ಬೈರೂತ್
ಇಸ್ರೇಲ್ ಗಡಿಯೊಂದಿಗೆ ಹೊಂದಿಕೊಂಡಿರುವ ಲೆಬನಾನ್ ಅರಣ್ಯದ ಬಳಿ ಇಸ್ರೇಲ್ ಡ್ರೋನ್ ದಾಳಿ ನಡೆಸಿದೆ ಎಂದು ಮಾಧ್ಯಮ ಭಾನುವಾರ ವರದಿ ಮಾಡಿದೆ.ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ಬೆಟ್ಟಗಳನ್ನು ಗುರಿಯಾಗಿಸಿಕೊಂಡು ಫಿರಂಗಿ ದಾಳಿ ನಡೆಸಿದೆ ಎಂದು ಲೆಬನಾನಿನ ಅಲ್-ಮನಾರ್ ಟಿವಿ ಚಾನೆಲ್ ವರದಿ ಮಾಡಿದೆ.
ಲೆಬನಾನಿನ ಗಡಿ ಪಟ್ಟಣಗಳಾದ ಗಜರ್, ಶೆಬಾ ಬಳಿ, ಐಡಿಎಫ್ 30ಕ್ಕೂ ಹೆಚ್ಚು ಬಾಂಬ್‌ಗಳನ್ನು ಹಾಕಿದೆ ಎಂದು ಶನಿವಾರ ಮಾಧ್ಯಮಗಳು ವರದಿ ಮಾಡಿವೆ.ಕಳೆದ ಭಾನುವಾರ ಬೈರುತ್ ಬಳಿಯ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನ ಕಚೇರಿಯ ಮೇಲೆ ನಡೆದ ಡ್ರೋಣ್ ದಾಳಿಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಲೆಬನಾನ್ ಆರೋಪಿಸಿತ್ತು, ನಂತರ ಪೂರ್ವ ಲೆಬನಾನ್‌ನ ಪ್ಯಾಲೆಸ್ತೀನಿಯನ್ ಸೇನಾ ನೆಲೆಗಳ ಮೇಲೆ ಮತ್ತೊಂದು ದಾಳಿ ನಡೆದಿತ್ತು.
ತನ್ನ ವಾಯುಪ್ರದೇಶದಲ್ಲಿ ಇಸ್ರೇಲ್‍ನ ಹಿಜ್ಬುಲ್ಲಾ ವಿರೋಧಿ ಕಾರ್ಯಾಚರಣೆಯನ್ನು ಲೆಬನಾನ್ ಪದೇ ಪದೇ ಆಕ್ಷೇಪಿಸುತ್ತಿದ್ದು, ದೇಶದ ಸಾರ್ವಭೌಮತ್ವ ಮತ್ತು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿರ್ಣಯ 1701 ಅನ್ನು ಇಸ್ರೇಲ್ ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








