ದಾವಣಗೆರೆ :
ಎಲ್ಲಾ ದಾನಗಳಿಗಿಂತಲೂ ರಕ್ತದಾನ ಶ್ರೇಷ್ಠದಾನವಾಗಿದೆ. ಒಬ್ಬರು ಒಂದು ಯುನಿಟ್ ರಕ್ತ ನೀಡಿದರೆ, ಕನಿಷ್ಠ 3 ಜನರ ಪ್ರಾಣ ಉಳಿಸಬಹುದು ಎಂದು ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ ಅಭಿಪ್ರಾಯಪಟ್ಟರು.
ರಿದ್ಧಿ- ಸಿದ್ದಿ ಫೌಂಡೇಶನ್‍ನ 2ನೇ ವಾರ್ಷಿಕೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ ಹಾಗೂ ಆಶಾಕಿರಣ ಟ್ರಸ್ಟ್‍ನ ವಿಶೇಷಚೇತನ ಮಕ್ಕಳೊಂದಿಗೆ ಭೋಜನಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಿದ್ಧಿ- ಸಿದ್ದಿ ಫೌಂಡೇಶನ್‍ನ ಅಧ್ಯಕ್ಷ ರಾಜು ಭಂಡಾರಿ ಮಾತನಾಡಿ, ನಮ್ಮ ಫೌಂಡೇಷನ್ ಕಡುಬಡವರಿಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತಾ ಬಂದಿದ್ದು, ಬಡವರು ನಿಧನರಾದರೆ ಅವರ ಅಂತ್ಯಕ್ರಿಯೆಗೆ ಆರ್ಥಿಕ ನೆರವು ಸಹ ನೀಡಲಾಗುತ್ತಿದೆ ಎಂದರು.
ಫೌಂಡೇಶನ್‍ನಿಂದ ರಕ್ತದಾನ, ವಿಶೇಷಚೇತನ ಮಕ್ಕಳಿಗೆ ಸಹಾಯವಲ್ಲದೇ ಮಹಿಳೆಯರಿಗೆ ಹೊಲಿಗೆಯಂತ್ರಗಳು ನೀಡುವ ಮೂಲಕ ಸಮಾಜಮುಖಿ ಮತ್ತು ನಿಸ್ವಾರ್ಥ ಸೇವೆ ಸಿಗುತ್ತಿರುವುದರಿಂದ ಸಾವಿರಾರು ಬಡವರಿಗೆ ಅನುಕೂಲವಾಗಿದೆ ಎಂದರು.ರೂಪದರ್ಶಿ ಡಿಂಪಲ್ ಏಂಜಲಿನಾ ಅವರು ಆಗಮಿಸಿ ವಿಶೇಷಚೇತನ ಮಕ್ಕಳಿಗೆ ಊಟ ಬಡಿಸುವ ಮೂಲಕ ಸರಳತೆ ಮೆರೆದರು ಹಾಗೂ ರಿದ್ಧಿ- ಸಿದ್ದಿ ಫೌಂಡೇಶನ್‍ನ ನಡೆಸುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಡಾ|| ಸುರೇಶ್ ಹನಗವಾಡಿ, ಡಾ||ರಾಜಶೇಖರ್, ಡಾ|| ಶ್ವೇತಾ, ಡಾ|| ವಿಶ್ವನಾಥ, ಡೂಡಾ ಅಧ್ಯಕ್ಷ ಅಯೂಬ್ ಪೈಲ್ವಾನ್, ಶ್ರೀಕಾಂತ್ ಬಗೇರ, ಕಾರ್ಯದರ್ಶಿ ವಿಜಯಕುಮಾರ್, ರಾಕೇಶ್, ಅನಿಲ್ ಬಾರೆಂಗಳ್, ಗೋಪಾಲಕೃಷ್ಣ, ಮಾಧವ್ ಪದಕಿ, ಪಿ.ಸಿ.ರಾಮನಾಥ್, ಈಶ್ವರ್ ಸಿಂಗ್ ಕವಿತಾಳ್, ಎಲ್.ಎಚ್. ಸಾಗರ್, ನಫೀಜಾ, ರೋನಕ್, ಅಂಕುಶ್, ನಾಗೇಶ್, ಪ್ರವೀಣ್, ಪಿಂಟ್, ಅನಿಲ್, ಜೀತ್‍ದಾಸ್, ಕುಮಾರ್ ಪಾಲ್, ಸುದೀಪ್ ಜೈನ್, ಸುನೀಲ್ ಓಸ್ವಾಲ್, ಪುಕ್‍ರಾಜ್, ಭರತ್ ಮತ್ತಿತರರಿದ್ದರು.