ಬೆಂಗಳೂರು
ಕೃಷಿ ವಲಯ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದರ ನಿವಾರಣೆಗೆ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ತಂತ್ರಜ್ಞರು ಮಾರ್ಗೋಪಾಯಗಳನ್ನು ಕಂಡು ಹಿಡಿಯಬೇಕೆಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.
ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರಿನಲ್ಲಿಂದು ಆಯೋಜಿಸಿದ್ದ ರೈತರ ವಿಜ್ಞಾನ ಕಾಂಗ್ರೆಸ್ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಗರಿಷ್ಠ ಬೆಂಬಲ ಬೆಲೆ ಮತ್ತು ಮಾರುಕಟ್ಟೆ ಹಸ್ತಕ್ಷೇಪ ಯೋಜನೆ ಎಲ್ಲ ರೈತರಿಗೆ ತಲುಪುವಂತಾಗಬೇಕು ಎಂದರು.
ರೈತರಿಂದ ಪಡೆದ ಆಹಾರ ಧಾನ್ಯಗಳನ್ನು ಶೇಖರಿಸುವ ಗೋದಾಮುಗಳ ವ್ಯವಸ್ಥೆಯಾಗಬೇಕು, ಉತ್ತಮ ಬೆಲೆ ನೀಡುವ ಮಾರುಕಟ್ಟೆಗೆ ದಾಸ್ತಾನು ಮಾಡಲು ರೈತರಿಗೆ ಸಾರಿಗೆ ವೆಚ್ಚ ಪೂರೈಕೆ ಆಗಬೇಕು. ಪ್ರಗತಿಪರ ರೈತರು ಕಂಡುಹಿಡಿದ ಆವಿಷ್ಕಾರಗಳ ಲಾಭ ಎಲ್ಲ ರೈತರಿಗೂ ತಲುಪಬೇಕು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ