ಕಲ್ಪತರು ನಾಡಿನಲ್ಲಿ ಅಸ್ಪೃಷ್ಯತೆ ಇನ್ನೂ ಜೀವಂತವೇ?

ತಿಪಟೂರು :

        ನೆನ್ನೇ ತಾನೇ ಸಂವಿಧಾನಶಿಲ್ಪ ಅಂಬೇಡ್ಕರ್ ಜಯಂತಿಯನ್ನು ಆಚರಿಸಿ ಮಹಾನ್‍ನಾಯಕನಿಗೆ ನಮಿಸುವ ಸಂದರ್ಭದಲ್ಲಿ ತಾಲ್ಲೂಕಿನ ಬಿಸಲೇಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಸ್ಪøಷ್ಯತೆ ಇನ್ನು ತಾಂಡವವಾಡುತ್ತಿದೆಎಂದು ಗ್ರಾಮಸ್ಥರು ಪ್ರತಿಭಟಿಸಿರುವುದು ವರದಿಯಾಗಿದೆ.

        ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ತಾಲ್ಲೂಕಿನ ಗಡಿಭಾಗವಾದ ಬಿಸಲೇಹಳ್ಳಿಲ್ಲಿರುವ ಬಿಸಲೇಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ದಲಿತರು ನಮ್ಮ ಹಾಲನ್ನು ಹಾಕಿಸಿಕೊಳ್ಳುತ್ತಿಲ್ಲವೆಂದು ಆರೋಪಿಸಿ ಸಹಕಾರ ಸಂಘದವಿರುದ್ದ ದಿಕ್ಕಾರಕೂಗಿದರು. ಇದರ ಬಗ್ಗೆ ವಿಚಾರಿಸಿದಾಗ ನಾವು ಮೊದಲಿನಿಂದಲೂ ಹಾಲನ್ನು ಹಾಕುತ್ತಿದ್ದು ಇತೀಚೆಗೆ ಇಲ್ಲಿನ ವ್ಯವಾಹರದಲ್ಲಿ ಲೋಪಕಂಡು ಬಂದ ಹಿನ್ನೆಲೆಯಲ್ಲಿ ನಾವು ಕೇಳಿದ್ದಕ್ಕೆ ನಿಮ್ಮನ್ನು ಸಂಘದಿಂದ ಉಚ್ಚಾಟಿಸಿದ್ದೇವೆ

         ನಿಮ್ಮ ಹಾಲನ್ನು ಹಾಕಿಸಿಕೊಳ್ಳುವುದಿಲ್ಲವೆಂದು ಹೇಳಿದ್ದಕ್ಕೆ ನಾವು ಖಾಸಗಿ ಡೈರಿಗೆ ಹಾಲನ್ನು ಹಾಕುತ್ತಿದ್ದು ಈಗ ಇಲ್ಲಿಗೆ ಪುನ: ಹಾಲನ್ನು ಹಾಕಲು ಬಂದಿದ್ದಕ್ಕೆ ನೀವು ಹಾಲನ್ನು ಹಾಕಬೇಕೆಂದರೆ ಒಕ್ಕೂಟದ ಎಂ.ಡಿ ಇಂದ ಪತ್ರವನ್ನು ತೆಗೆದುಕೊಂಡು ಬಂದರೆ ಮಾತ್ರ ನಿಮ್ಮ ಹತ್ತಿರ ಹಾಲನ್ನು ಹಾಕಿಸಿಕೊಳ್ಳುತ್ತೆವೆಂದು ಸಂಘದ ಕಾರ್ಯದರ್ಶಿ ನಟರಾಜು ಹೇಳಿ ಇದರಬಗ್ಗೆ ನೊಣವಿನಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಮಗೆ ಪತ್ರವನ್ನು ಬರೆದುಕೊಟ್ಟಿರುತ್ತಾರೆಂದು ಶಿವರಾಜ್ ತಿಳಿಸಿದರು.

          ಗ್ರಾಮದಲ್ಲಿ 150 ದಲಿತಕುಟುಂಬಗಳು ಮತ್ತು 50 ಸವರ್ಣೀಯರ ಕುಟುಂಬಗಳಿದ್ದು ಬಹಳ ಹಿಂದಿನಿಂದಲೂ ದೇವಸ್ಥಾನದ ವಿಚಾರವಾಗಿ ಕಿರಿಕಿರಿ ಇದ್ದಿದ್ದೇ ಎಂದು ಗ್ರಾಮದ ಹಿರಿಯರು ತಿಳಿಸಿದರು.

           ಸಂಘದ ಸದಸ್ಯ ಮೋಹನಕುಮಾರ್ ನನಗೆ ಉಚಿತವಾಗಿ ಬಂದಿದ್ದ ಹಸುಗಳಲೋನ್‍ಅನ್ನು ನನಗೆ ಗೊತ್ತಿಲ್ಲದಂತೆ ಪಕ್ಕದ ಊರಿಗೆ ಹೋಗಿಬರೋಣವೆಂದು ತಿಳಿಸಿ ಅಲ್ಲಿ ಒಬ್ಬರಮನೆಯ ಹೊರಗಡೆ ನನ್ನನ್ನು ನಿಲ್ಲಿಸಿ ನನ್ನ ಹತ್ತಿರ ಯಾವುದಕ್ಕೂ ರುಜುಬೇಕೆಂದು ಮಾಡಿಸಿಕೊಂಡು ಕೆಲದಿನಗಳ ನಂತರ ನನಗೆ ಕೇವಲ 5 ಸಾವಿರಗಳನ್ನ ನೀಡಿ ಲೋನಿಂದ ಬಂದಿದ್ದು ಎಂದು ತಿಳಿಸಿ ನನಗೆ ಮೋಸಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ನನ್ನನ್ನು ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿರುವುದಾಗಿ ತಿಳಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸಂಘದ ಕಾರ್ಯದರ್ಶಿ ನಟರಾಜುರನ್ನು ವಿಚಾರಸಿದಾಗ ಈ ಮೇಲ್ಕಂಡವರು ಈಗ ದಲಿತರು ಎಂಬ ಉದ್ದೇಶಕ್ಕೆ ಹಾಲನ್ನು ಹಾಕಿಸಿಕೊಳ್ಳುತ್ತಿಲ್ಲವೆಂದು ಹೇಳುತ್ತಿದ್ದಾರೆ ಆದರೆ ಇವರೆಲ್ಲರೂ 2 ಬಾರಿ ಗಲಾಟೆಮಾಡಿದ್ದರಿಂದ ಅವರು ಎಂ.ಡಿ. ಇಂದ ಪತ್ರ ತಂದರೆ ಹಾಲುಹಾಕಿಸುಕೊಳ್ಳುವುದಾಗಿ ತಿಳಿಸಿದ್ದಾರೆ.

         ಇಂದಿನ ಬರಗಾಲದಲ್ಲಿ ನಾವು ಹೈನುಗಾರಿಕೆಯನ್ನೇ ಮುಖ್ಯವಾಗಿ ಮಾಡಿಕೊಂಡಿದ್ದು ಖಾಸಗಿ ಪೈನಾನ್ಸ್‍ನಿಂದ ಸಾಲ-ಸೋಲ ಮಾಡಿಕೊಂಡು ಹೈನುಗಾರಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಹಾಲು ಹಾಕಿಸಿಕೊಳ್ಳದೇ ಇದ್ದರೆ ಸಾವು ಸಾಲವನ್ನು ಕಟ್ಟುವದಾದರೂ ಹೇಗೆ ಎಮದು ಹೇಳಿ ತಮ್ಮ ಅಳಲನ್ನು ತೊಡಿಕೊಂಡರು.

         ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದವರು, ದಲಿಸಂಘಟನೆಗಳ ಮುಖ್ಯಸ್ಥರುಗಳು, ಗ್ರಾಮಸ್ಥರು ಉಪಸ್ಥಿತರಿದ್ದು ಸಂಘದ ವಿರುದ್ದ ಘೋಷಣೆ ಕೂಗಿ ನಮ್ಮ ಹಾಲು ಹಾಕಿಸಿಕೊಳ್ಳದಿದ್ದರೆ ನಮ್ಮ ಊರಿಗೆ ಸಂಘವೇ ಬೇಡವೆಂದು ದಿಕ್ಕಾರ ಕೂಗಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap