ಹಾವೇರಿ:
ಉಪಚುನಾವಣೆ ಮತದಾನಕ್ಕೂ ಮುನ್ನವೇ ರಾಣೆಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ .
ಜನರಿಗೆ ಹಂಚಲೆಂದು ಸಂಗ್ರಹಿದ್ದ ಅಕ್ರಮ ಹಣ, ಮದ್ಯ ಇರುವ ಮಾಹಿತಿ ಮೇರೆಗೆ ರಾತ್ರಿ 10 ಗಂಟೆ ಸುಮಾರಿಗೆ ವಾಗೀಶ್ ನಗರ 6ನೇ ಕ್ರಾಸ್ ಬಳಿ ಇರುವ ಕೋಳಿವಾಡ ಮನೆಗೆ 20ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು. ಒಂದು ಗಂಟೆಗಳ ಕಾಲ ಮನೆಯಲ್ಲಾ ಜಾಲಾಡಿ ಪರಿಶೀಲನೆ ನಡೆಸಿದರು. ಕೋಳಿವಾಡ ಅವರ ಮನೆಯಲ್ಲಿ 10 ಕೋಟಿ ಹಣ, ಮದ್ಯ ಇಟ್ಟಿರುವ ಶಂಕೆ ಮೇಲೆ ದಾಳಿ ನಡೆಸಲಾಗಿತ್ತು ಎಂದು ತಿಳಿಸಿದರು .
ಸಾರ್ವಜನಿಕರ ದೂರು ಆಧರಿಸಿ ಅಬಕಾರಿ ಹಾಗೂ ಐಟಿ ತಂಡ ದಾಳಿ ನಡೆಸಿ ತನಿಖೆ ಕೈಗೊಂಡರು. ದಾಳಿ ವೇಳೆ ನಯಾಪೈಸೆ ಹಣ, ಮದ್ಯ ಸಿಗದೇ ಅಧಿಕಾರಿಗಳು ವಾಪಸ್ ಹೋದರು. ಐಟಿ ದಾಳಿಯಿಂದ ರೊಚ್ಚಿಗೆದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಕೋಳಿವಾಡ ಮನೆ ಮುಂದೆ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದು ಬಿಜೆಪಿ ಪ್ರಯೋಜಿತ ದಾಳಿಯಾಗಿದೆ ಎಂದು ಕೋಳಿವಾಡ ಆರೋಪಿಸಿದರು. ರೇಡ್ ವೇಳೆ ಏನೂ ಸಿಕ್ಕಿಲ್ಲ, ಜಿಲ್ಲಾಧಿಕಾರಿಗೆ ಮಾಹಿತಿ ನೀಡುತ್ತೇವೆ ಅಂತ ಅಬಕಾರಿ ಆಯುಕ್ತ ಆರ್.ನಾಗಶಯನ ಹೇಳಿದರು.