ಚಿತ್ರದುರ್ಗ;
ಕರ್ನಾಟಕದಜನತೆಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು.ಕನ್ನಡ ಭಾಷೆಯನ್ನು ಮರೆತರೆ, ಹೆತ್ತತಾಯಿಯನ್ನು ಮರೆತಂತಾಗುತ್ತದೆಎಂದುಕಾರ್ಮಿಕ ಸಚಿವರು ಹಾಗೂ ಚಿತ್ರದುರ್ಗಜಿಲ್ಲಾಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 63 ನೇ ಕನ್ನಡ ರಾಜ್ಯೊತ್ಸವದಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಸಚಿವರು ಮಾತನಾಡಿದರು
ಕರ್ನಾಟಕ ಏಕೀಕರಣಗೊಂಡು 62 ವರ್ಷಗಳೇ ಕಳೆದಿದ್ದರೂ, ಕನ್ನಡ ಭಾಷೆಯ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇಂಗ್ಲೀಷ್ ಬಗೆಗಿನ ವ್ಯಾಮೋಹದಿಂದಾಗಿ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ.ಇಂಗ್ಲೀಷ್ ಭಾಷೆ ನಮಗೆ ಬೇಕು. ಆದರೆ ಕನ್ನಡ ಭಾಷೆಯ ಬಗ್ಗೆ ಅಭಿಮಾನವೂ ಇರಬೇಕು.ಕನ್ನಡ ಭಾಷೆಯನ್ನು ಮರೆತರೆ, ಹೆತ್ತತಾಯಿಯನ್ನು ಮರೆತಂತಾಗಲಿದೆ ಎಂದರು.
ಚಿತ್ರದುರ್ಗಜಿಲ್ಲೆ ಸ್ವಾತಂತ್ರ್ಯ ಕಾಲದಿಂದಲೂ ಪದೇ ಪದೇ ಬರ ಪರಿಸ್ಥಿತಿಗೆ ತುತ್ತಾಗುತ್ತಿರುವ ಜಿಲ್ಲೆಯಾಗಿದ್ದು, ಐತಿಹಾಸಿಕವಾಗಿ ಖ್ಯಾತಿಯನ್ನು ಗಳಿಸಿದ್ದರೂ, ಅಭಿವೃದ್ಧಿಯದೃಷ್ಟಿಯಿಂದ ಇನ್ನೂ ಬಹಳಷ್ಟು ಹಿಂದುಳಿದಿದೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ.ಸಾವಿರ ಅಡಿ ಬೋರ್‍ವೆಲ್‍ಕೊರೆದರೂ ನೀರು ಸಿಗುತ್ತಿಲ್ಲ.ಈ ವರ್ಷ ಮುಂಗಾರು ಮಳೆಯ ಕೊರತೆಯಿಂದಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶಎಂದು ಘೋಷಿಸಿದೆ.ಹೀಗಾಗಿ ಜನರಿಗೆ ಕುಡಿಯಲು ನೀರು, ಜಾನುವಾರುಗಳಿಗೆ ಮೇವು, ಹಾಗೂ ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದರು
ಈ ವರ್ಷದ ಬರ ಪರಿಸ್ಥಿತಿಯನ್ನು ಸಮರ್ಥವಾಗಿಎದುರಿಸಲು ನಾವು ಸರ್ವರೀತಿಯಿಂದಲೂ ಸಜ್ಜಾಗಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಅಜ್ಜಂಪುರದ ಬಳಿ ಸುರಂಗದಕಾಮಗಾರಿ ಮುಕ್ತಾಯವಾಗಿದ್ದು ಪಂಪ್ ಹೌಸ್ ಕಾಮಗಾರಿಗಳು ಮುಕ್ತಾಯವಾಗಿರುವುದರಿಂದ ಡಿಸೆಂಬರ್ ಅಂತ್ಯ ಅಥವಾ ಜನವರಿ ಮೊದಲ ವಾರದೊಳಗೆ ಅಜ್ಜಂಪುರದ ಬಳಿಯಿಂದ ಹಳ್ಳದ ಮೂಲಕ ಪ್ರಾಯೋಗಿಕವಾಗಿ ವಿ.ವಿ.ಸಾಗರಕ್ಕೆ ನೀರು ಹರಿಸಬೇಕೆನ್ನುವುದು ನಮ್ಮ ಪ್ರಯತ್ನವಾಗಿದೆ.ಇದರಿಂದಜಿಲ್ಲೆಯ ಹೊಸದುರ್ಗ, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ ತಾಲ್ಲೂಕುಗಳಲ್ಲಿ ಈ ಬೇಸಿಗೆಯಲ್ಲಿ ಬರಬಹುದಾದಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬಹುದಾಗಿದೆ.ಭದ್ರಾ ಮೇಲ್ದಂಡೆಯೋಜನೆಯಡಿ ನೀರುತರದಿದ್ದರೆ, ನಮ್ಮ ಮೇಲೆ ವಿಶ್ವಾಸವಿರಿಸಿರುವ ಜನತೆಗೆ ನಾವು ದ್ರೋಹ ಬಗೆದಂತಾಗಲಿದೆ.
ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಜನತೆಗೆ ಮುಟ್ಟಿಸುವ ಕೆಲಸವನ್ನುಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಸಮರ್ಪಕವಾಗಿ ಮಾಡಲಾಗುವುದು.ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕುಎಂದುಕಾರ್ಮಿಕ ಸಚಿವರು ಹಾಗೂ ಚಿತ್ರದುರ್ಗಜಿಲ್ಲಾಉಸ್ತುವಾರಿ ಸಚಿವರಾದ ವೆಂಕಟರಮಣಪ್ಪಅವರು ಹೇಳಿದರು.
ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿಅಧ್ಯಕ್ಷತೆ ವಹಿಸಿದ್ದರು. ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ವಿಧಾನ ಪರಿಷತ್ ಸದಸ್ಯೆ ಜಯಮ್ಮ ಬಾಲರಾಜ್, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಡಾ; ನಂದಿನಿ, ಉಪ ವಿಭಾಗಾಧಿಕಾರಿ ವಿಜಯಕುಮರ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಭಾಗವಹಿಸಿದ್ದರು.
ಕನ್ನಡರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು, ನುಡಿ ಬಿಂಬಿಸುವ ಆಕರ್ಷಕ ಸ್ತಬ್ಧಚಿತ್ರಗಳ ಮೆರವಣಿಗೆ, ವಿವಿಧ ಕಲಾತಂಡಗಳೊಂದಿಗೆ ನಗರದ ನೀಲಕಂಠೇಶ್ವರದೇವಸ್ಥಾನದ ಮುಂಭಾಗ ಕನ್ನಡಾಂಬೆ ಭುವನೇಶ್ವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸುವ ಮೂಲಕ ಆರಂಭಿಸಲಾಯಿತು. ಸಂಸದರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ಸ್ತಬ್ದ ಚಿತ್ರಗಳು ಗಾಂಧಿವೃತ್ತ, ಸ್ಟೇಟ್ ಬ್ಯಾಂಕ್ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಮದಕರಿ ವೃತ್ತ ಮುಖಾಂತರ ಪೊಲೀಸ್‍ಕವಾಯತು ಮೈದಾನದವರೆಗೆ ಸಾಗಿ ಬಂದಿತು. ಸ್ತಬ್ದಚಿತ್ರಗಳನ್ನು ನಗರಸಭೆ, ಚಿತ್ರದುರ್ಗ, ಆರೋಗ್ಯಜಿಲ್ಲಾಆಸ್ಪತ್ರೆ, ತೋಟಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಶಿಕ್ಷಣ ಇಲಾಖೆ, ರೇಷ್ಮೆ ಇಲಾಖೆ, ಎ.ಸಿ.ಬಿ, ಸಮಾಜಕಲ್ಯಾಣ ಇಲಾಖೆ, ಅಬಕಾರಿ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಪಂಚಾಯತ್, ಅರಣ್ಯಇಲಾಖೆಯಿಂದ ಸಿದ್ದಪಡಿಸಲಾಗಿತ್ತು. ಇದರಲ್ಲಿ ಮೊದಲ ಸ್ಥಾನ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ದ್ವಿತೀಯ, ಅರಣ್ಯ ಇಲಾಖೆ ತೃತೀಯ ಹಾಗೂ ನಾಲ್ಕನೇ ಸ್ಥಾನವನ್ನುಜಿಲ್ಲಾಆಸ್ಪತ್ರೆ ಪಡೆಯಿತು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ