ಚಿತ್ರದುರ್ಗ;
ನಮ್ಮ ಜೀವನ ಶೈಲಿ ಪರಿಸರ ವಿರೋದಿಯಾಗುತ್ತಿದೆ, ಎಲ್ಲಾ ಕಾರ್ಯಗಳಲ್ಲೂ ಆಡಂಬರದ ಜೀವನ ನಡೆಸಲು ಪ್ರಯತ್ನಸುತ್ತಿದ್ದೇವೆ. ಬೇರೋಬ್ಬರ ಶೈಲಿ ನಕಲು ಮಾಡಲು ಪ್ರಯತ್ನಿಸಿ, ಬಡವ, ಶ್ರೀಮಂತ, ಮಧ್ಯಮವರ್ಗದ ಜನರು ಬೇದಬಾವವಿಲ್ಲದೇ ಪರಿಸರದ ಮೇಲೆ ಒತ್ತಡ ಹಾಕುತ್ತಿದ್ದೇವೆ ಎಂದು ಪರಿಸರ ತಜ್ಞರು ಮತ್ತು ವಿಜ್ಞಾನಿಗಳಾದ ಪ್ರೋ, ಡಾ|| ಕೆ. ಕೆ. ಕಾಮಾನಿ ಮಾತನಾಡಿದರು.
ಸಮೀಪದ ಐನಹಳ್ಳಿ ಕುರುಬರಹಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಜೆ.ಸಿ. ಬೋಸ್ ಎಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಪರಿಸರ ರಕ್ಷಣೆಗಾಗಿ ನಮ್ಮ ಕರ್ತವ್ಯಗಳು ಕುರಿತು ಹಮ್ಮಿಕೊಳ್ಳಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯುತ್ತ್ ಶಕ್ತಿ, ಪೆಟ್ರೋಲ್, ಡೀಸೆಲ್, ಮರ ಮುಟ್ಟುಗಳನ್ನ ಏತೇಚ್ಛವಾಗಿ ಬಳಸಿ, ನೀರ, ಗಾಳಿ, ಮಣ್ಣನ್ನ ಮಲಿನಗೊಳಿಸಿ, ನಮ್ಮ ಆರೋಗ್ಯಕ್ಕೆ ನಾವೇ ಕುತ್ತು ತರುತ್ತಿದ್ದೇವೆ. ಕ್ಯಾನ್ಸರ್ ನಂತಹ ಮಹಾ ಮಾರಿಯನ್ನ ನಾವು ಸ್ವಾಗತಿಸುತ್ತಿದ್ಧೇವೆ, ಪ್ಲಾಸ್ಟಿಕ್ ವಸ್ತುಗಳನ್ನ ಹೆಚ್ಚು ಬಳಸಿ, ಮಾಲಿನ್ಯ ಹೆಚ್ಚಾಗಿ ಪ್ಲಾಸ್ಟಿಕ್ ಮಳೆ ಬರಬಹುದು. ಬಲೂನ್ ಬಳಕೆ ನಿಲ್ಲಿಸಿ, ಪಕ್ಷಿಗಳನ್ನ ರಕ್ಷಿಸಬೇಕು, ಪಟಾಕಿ ಸಿಡಿಸುವುದು ಈಗ ಅಪರಾಧವಾಗುತ್ತದೆ. ಮಕ್ಕಳ ಕಣ್ಣು, ಕಿವಿ, ಚರ್ಮ ಸುಡುವುದು, ನಂತರ ಅಂಗವಿಕಲ ವಾಗುವುದು, ಅದ್ದರಿಂದ ಪಟಾಕಿಯ ಬಗ್ಗೆ ಜನರಿಗೆ ತಾತ್ಸರ್ಯ ಹೊಂದಬೇಕು, ಅದರ ಬಗ್ಗೆ ಅರಿವು ಹೆಚ್ಚಿಸಬೇಕಾಗಿದೆ ಎಂದರು.
ಪರಿಸರವಾದಿ ಡಾ. ಎಚ್ .ಕೆ.ಎಸ್. ಸ್ವಾಮಿ ಮಾತನಾಡಿ ಗ್ರಾಮೀಣ ಶಾಲಾ ಆವರಣಗಳು ವಿಶಾಲವಾಗಿ ವಿಸ್ತಾರವಾಗಿ ಇರುವುದರಿಂದ, ಅವುಗಳಲ್ಲಿ ನೂರಾರು ಗಿಡಗಳನ್ನ ನೆಟ್ಟು, ಹಸಿರು ವಾತಾವರಣವನ್ನ ನಿರ್ಮಿಸಿ, ಉತ್ತಮ ಗಾಳಿ, ಆರೋಗ್ಯ ಪಡೆಯಬಹುದು. ಆದರೆ ಗ್ರಾಮಗಳಲ್ಲಿ ನೆಟ್ಟ ಗಿಡಗಳನ್ನ ಕಾಪಾಡಿಕೊಳ್ಳುವುದು ಅಷ್ಟು ಸುಲಭವಾದ ಕೆಲಸವಲ್ಲ. ಅವುಗಳನ್ನ ರಕ್ಷಿಸಿಕೊಳ್ಳಲು ಹಲವಾರು ಯೋಜನೆಗಳನ್ನ ರೂಪಿಸಬೇಕಾಗಿದೆ. ಇಲ್ಲದಿದ್ದರೆ ನೆಟ್ಟ ಗಿಡಗಳನ್ನ ಕಳೆದುಕೊಳ್ಳುವ ಸಂಭವಗಳೇ ಹೆಚ್ಚಾಗಿರುತ್ತದೆ ಎಂದರು.
ಪ್ರತಿ ಶಾಲೆಗಳು ಗಿಡ ನೆಟ್ಟ ನಂತರ ಜನರ ಸಹಕಾರದಿಂದ ಅವುಗಳನ್ನ ರಕ್ಷಿಸಲು ಕಾವಲುಗಾರನನ್ನ ವ್ಯವಸ್ಥೆ ಮಾಡಿಕೊಳ್ಳಬೇಕು. ಅಥವಾ ಮರ ರಕ್ಷಕಗಳನ್ನ ಬಳಸಬೇಕು. ಅದಕ್ಕಾಗಿ ಸ್ವಲ್ಪ ಹೆಚ್ಚಿಗೆ ಬಂಡವಾಳವನ್ನ ತೊಡಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಜಿ. ಹನುಮಂತಪ್ಪನವರು, ಮಾತನಾಡಿ, ಹೊಲಗಳ ಬದಿಯಲ್ಲಿ ಗಿಡ ಮರ ಬೆಳೆಸಲು ಪ್ರಯತ್ನಿಸಬೇಕು, ಮರ ಕಡಿಯಲು ಬರುವವರನ್ನ ತಡೆಯಬೇಕು. ರೈತರ ಮನಸ್ಸಿನಲ್ಲಿ ಮರದ ಬಗ್ಗೆ ತಪ್ಪು ಕಲ್ಪನೆ ಪ್ರಾರಂಭವಾಗಿದೆ, ಅದನ್ನ ನಿವಾರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಸುಜಾತಾ, ಮಂಜುಳಾ, ಶ್ರೀಓಂಕಾರಪ್ಪ, ಗೋವಿಂದಪ್ಪ, ರೇವಣ್ಣ, ಶಕುಂತಲಾ, ಕೋಕಿಲಾ, ವೀಣಾ, ನಾಗರಾಜ್, ಎಸ್.ಡಿ,ಎಂ,ಸಿ ಅಧ್ಯಕ್ಷರಾದ ಶ್ರೀ ರಾಮಚಂದ್ರಪ್ಪ ಉಪಸ್ಥಿತರಿದ್ದರು. ಮಕ್ಕಳು ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
