ಐಯುಡಿಪಿ ಬಡಾವಣೆಯಲ್ಲಿ 3 ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭ; ತಿಪ್ಪಾರೆಡ್ಡಿ

ಚಿತ್ರದುರ್ಗ

        ನಗರದ ಐಯುಡಿಪಿ ಬಡಾವಣೆಯಲ್ಲಿ ಹಲವಾರು ತಿರುವುಗಳಲ್ಲಿ ಸುಮಾರು 3 ಕೋಟಿ ರೂ.ಗಳ ಕಾಮಗಾರಿ ಪ್ರಾರಂಭವಾಗಿದೆ ಎಂದು ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

         ನಗರದ ಐಯುಡಿಸಿ ಬಡಾವಣೆಯ 9ನೇ ತಿರುವಿನಲ್ಲಿ ನಗರೋತ್ತಾನ 3ನೇ ಹಂತದ ಸುಮಾರು 90 ಲಕ್ಷ ರೂ,.ಗಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಈ ಭಾಗದಲ್ಲಿ ನಗರೋತ್ತಾನ 3ನೇ ಹಂತ, ಶಾಸಕರ ನಿಧಿ ಸೇರಿದಂತೆ ವಿವಿಧ ಅನುದಾನದಲ್ಲಿ ರಸ್ತೆ ಕಾಮಗಾರಿಗಳನ್ನು ಪ್ರಾರಂಭ ಮಾಡಲಾಗಿದೆ, ಇದ್ದಲ್ಲದೆ ಹೌಸಿಂಗ್ ಬೋಡ್ ಬಳಿಯಲ್ಲಿಯೂ ಸಹಾ ರಸ್ತೆ ಕಾಮಗಾರಿ ನಡೆಯಲಿದೆ ಎಂದರು.

         ನಗರದಲ್ಲಿ ಮುರುಘಾಮಠ, ಜೆ.ಎಂ.ಐ.ಟಿ. ಎಮ್ಮೆಹಟ್ಟಿ ಮತ್ತು ಬಸವೇಶ್ವರ ಆಸ್ಪತ್ರೆಯ ಬಳಿ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡುವಂತೆ ಕೇಂದ್ರ ಸಚಿವರಾದ ನಿತೀನ್ ಗಡ್ಕರಿಯವರಿಗೆ ಮನವಿಯನ್ನು ಈ ಹಿಂದೇಯೇ ನೀಡಲಾಗಿತ್ತು ಅದನ್ನು ಅವರು ಸಹಾ ಸಮ್ಮತಿ ನೀಡಿದ್ದರು ಆದರೆ ಅಧಿಕಾರಿಗಳು ಇದರ ಬಗ್ಗೆ ಆಸಕ್ತಿಯನ್ನು ತೋರಿಸುತಿಲ್ಲ ಏಕೆಂದರೆ ಕ್ಯಾದಿಗೆರೆಯಿಂದ ಮಾರಘಟ್ಟದವರೆಗೆ ಹೊಸದಾಗಿ ಬೈಪಾಸ್ ನಿರ್ಮಾಣವಾಗುತ್ತಿರುವುದರಿಂದ ಇದನ್ನು ನಿರ್ಲಕ್ಷ ಮಾಡಿದ್ದಾರೆ ಆದರೆ ಬಿಡುವುದಿಲ್ಲ ಇದನ್ನು ನಿರ್ಮಾಣ ಮಾಡಿಯೇ ತಿರುತ್ತೇನೆ ಇದರ ಬಗ್ಗೆ ಸಂಬಂಧಪಟ್ಟವರ ಹತ್ತಿರ ಮಾತನಾಡುವುದಾಗಿ ಹೇಳಿದರು.

         ರಸ್ತೆಗಳನ್ನು ಸಹಾ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಇದೇ ರೀತಿ ನಾಗರೀಕರು ಸಹಾ ರಸ್ತೆಗಳನ್ನು ಯಾವುದೇ ಕಾರಣಕ್ಕೂ ಹಾಳು ಮಾಡದಂತೆ ಎಚ್ಚರವಹಿಸಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಬಡಾವಣೆಯ ನಾಗರೀಕರು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link