ಸಾಣೇಹಳ್ಳಿ:
ಕನ್ನಡ ಸಂಸ್ಕೃತಿಇಲಾಖೆಯ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ವಿವಿಧರಂಗ ಸಂಸ್ಥೆಗಳ ಅಕಾಡೆಮಿಗಳ ಅನುದಾನವನ್ನುಕಡಿತಗೊಳಿಸುವುದುಅನ್ಯಾಯಎಂದುಇಲ್ಲಿನಸಾಣೇಹಳ್ಳಿ ಮಠದಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತೀರ್ವಆಕ್ಷೇಪ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಸರ್ಕಾರಇತ್ತೀಚೆಗೆ ಅಕಾಡೆಮಿಗಳಿಗೆ ಅನುದಾನ ಕಡಿತಗೊಳಿಸಿ ಆದೇಶಿಸಿರುವ ಕುರಿತು ಮಾತನಾಡಿದರು.ಕನ್ನಡ ಸಂಸ್ಕೃತಿಇಲಾಖೆಯ ಮೂಲಕ ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ವಿವಿಧರಂಗ ಸಂಸ್ಥೆಗಳಿಗೆ ಸರಕಾರ ಮಾರ್ಚ್ ಅಂತ್ಯದೊಳಗೆ ಹಣ ಬಿಡುಗಡೆ ಮಾಡಬೇಕಾಗಿತ್ತು.
ಆದರೆ ಈಗಿನ ಕನ್ನಡ ಮತ್ತು ಸಂಸ್ಕøತಿಇಲಾಖೆಯ ಸಚಿವರು ಕೆಲವು ಫೇಕ್ ಸಂಸ್ಥೆಗಳಿರುವ ಕಾರಣಅನುದಾನದ ಹಣವನ್ನು ವಾಪಾಸ್ ಕಳುಹಿಸಿರುವುದಾಗಿ ಈ ಹಿಂದೆ ಪತ್ರಿಕೆಗಳಲ್ಲಿ ವರದಿಯಾಗಿತ್ತು.ಆದರೆ ಅನೇಕ ಸಂಸ್ಥೆಗಳು ಪ್ರಾಮಾಣಿಕತೆಯಿಂದರಂಗಸೇವೆಯನ್ನು ಸಲ್ಲಿಸುತ್ತಲೇ ಇವೆ. ಇಲಾಖೆಗೆ ಆನ್‍ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಿವೆ. ಜೊತೆಗೆಆಯಾಜಿಲ್ಲೆಯಕನ್ನಡ ಮತ್ತು ಸಂಸ್ಕೃತಿಇಲಾಖೆಯಅನುಮೋದನೆಯನ್ನು ಪರಿಗಣಿಸಿಯೇ ಮಂಜುರಾತಿ ನೀಡುವ ಪದ್ಧತಿಇದೆ.
ಹೀಗಿರುವಾಗ ಫೇಕ್ ಸಂಸ್ಥೆಗಳಿವೆ ಎಂದರೆಅದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆಎಂದೇಅರ್ಥವಾಗುತ್ತದೆ.ಹೀಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮತ್ತುಅಂಥ ಸಂಸ್ಥೆಗಳ ಅನುದಾನತಡೆಹಿಡಿದುಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿ. ಇದಕ್ಕೆ ಯಾರ ಆಕ್ಷೇಪಣೆಯೂ ಇಲ್ಲ.
ಅದನ್ನು ಬಿಟ್ಟುಎಲ್ಲ ಸಂಘಟನೆಗಳ ಅನುದಾನವನ್ನು ಸಾರಾಸಗಟಾಗಿತಡೆಹಿಡಿಯುವುದು ಸಂಸ್ಕತಿಯನ್ನುಕಟ್ಟುವಕಾರ್ಯವಲ್ಲ. ಈ ಮಧ್ಯೆಚುನಾವಣೆಯ ನೀತಿಸಂಹಿತೆಯೇ ನೆಪವಾಗಿ ಇಡೀ ಪ್ರಕ್ರಿಯೆಯೇ ಸುಮಾರು ಮೂರು ತಿಂಗಳ ಕಾಲ ನಿಂತು ಹೋಯಿತು.ಚಿಕ್ಕ-ಪುಟ್ಟ ಸಂಸ್ಥೆಗಳು ಎಲ್ಲೆಲ್ಲೋ ಸಾಲ ಮಾಡಿರಂಗ ಸೇವೆಯನ್ನು ಮಾಡಿವೆ. ಈಗ ಅವರುಅತ್ತ ಸಾಲ ತೀರಿಸಲೂಆಗದೆಇತ್ತಕಲಾರಾಧನೆಯಲ್ಲೂ ತೊಡಗಿಕೊಳ್ಳದೆ ಕೈಸುಟ್ಟುಕೊಳ್ಳುವ ಸ್ಥಿತಿ ಬಂದಿದೆ. ಹೀಗೇ ಆದರೆರಂಗಭೂಮಿ, ಕಲಾಸೇವೆ ಎಂದರೆ ನೈಜಕಲಾರಾಧಕರುದೂರ ಉಳಿಯುವ ಸಾಧ್ಯತೆಯೇ ಹೆಚ್ಚು.ಇದರಿಂದ ಸರಕಾರದ ಮೇಲೆ ಯಾವದುಷ್ಪರಿಣಾಮವೂಆಗದು.ಆದರೆಕನ್ನಡ ಮತ್ತು ಸಂಸ್ಕøತಿಯ ಮೇಲೆ ಖಂಡಿತಾದುಷ್ಪರಿಣಾಮ ಬೀರದೇಇರದು.ಈ ಸೂಕ್ಷ್ಮವನ್ನು ಸರಕಾರಗಂಭೀರವಾಗಿ ಪರಿಗಣಿಸಿ ಈ ಕೂಡಲೇ ಹಿಂದಿನಂತೆಅನುದಾನ ಬಿಡುಗಡೆ ಮಾಡಬೇಕು.
ಇತ್ತೀಚಿನ ಪತ್ರಿಕೆಗಳಲ್ಲಿ ವರದಿಯಾದಂತೆಎಲ್ಲ ಅಕಾಡೆಮಿಗಳ ಅನುದಾನದಲ್ಲಿ ಸುಮಾರು ಶೇ.35 ರಷ್ಟು ಕಡಿತ ಗೊಳಿಸಲಾಗಿದೆ .ಉಳಿದ ಹಣದಲ್ಲಿಅರ್ಧದಷ್ಟು ನೌಕರರ ವೇತನಕ್ಕಾಗಿಯೇ ಹೋಗುತ್ತಿದೆಯಂತೆ.ಇನ್ನುಳಿದ ಶೇ.35 ರಷ್ಟು ಹಣದಲ್ಲಿ ಅಕಾಡೆಮಿಗಳು ಕರ್ನಾಟಕದಾದ್ಯಂತ ಕೆಲಸ ಮಾಡುವುದಾದರೂ ಹೇಗೆ?ವಾಸ್ತವವಾಗಿ ಪ್ರತಿವರ್ಷಅನುದಾನವನ್ನು ಕನಿಷ್ಟ ಶೇ.10 ರಷ್ಟುಏರಿಸಬೇಕಿತ್ತು.
ಅದನ್ನು ಬಿಟ್ಟು ಹೀಗೆ ಇದ್ದಕ್ಕಿದ್ದ ಹಾಗೆ ಅನುದಾನವನ್ನು ಕಡಿತಗೊಳಿಸುವುದು ಯಾವ ನ್ಯಾಯ?ಸಾಣೇಹಳ್ಳಿಯ ನಮ್ಮ ಶಿವಕುಮಾರ ಕಲಾಸಂಘವೇ ಪ್ರತಿವರ್ಷರಂಗಭೂಮಿಗಾಗಿ ಸುಮಾರುಒಂದುಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಹೀಗಿರುವಾಗಕರ್ನಾಟಕ ನಾಟಕಅಕಾಡೆಮಿಯ ಚಟುವಟಿಕೆಗಳನ್ನು ಕೇವಲ 80 ಲಕ್ಷಕ್ಕೆ ಸೀಮಿತಗೊಳಿಸಿರುವುದು ರಂಗಭೂಮಿಯ ಕೆಲಸಕಾರ್ಯಗಳನ್ನು ಸ್ಥಗಿತಗೊಳಿಸಿದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ಕನ್ನಡ ಮತ್ತು ಸಂಸ್ಕೃತಿಇಲಾಖೆಯ ಸಚಿವರು ಹಾಗು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಯೋಚಿಸಿ ಎಲ್ಲ ತಂಡಗಳಿಗೆ ಮೊದಲಿನಂತೆಅನುದಾನ ಬಿಡುಗಡೆ ಮಾಡುವ ಮತ್ತುಅಕಾಡೆಮಿಯಅನುದಾನವನ್ನು ಹೆಚ್ಚಿಸುವಕಾರ್ಯವನ್ನುತುರ್ತಾಗಿ ಮಾಡಬೇಕೆಂದುರಂಗಭೂಮಿಯಎಲ್ಲಕಲಾಸಕ್ತರ ಪರವಾಗಿ ಮನವಿ ಮಾಡುತ್ತೇವೆಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ