ಹರಪನಹಳ್ಳಿ
ಪ್ರಾಕೃತ್ತಿಕ ಸಂಪತ್ತಿನ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಆಗಬೇಕು ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಹೇಳಿದರು.
ಪಟ್ಟಣದ ಆಚಾರ್ಯ ಬಡಾವಣೆಯ ಸಭಾಂಗಣದಲ್ಲಿ ಶನಿವಾರ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನಿಂದ ಜೀವ ವೈವಿಧ್ಯತೆ ಉಳಿವು ಮತ್ತು ಸಂರಕ್ಷಣೆ ಕುರಿತು ಒಂದು ದಿನದ ಅಂತರ್ ಜಿಲ್ಲಾಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು, ಭೌಗೋಳಿಕವಾಗಿ ಕರ್ನಾಟಕ ರಾಜ್ಯ 3.83 ಮಿಲಿಯನ್ ಹೆಕ್ಟೆರ್ ಅರಣ್ಯ ಪ್ರದೇಶ ಹೊಂದಿದೆ.
ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣದ ಕಾಡು, ಬಯಲು ಸೀಮೆಯ ಕುರುಚಲು ಗಿಡಗಳಿಂದ ಸಂಪದ್ಭರಿತವಾಗಿದೆ. ಪಶ್ಚಿಮಘಟ್ಟವು ಜಾಗತಿಕವಾಗಿ ಅತೀಸೂಕ್ಷ್ಮ ಜೀವವೈವಿದ್ಯತೆ ಹೊಂದಿರುವ ಪ್ರದೇಶಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ 5 ರಾಷ್ಟ್ರೀಯ ಉದ್ಯಾನ, 21 ಪಕ್ಷಿಧಾಮ, 8 ಪ್ರಮುಖ ನದಿ ಹಾಗೂ ಉಪನದಿಗಳನ್ನು ಹೊಂದಿದೆ ಎಂದರು.
ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಗೀತಾಪ್ರಶಾಂತ್ ಮಾತನಾಡಿ, ನಿಸರ್ಗದತ್ತ ತಾಣಗಳ ರಕ್ಷಣೆ, ಪರಿಸರ ಕಾಳಜಿ ಹೊಂದಿದ್ದರೆ ಪ್ರಾಕೃತಿಕ ಸಂಪತ್ತು ಮುಂದಿನ ಪೀಳಿಗೆಗೆ ಉಳಿಸಿ, ರಕ್ಷಿಸಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಪರಿಸರ ಉಳಿವಿಗಾಗಿ ಸಸಿ ನೆಡುವುದು, ಸೆಮಿನಾರ್ ಆಯೋಜಿಸುವುದು, ಪಶುಪಕ್ಷಿಗಳಿಗೆ ನೀರು, ಧಾನ್ಯಗಳ ಲಭ್ಯ ಆಗುವಂತಹ ಕಾರ್ಯಕ್ರಮ ಆಯೋಜಿಸಲು ಕಾರ್ಯಗಾರದಲ್ಲಿ ನಿರ್ಣಯ ಕೈಗೊಂಡರು.
ಕಾರ್ಯಾಗಾರಕ್ಕೆ ಶಿವಮೊಗ್ಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರನಾಯ್ಕ್, ಪ್ರೊ.ಶಾಂತಮೂರ್ತಿ ಕುಲಕರ್ಣಿ, ಯುವ ಗಾಯಿತ್ರಿ, ಸಿದ್ದನಗೌಡ, ಕವಿತ, ಮಹಾಂತೇಶನಾಯ್ಕ, ಎಂ.ಡಿ.ಶ್ರೀಕಾಂತ, ಗಾಯತ್ರಿದೇವಿ, ನಾಗೇಶ್ ಚಿಂತಾಮಣಿ, ಎಂ.ಪಿ.ಎಂ.ಪ್ರಕಾಶ್, ಅಹ್ಮದ್, ಮಹಾಬಲೇಶ್ವರ, ನಂಜುಂಡ, ಮಂಜುನಾಥ ಮತ್ತಿಹಳ್ಳಿ, ಕೆ.ವಿ.ಬಸವರಾಜ್, ಚೆನ್ನಪ್ಪ, ಉಮೇಶ್ ಇತರರು ಪಾಲ್ಗೊಂಡಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ