ಬುಲೆಟ್ ನಿಂದ ಆಯತಪ್ಪಿ ಬಿದ್ದು ಐಟಿಪಿಎಲ್ ಉದ್ಯೋಗಿ ಸಾವು…!!

ಬೆಂಗಳೂರು

       ಬುಲೆಟ್ ಬೈಕ್‍ನಲ್ಲಿ ವೇಗವಾಗಿ ಕೆಲಸಕ್ಕೆ ಹೋಗುತ್ತಿದ್ದ ಐಟಿಪಿಎಲ್ ಉದ್ಯೋಗಿಯೊಬ್ಬರು ಆಯತಪ್ಪಿ ಬಿದ್ದು ಫುಟ್‍ಪಾತ್ ಕಲ್ಲಿಗೆ ತಲೆಹೊಡೆದುಕೊಂಡು ಮೃತಪಟಿರುವ ದುರ್ಘಟನೆ ಕೆಆರ್ ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ಬೆಳಗಾವಿ ಗಡಿ ಭಾಗದ ಸುವೇಗ್ ಸಾವಂತ್ (35)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಐಟಿಪಿಎಲ್‍ನ ಟಾಟಾ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಸಾವಂತ್ ಅವರು, ಸೋಮವಾಋ ಬೆಳಿಗ್ಗೆ 7.30ರ ವೇಳೆ ಹೂಡಿಯಿಂದ ಐಟಿಪಿಎಲ್ ಕಡೆಗೆ ಬುಲೆಟ್ ಬೈಕ್‍ನಲ್ಲಿ ವೇಗವಾಗಿ ಹೋಗುತ್ತಿದ್ದರು.

       ಮಾರ್ಗಮಧ್ಯೆ ಜ್ಯೂರಿ ಹೊಟೇಲ್ ಬಳಿ ಆಯತಪ್ಪಿ ಕೆಳಗೆ ಬಿದ್ದು ಪಕ್ಕದಲ್ಲಿದ್ದ ಫುಟ್‍ಪಾತ್ ಕಲ್ಲಿಗೆ ತಲೆಹೊಡೆದು ಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ಕೆಆರ್ ಪುರಂ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link