ಮಾರ್ಚ್ 5ರಂದು ಜಿಐಸ್ಯಾಟ್-1 ಉಪಗ್ರಹ ಉಡಾವಣೆ : ಇಸ್ರೋ

ಬೆಂಗಳೂರು

    ಬಾಹ್ಯಾಕಾಶ ವಿಜ್ಞಾನದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಇಸ್ರೋ  ಮಾರ್ಚ್ 5ರಂದು ‘ಜಿಐಸ್ಯಾಟ್-1’ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹನ ಜಿಎಸ್‌ಎಲ್‌ವಿ ಎಫ್ 10 ಮೂಲಕ ಈ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿದೆ . ಶ್ರೀಹರಿಕೋಟಾದ ಸತೀಶ್ ದವನ್ ಬಾಹ್ಯಾಕಾಶ ಕೇಂದ್ರದಿಂದ ಮಾರ್ಚ್ 5ರ ಸಂಜೆ 5.43ಕ್ಕೆ ಉಡಾವಣೆ ಮಾಡಲು ಉದ್ದೇಶಿಸಲಾಗಿದೆ. ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಉಡಾವಣೆ ನಡೆಯಲಿದೆ ಎಂದು ಇಸ್ರೋ ತಿಳಿಸಿದೆ.

   2,275 ಕೆ.ಜಿ. ತೂಕದ ಜಿಐಸ್ಯಾಟ್-1 ಕ್ಷಿಪ್ರ ಭೂ ವೀಕ್ಷಣಾ ಗುಣವನ್ನು ಹೊಂದಿದ್ದು, ಜಿಎಸ್‌ಎಲ್‌ವಿ-10 ಉಡಾವಣಾ ವಾಹನದ ಮೂಲಕ ಭೂಸ್ಥಾಯಿ ವರ್ಗಾವಣೆ ಕಕ್ಷೆಗೆ ಸೇರ್ಪಡೆಗೊಳ್ಳಲಿದೆ.ಭೂಸ್ಥಾಯಿ ಕಕ್ಷೆಯಿಂದ ಕಾರ್ಯಾಚರಣೆ ನಡೆಸಲಿರುವ ಜಿಐಸ್ಯಾಟ್-1 ಭಾರತ ಉಪಖಂಡದಲ್ಲಿ ಮೋಡರಹಿತ ವಾತಾವರಣದಲ್ಲಿ ಆಗಾಗ್ಗೆ ವಿರಾಮಗಳ ನಡುವೆ ರಿಯಲ್ ಟೈಮ್ ಗ್ರಹಿಕೆಯನ್ನು ಮಾಡಲಿದೆ.

   4 ಮೀಟರ್ ವ್ಯಾಸದ ಚಾವಣಿಯಾಕಾರದ ಪೇಲೋಡ್ ಮೊದಲ ಬಾರಿಗೆ ಜಿಎಸ್ಎಲ್‌ವಿ ಮೂಲಕ ಉಡಾವಣೆಗೊಳ್ಳುತ್ತಿದೆ. ಇದು ಒಟ್ಟಾರೆಯಾಗಿ ಜಿಎಸ್‌ಎಲ್‌ವಿ ವಾಹನದ 14ನೇ ಹಾರಾಟವಾಗಿದೆ. ಜಿಐಸ್ಯಾಟ್ ಉಪಗ್ರಹವು ಏಳ ವರ್ಷಗಳ ಜೀವಿತಾವಧಿ ಹೊಂದಿದೆ. ಇದು ಬಹುವರ್ಣಪಟಲದ ಐದು ಬಗೆಯ ಕ್ಯಾಮೆರಾಗಳನ್ನು ಹೊಂದಿದ್ದು, ದೇಶದ ಬಹುತೇಕ ಭಾಗಗಳ ರಿಯಲ್ ಟೈಮ್ ಚಿತ್ರಗಳನ್ನು ರವಾನಿಸುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap