ಇವ್ರೇನ್ರಪ್ಪ ನಮ್ಮವರು ನಾಟಕ ಪ್ರಧರ್ಶನ

ಗುಬ್ಬಿ

      ನಾಡಿನ ಕಲೆ,ಸಂಸ್ಕತಿ,ಭಾಷೆಯ ಪುನರುಸ್ಥಾನ ಪ್ರಕ್ರಿಯೆ ಜರೂರು ನಡೆದಾಗ ಮಾತ್ರ ಮಾನವನ ಸರ್ವತೋಮುಖ ಏಳಿಗೆ ಸಾಧ್ಯವೆಂದು ಹಿರಿಯ ಕಲಾವಿದ ಹೆಬ್ಬಾಕ ವಿರುಪಾಕ್ಷಯ್ಯ ತಿಳಿಸಿದರು.

      ತಾಲ್ಲೂಕಿನ ಗೊಲ್ಲಹಳ್ಳಿ ಗೌರೀಶಂಕರ ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರಸ್ವಾಮಿಯ ಜಾತ್ರಾ ಆಂಗವಾಗಿ ಕುಸುಮ ಕಲಾ ಸಂಘ ಮೆಳೇಕಲ್ಲಹಳ್ಳಿವತಿಯಿಂದ ಏರ್ಪಡಿಸಿದ್ದ ಇವ್ರೇನ್ರಪ್ಪ ನಮ್ಮವರು ನಾಟಕ ಪ್ರಧರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾನವ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಸಾಧನೆಯ ದಾವಂತ, ಕ್ಷಣಕ್ಷಣವು ಹೊಸ ಆಲೋಚನೆಗಳ ದಾರಿಯಲ್ಲಿ ಗೊಂದಲಗಳನ್ನು ಸೃಷ್ಟಿಸಿಕೊಂಡ ವ್ಯವಸ್ಥೆಗೆ ರಂಗಕಲೆ ಅತ್ಯವಶ್ಯಕ ಎಂದು ತಿಳಿಸಿದರು.

       ರಂಗ ಕಲೆ ಸಂಜೀವಿನಿಯಿದ್ದಂತೆ ತನ್ನೆಲ್ಲಾ ನೋವುಗಳನ್ನ ಮರೆಸಿ ಭಾವನಾತ್ಮಕ ಜಗತ್ತಿಗೆ ಕೊಂಡೊಯ್ಯುತ್ತಾ ಹೊಸ ಚಿಲುಮೆಯ ಚಿತ್ತಾರವನ್ನು ನಿರ್ಮಿಸಿ ಸದಾ ಚೈತನ್ಯತೆಯನ್ನು ನೀಡುವ ಗುಣ ಕಲೆಯಿಂದ ಮಾತ್ರ ಸಾಧ್ಯವೆಂದರು.

     ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ವದಲೂರು ಗಂಗಾಧರ್ ಮಾತನಾಡಿ ಬೋದನೆಗಿಂತ ರಂಗಮಾಧ್ಯಮದ ಮೂಲ ತಿಳಿಸಿದಾಗ ನೋಡುಗರ ಸೃತಿಪಟಲದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ ಶ್ರಮರಹಿತ ಬದುಕು ಮಾನವನನ್ನ ರೋಗ ಪೀಡಿತರನ್ನಾಗಿ ಮಾಡುತ್ತದೆ ಎಂದ ಅವರು ರಂಗಭೂಮಿ ಕ್ರೀಯಾಶೀಲತೆಯನ್ನು ಮೈಗೂಡಿಸಿಕೊಳ್ಳಲು ಉತ್ತಮ ನಿದರ್ಶನವಾಗಿದೆ ಎಂದರು.

       ಗೌರೀಶಂಕರಮಠದ ಮಹಾಪೋಷಕ ಶಿವಾನಂದಯ್ಯ ಮಾತನಾಡಿ ಪ್ರಾಚೀನ ಮಾನವ ಸಮುದಾಯ ತನಗೆ ಖುಷಿಯಾದಾಗ ಈ ಹಾಡು ಕುಣಿತಗಳ ಮೂಲಕ ತಮ್ಮ ಸಂತೋಷ ನೋವುಗಳನ್ನ ವ್ಯಕ್ತಪಡಿಸುತ್ತಾ ಮುಂದಿನ ತಲೆಮಾರಿಗೂ ಕೊಂಡ್ಯೊವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ರಂಗಕರ್ಮಿ ರಮೇಶ್ ಮೆಳೇಕಲ್ಲಹಳ್ಳಿ, ಕರೇಗೌಡ, ದ್ಯಾಮಸಂದ್ರ ರಾಜಣ್ಣ ಮುಂತಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap