ಹುಳಿಯಾರು
ಹುಳಿಯಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ 2018 ಏಪ್ರಿಲ್ ದಿನದಂದು ಪ್ರಾರಂಭವಾಗಿ 2019 ಮಾರ್ಚ್ ದಿನದಂದು ಕೊನೆಗೊಳ್ಳುವ 2018 -2019 ನ ಅವಧಿಯ ಆಸ್ತಿ ತೆರಿಗೆ. ನೀರಿನ ತೆರಿಗೆ, ಉದ್ದಿಮೆ ಪರವಾನಗಿ ಬಾಕಿ ಇರುವ ಶುಲ್ಕದ ತೆರಿಗೆಯನ್ನು ಪಟ್ಟಣ ಪಂಚಾಯಿತಿಗೆ ಪಾವತಿಸುವಂತೆ ಪಪಂ ಮುಖ್ಯಾಧಿಖಾರಿ ಮಂಜುನಾಥ್ ಸೂಚನೆ ನೀಡಿದ್ದಾರೆ.
ಪಾವತಿಸುವ ತೆರಿಗೆಯಿಂದ ಪಟ್ಟಣದ ನೀರಿನ ಸಮಸ್ಯೆ. ಬೀದಿ ದೀಪಗಳ ಸಮಸ್ಯೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಮೂಲಭೂತ ಸೌಕರ್ಯದ ಸಮಸ್ಯೆಗಳನ್ನು ನಿವಾರಿಸಲು ಅನುಕೂಲವಾಗುತ್ತದೆ. ಹಾಗಾಗಿ 2019 ರ ಮಾರ್ಚ್ 31 ರ ಒಳಗೆ ಪಾವತಿಸಿ ಸೂಕ್ತವಾದ ರಸೀದಿ ಪಡೆಯುವುದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಾಕಿ ಉಳಿಸಿಕೊಂಡಿರುವ ತೆರಿಗೆಗೆ ಶೇ.2 ರಷ್ಟು ದಂಡವನ್ನು ಪ್ರತಿ ತಿಂಗಳು ತಾವುಗಳು ಪಾವತಿಸುವವರೆಗೂ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಹಾಗಾಗಿ ಆಸ್ತಿ ಮಾಲೀಕರು, ಅನುಭವದಾರರು ಹಾಗೂ ಉದ್ದಿಮೆ ಮಾಲೀಕರು ತಕ್ಷಣ ಪಪಂ ಕಛೇರಿಗೆ ಬಂದು ತಮ್ಮ ತೆರಿಗೆ ಬಾಕಿಯನ್ನು ಪಾವತಿಸುವಂತೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
