ಬೆಂಗಳೂರು:
ತಮ್ಮ ತಂದೆ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ಶ್ರುತಿ ಹರಿಹರನ್ ಹಾಗೂ ಅವರ ಆರೋಪಕ್ಕೆ ಬೆಂಬಲ ನೀಡಿರುವ ನಟ ಚೇತನ್ ಬಗ್ಗೆ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡ ಐಶ್ವರ್ಯ ಸರ್ಜಾ, ಶ್ರುತಿ ಹರಿಹರನ್ ತಮ್ಮ ಆರೋಪದ್ಲಲಿ ಅರ್ಜುನ್ ಸರ್ಜಾ ಡಿನ್ನರ್ ಗೆ ಕರೆದಿದ್ದರು ಎಂದು ಹೇಳಿದ್ದಾರೆ.ಬರೀ ಊಟಕ್ಕೆ ಕರೆದಿದ್ದೇ ಲೈಂಗಿಕ ಕಿರುಕುಳ ಆಗುವುದಾದರೆ ನಟ ಚೇತನ್ ಸಹ ನನ್ನನ್ನು ಊಟಕ್ಕೆ ಕರೆದಿದ್ದರು, ಅದೂ ಕೂಡ ಲೈಂಗಿಕ ಕಿರುಕುಳವಾಗಬಹುದು ಎಂದು ಐಶ್ವರ್ಯ ಸರ್ಜಾ ತಿರುಗೇಟು ನೀಡಿ ತಮ್ಮ ತಂದೆಯ ಪರ ಬ್ಯಾಟಿಂಗ್ ನಡೆಸಿದ್ದಾರೆ.
#MeToo ಆರೋಪ ಮಾಡುವುದಕ್ಕೂ ಒಂದು ತಿಂಗಳ ಹಿಂದೆಯಷ್ಟೇ ಶ್ರುತಿ ಹರಿಹರನ್ ನನ್ನ ತಂದೆ ಟ್ವಿಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ. ಘಟನೆ ನಡೆದು ಅಷ್ಟು ದಿನವಾಗಿದ್ದರೂ ಶ್ರುತಿ ಹರಿಹರನ್ ಟ್ವಿಟರ್ ನಲ್ಲಿ ಏಕೆ ನನ್ನ ತಂದೆಯವರನ್ನು ಏಕೆ ಅನ್ ಫಾಲೋ ಮಾಡಲಿಲ್ಲ, ಶ್ರುತಿ ಹರಿಹರನ್ ಗೆ ಸ್ವಾಭಿಮಾನ ಇರಲಿಲ್ಲವೇ? ಇಷ್ಟು ದಿನ ಸುಮ್ಮನಿದ್ದಿದ್ದರ ಬಗ್ಗೆ ಉತ್ತರಿಸಬೇಕಿದೆ ಐಶ್ವರ್ಯ ಸರ್ಜಾ ಹೇಳಿದ್ದಾರೆ.
ಹಾಗಿದ್ದರೆ ನಟ ಚೇತನ್ ನನ್ನ ಮೊದಲ ಚಿತ್ರವಾದ ಪ್ರೇಮ ಬರಹ ಸಿನಿಮಾ ವರ್ಕ್ ಶಾಪ್ ವೇಳೆ ನನ್ನ ಬೆನ್ನು ಮುಟ್ಟಿದ್ದರು, ಅಲ್ಲದೇ ಊಟಕ್ಕೂ ಕರೆದಿದ್ದರು. ಇದನ್ನೂ ಲೈಂಗಿಕ ಕಿರುಕುಳ ಎಂದು ಕರೆಯಬಹುದುಲ್ಲವೇ ಎಂದು ಐಶ್ವರ್ಯ ಪ್ರಶ್ನೆ ಮಾಡಿದ್ದಾರೆ.