುವಕ ಸಂಘದ ಅಧ್ಯಕ್ಷ ವಿ.ಎಲ್.ಪ್ರಶಾಂತ್ ರಾಜ್ಯ ಯುವ ಪ್ರಶಸ್ತಿ ಪುರಸ್ಕತರಾದ ವೆಂಕಟೇಶ್, ಶ್ರೀನಿವಾಸ್‍ಮಳಲಿ, ಮಾಲತೇಶ್‍ಆರಸ್, ಸಕ್ಕರೆ ರಂಗಸ್ವಾಮಿ, ಶ್ರೀಮತಿ ಲಕ್ಷ್ಮಕ್ಕ ಆಗಮಿಸಿದ್ದರು. ನರಸಿಂಹ ಜಟ್ಟಿ ಪ್ರಾರ್ಥಿಸಿದರು.

        ಇದೇ ಸಂದರ್ಭದಲ್ಲಿ ಚಿತ್ರದುರ್ಗ ನೆಹರು ಯುವ ಕೇಂದ್ರದಲ್ಲಿ ಕಾರ್ಯಕ್ರಮ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ಕೆ.ಎನ್. ವಿಷ್ಣುರವರಿಗೆ ಸನ್ಮಾನಿಸಿ ಬೀಳ್ಕೂಡಲಾಯಿತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap