ಬೆಂಗಳೂರು
ದೇಶದ ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ಕೊರೊನಾವೈರಸ್ ದೆಸೆಯಿಂದ ಐಟಿ ಕಂಪನಿಗಳು ಉದ್ಯೋಗ ಕಡಿತ ಆರಂಭಿಸಿವೆಯೇ? ಎಂಬ ಪ್ರಶ್ನೆ ಮೂಡುತ್ತಿದೆ, ಯಾವುದೇ ಕಾರಣವಿಲ್ಲದೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಕುಂಟು ನೆಪ ನೀಡಿ ಟೆಕ್ಕಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತಿದೆ ಎಂಬ ಊಹಾಪೋಹಗಳು ಎದ್ದು ಯದ್ಯೋಗಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗಿದೆ ಎಂದು ನೊಂದ ಿಂಜಿನೆಯರ್ ಒಬ್ಬರು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಈ ರೀತಿ ಸುದ್ದಿ ವರ್ಕ್ ಫ್ರಂ ಹೋಮ್ ಮಾಡುತ್ತಿರುವ ಹಲವು ಟೆಕ್ಕಿಗಳಿಗೆ ಆಘಾತ ಮೂಡಿಸಿದೆ. ಎಕೋಸ್ಪೇಸ್ ನಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರ ಮಹಿಳಾ ಸಾಫ್ಟ್ ವೇರ್ ಉದ್ಯೋಗಿ ವಜಾಗೊಂಡ ಬಳಿಕ ತಮಗಾದ ೀ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಯಾವಾಗಲು ತಮ್ಮನ್ನು ತಾವು ಐ ಟಿ ಕೂಲಿಗಳೆಂದು ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುವ ುದ್ಯೋಗಿಗಳು ಈಗ ತಮ್ಮನ್ನು ಕಾರ್ಮಿಕರೆಂದು ಇಲಾಖೆ ಪರಿಗಣಿಸುವುದೇ ಎಂಬ ಗೊಂದಲ ಉದ್ಯೋಗಿಗಳಲ್ಲಿ ಮೂಡುತ್ತಿದೆ ಎನ್ನಲಾಗಿದೆ , ಇನ್ನು ಉದ್ಯೋಗ ನಷ್ಟ ಅನುಭವಿಸಿದ ನೊಂದ ುದ್ಯೋಗಿ ಕಾರ್ಮಿಕ ಇಲಾಖೆಯ ಟ್ವಿಟ್ಟರ್ ನಲ್ಲಿ ಕಂಪನಿ ಮಾಡಿರುವ ನ್ಯಾಯದ ಕುರಿತಾಗಿ ವಿವವಾದ ಪತ್ರವನ್ನು ಟ್ಯಾಗ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಆ ಉದ್ಯೋಗಿಯ ಪ್ರಶ್ನೆಗೆ ಉತ್ತರಿಸಿರುವ ಕಾರ್ಮಿಕ ಇಲಾಖೆ ನಿಮ್ಮದು ಐಟಿ ಕಂಪನಿಯೇ, ನೀವು ಕಾರ್ಮಿಕ ವರ್ಗಕ್ಕೆ ಸೇರುವುದಿಲ್ಲ, ನಿಮ್ಮ ಸಂಸ್ಥೆಯ ಒಪ್ಪಂದ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಆದರೆ, ಕೊನೆಯಲ್ಲಿ ಕಾರ್ಮಿಕ ಸಹಾಯವಾಣಿಗೆ ಟ್ಯಾಗ್ ಮಾಡಿ ಎಂದು ಸಲಹೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








