ಐಟಿ ದಾಳಿ ಖಂಡನೀಯ: ಸುಧಾಕರ್ ಲಾಲ್

ಕೊರಟಗೆರೆ:-

        ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಕೇಂದ್ರದ ಅಧಿಕಾರ ದುರುಪಯೋಗ ಪಡಿಸಿಕೊಂಡ ರಾಜ್ಯದ ಜೆಡಿಎಸ್ ನಾಯಕರ ಮನೆಗಳ ಮೇಲೆ ಐಟಿ ದಾಳಿ ನಡೆಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ತಿಳಿಸಿದರು.

      ಅವರು ಪಟ್ಟಣದ ಬೈಲಾಂಜನೇಯ ಸ್ವಾಮಿ ಸಮೂದಾಯ ಭವನದಲ್ಲಿ ಪತ್ರಿಕಾ ಘೋಷ್ಠಿಯಲ್ಲಿ ಮಾತನಾಡಿ,ನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಜೆಡಿಎಸ್ ನಾಯಕರುಗಳ ಮೇಲೆ ಬಿಜೆಪಿ ಪಕ್ಷವು ಐಟಿ ದಾಳಿ ನಡೆಸಿರುವುದು ಖಂಡನೀಯವಾಗಿದ್ದು, ಇದು ರಾಜಕೀಯ ದುರುದ್ದೇಶದ ದಾಳಿಯಾಗಿದ್ದು, ಬಿಜೆಪಿ ಪಕ್ಷವು ಸೋಲಿನ ಅತಾಷೆ ಯಿಂದ ಈ ರೀತಿಯ ಕೆಲಸಗಳನ್ನು ಮಾಡಿಸುತ್ತಿದ್ದು, ಎಂತಹ ಪರಿಸ್ಥತಿಂ ಬಂದರು ಜೆಡಿಎಸ್ ಪಕ್ಷದ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಈ ದಾಳಿಯನ್ನು ನಾನು ಸೇರಿದಂತೆ ನಮ್ಮ ಕೊರಟಗೆರೆ ಕ್ಷೇತ್ರದ ಜಿ.ಪಂ, ತಾ.ಪಂ, ಪ.ಪಂ ಯ ಎಲ್ಲಾ ಸದಸ್ಯರು ನಾಯಕರುಗಳು, ಕಾರ್ಯಕರ್ತರು ಖಂಡಿಸುತ್ತೇವೆ ಎಂದರು.

       ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಲೀಂಗಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರದ ಬಿಜೆಪಿ ನಾಯಕರುಗಳಿಗೆ ಮತ್ತು ಪಕ್ಷಕ್ಕೆ ನೀಡಿದ್ದ ಕಪ್ಪವನ್ನು ಐಟಿ ಇಲಾಖೆ ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡಿತ್ತು, ಆದರೆ ಈಗ ಜೆಡಿಎಸ್ ಪಕ್ಷದ ನಾಯಕರುಗಳನ್ನು ಎದರಿಸುವ ಉದ್ದೇಶದಿಂದ ಪ್ರಧಾನಿ ಮೋದಿರವರು ಇಂತಹ ಸಣ್ಣ ಕೆಲಸಕ್ಕೆ ಇಳಿದಿದ್ದಾರೆ. ಬಿಜೆಪಿ ಪಕ್ಷವು ಕರ್ನಾಟಕದಲ್ಲಿ ನಿರ್ಮಾಣವಾಗುತ್ತಿರುವುದರಿಮದ ಎಲ್ಲಾ ಲೋಕಸಭಾ ಕ್ಷೇತ್ರವನ್ನು ಸೋಲುವ ಬೀತಿಯಿಮದ ಈ ರೀತಿಯ ಕೆಲಸಕ್ಕೆ ಕೈಹಾಕಿದ್ದು, ಇದೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಮುಕ್ತ ರಾಜ್ಯವಾಗುತ್ತದೆ ಎಂದರು.

       ತಾಲ್ಲೂಕು ಜೆಡಿಎಸ್ ಕಾರ್ಯಾದ್ಯಕ್ಷ ನರಸಿಂಹರಾಜು ಮಾತನಾಡಿ, ಪ್ರಧಾನಿ ಮೋದಿರವರು ಎಷ್ಟೇ ಐಟಿ ದಾಳಿ ಮಾಡಿಸಿದರು ಇತರ ರೀತಿಯಲ್ಲಿ ತೊಂದರೆ ನೀಡಿದರು ಜೆಡಿಎಸ್ ಪಕ್ಷದ ಶಕ್ತಿಯನ್ನು ಮತ್ತು ಕಾರ್ಯಕರ್ತರ ನೈತಿಕ ಬಲವನ್ನು ಕುಂದಿಸಲು ಸಾಧ್ಯವಿಲ್ಲ, ಇದೇ ರೀತಿ ಮುಂದುವರೆದರೆ ಬಿಜೆಪಿಗು ತಕ್ಕ ಪಟ್ಟ ಕಲಿಸುವ ದಿನಗಳು ದೂರವಿಲ್ಲ ಎಂದರು.

       ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ತಿಮ್ಮಯ್ಯ, ತಾ.ಪಂ ಸದಸ್ಯ ಬೋರಣ್ಣ, ತುಮುಲ್ ನಿದೇರ್ಶಕ ಈಶ್ವರಯ್ಯ, ಜೆ.ಡಿಎಸ್ ಕಾರ್ಯದರ್ಶಿ ಲಕ್ಷ್ಮಣ್, ಪ.ಪಂ ಸದಸ್ಯರುಗಳಾದ ಲಕ್ಷ್ಮೀನಾರಾಯಣ್, ಪುಟ್ಟನರಸಯ್ಯ, ಮುಖಂಡರುಗಳದ ಗಣೇಶ್, ಖಲೀಂ ಸಾಬ್, ಸತ್ಯನಾರಾಯಣ್(ಕುದುರೆ ಸತ್ತಿ), ಸ್ಮಾಲ್ ರಘು, ಆನಂದ್.ಕೆ.ಎಲ್, ನಂಜಪ್ಪ, ಕಾಮಣ್ಣ, ಗಿರೀಶ್, ಅಣ್ಣಪ್ಪ, ಹನುಮಂತರಾಯ, ಸೇರಿದಂತೆ ಇನ್ನಿತರ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link