ತಿಪಟೂರು : ಕ್ರಿಡಾಂಗಣದ ಮೂಲಕ ರಸ್ತೆ ನಿರ್ಮಾಣ ಸರಿಯೇ?

ತಿಪಟೂರು :

     ಒಂದು ಊರಿನಲ್ಲಿ ಒಂದು ಕ್ರೀಡಾಂಗಣವಿದ್ದರೆ ಒಂದು ಉತ್ತಮವಾದ ವೈದ್ಯಶಾಲೆ ಇದ್ದಂತೆ ಎಂಬುದು ಚಿರಪರಿಚಿತ ಆದರೆ ಅಲ್ಲಿಗೆ ಬರುವ ಕ್ರೀಡಾಪಟುಗಳು, ನಾಗರೀಕರು, ಹಿರಿಯರು ಒಂದು ವಾಯುವಿಹಾರಮಾಡಿಕೊಂಡು ತಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ ಇಂತಹದ್ದೇ ಒಂದು ಕ್ರೀಡಾಂಗಣ ನಮ್ಮ ತಿಪಟೂರು ನಗರದಲ್ಲಿದ್ದು ಇದುವರೆಗೂ ಅದೆಷ್ಟೋ ಕ್ರೀಡಾಪಟುಗಳಿಗೆ ಆಶ್ರಯತಾಣವಾಗಿ, ಸುತ್ತಮುತ್ತಲಿನ ನಾಗರೀಕರಿಗೆ ಮಕ್ಕಳನ್ನು ಆಡಿಸಲು ಆಶ್ರಯ ತಾಣವಾಗಿತ್ತು.

     ಇನ್ನು ಕ್ರೀಡಾಂಗಣವೆಂದರೆ ಅದರೊಳಗೆ ವಾಹನಗಳು ಬರದಂತೆ ನೋಡಿಕೊಳ್ಳುವುದು ಸರಿ ಆದರೆ ನಮ್ಮ ಅಧಿಕಾರಿ ವರ್ಗದವರಿಗೆ ಇದರ ಬಗ್ಗೆ ಕಿಂಚಿತ್ತೂ ಜ್ಞಾನವಿದ್ದಂತೆ ಕಾಣುತ್ತಿಲ್ಲ ಏಕೆಂದರೆ ಕ್ರೀಡಾಂಗಣದ ಒಂದು ಕಡೆ ಬಿ.ಹೆಚ್.ರಸ್ತೆ, ಅದರ ಪಕ್ಕದಲ್ಲೆ ಉಪವಿಭಾಗಾ ಧಿಕಾರಿ ಕಛೇರಿ, ಇನ್ನುದು ಭಾಗಕ್ಕೆ ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ, ಬಿ.ಆರ್.ಸಿ ಕಛೇರಿ, ಶತಮಾನದ ಹೊಸ್ತಿಲಿನಲ್ಲಿರುವ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಮತ್ತೊಂದೆಡೆ ಯಾವುದಕ್ಕೆ ಕಡಿಮೆಇಲ್ಲದಂತೆ ಮುನ್ನುಗುತ್ತಿರುವ ಸರ್ಕಾರಿ ಬಾಲಕರ ಪದವಿಪೂರ್ವಕಾಲೇಜು, ಇನ್ನೊಂದು ಭಾಗಕ್ಕೆ ಹೆಚ್ಚಿನ ಅಧಿಕಾರಿಗಳು, ವಕೀಲರುಗಳು, ಶಿಕ್ಷಕರುಗಳು ತುಂಬಿರುವ ಕೆ.ಹೆಚ್.ಬಿ.ಕಾಲೋನಿಇದ್ದೆ.

      ಕ್ರೀಡಾಂಗಣದ ಒಳಭಾಗದಿಂದ ನಿರ್ಮಿಸುತ್ತಿರುವ ಈ ರಸ್ತೆ ಕೆ.ಹೆಚ್.ಬಿ ಕಾಲೋನಿಗೆ ಬಿ.ಹೆಚ್.ರಸ್ತೆಯಿಂದ ಕೆ.ಹೆಚ್.ಬಿ ಕಾಲೋನಿಗೆ ತಲುಪುತ್ತದೆ. ಅದರೆ ಈ ರಸ್ತೆಯನ್ನು ಬಿಟ್ಟು ಕೆ.ಹೆಚ್.ಬಿ ಕಾಲೋನಿಗೆ ಅಷ್ಟ ದಿಕ್ಕುಗಳಿಂದಲೂ ರಸ್ತೆಯಿದ್ದು ಈ ರಸ್ತೆಯ ಅವಶ್ಯಕತೆ ಇತ್ತೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

      ಕ್ರೀಡಾಂಗಣವು ಅಭಿವೃದ್ಧಿಯಾಗುವ ಬದಲು ಹಾಳಾಗುತ್ತಾ ಸಾಗುತ್ತಿರುವ ಈ ಸಂದರ್ಭದಲ್ಲಿ ಈ ರಸ್ತೆಯ ಜರೂರತ್ತು ಏನಿತ್ತು ಇಲ್ಲಿ ಸೇತುವೆ ನಿರ್ಮಿಸುವ ಬದಲು ಕ್ರೀಡಾಂಗಣದಲ್ಲಿ ಹಾಳಾಗಿರುವ ಚರಂಡಿಯನ್ನು ಮತ್ತು ಕುಳಿತುಕೊಳ್ಳುವ ಕಲ್ಲುಚಪ್ಪಡಿಗಳನ್ನು ಮೊದಲು ಸರಿಪಡಿಸಿ, ಕ್ರೀಡಾಂಗಣದ ಮದ್ಯೆ ರಸ್ತೆ ನಿರ್ಮಿಸಿದರೆ ಇಲ್ಲಿ ಆಡವಾಡುವ ಕ್ರೀಡಾಪಟುಗಳಿಗೆ ಗುದ್ದಿ ಕ್ರೀಡಾಪಟುಗಳಿಗೆ ಅಪಘಾತವಾಗುವ ಸಂಭವವಗಳು ಹೆಚ್ಚಾಗಿರುತ್ತವೆ ಆದ್ದರಿಂದ ಈ ರಸ್ತೆಯನ್ನು ಮುಚ್ಚಿ ಸೂಕ್ತ ರೀತಿಯಲ್ಲಿ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸುವತ್ತ ಅಧಿಕಾರಿಗಳು ಗಮನಹರಿಸಬೇಕೆಂದು ಕ್ರೀಡಾಪಟುಗಳು ಮತ್ತು ವಾಯುವಿಹಾರಿಗಳ ಅಭಿಪ್ರಾಯವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap