ಜಗಳೂರು:
ನಮ್ಮಲ್ಲಿ ಬರಗಾಲವಿರಬಹುದು ಆದರೆ ಕ್ರೀಡಾ ಶ್ರೀಮಂತಿಕೆಗೆ ಬರವಿಲ್ಲ ಎಂಬುದನ್ನು ಶಾಸಕ ಎಸ್.ವಿ.ರಾಮಚಂದ್ರರವರು ಜಗಳೂರು ಪಟ್ಟಣದಲ್ಲಿ ನ.30 ರಿಂದ ಡಿ.2 ರವರೆಗೆ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಪ್ರೋ ಕಬಡ್ಡಿ ಪಂದ್ಯಾವಳಿಗಳು ನಡೆಸಿಕೊಡುವ ಮೂಲಕ ಕ್ರೀಡಾಭಿಮಾನಿಗಳ ಉತ್ಸಾಹದ ಜೊತೆಗೆ ಜನತೆಗೆ ವಿಶೇಷವಾದಂತ ಕ್ರೀಡಾ ಮನರಂಜನೆ ಒದಗಿಸಿಕೊಟ್ಟಿದ್ದಾರೆ.
ಜಗಳೂರು ಪಟ್ಟಣ ಹಬ್ಬದೋಪಾಯದ ರೀತಿಯಲ್ಲಿ ಪಟ್ಟಣದ ತುಂಬೆಲ್ಲಾ ವಿದ್ಯುತ್ ಅಲಂಕಾರ, ಎಲ್ಲಿ ನೋಡಿದರೂ ಕ್ರೀಡೆಯ ಉತ್ತೇಜನ ನೀಡುವ ನಿಟ್ಟಿನಲ್ಲಿ ಶಾಸಕರ , ಸಂಸದರ, ವಿವಿಧ ಕಬ್ಬಡಿ ಕ್ರೀಡಾಕೂಟದ ಜಾಹಿರಾತುಫಲಕಗಳು ರಾರಾಜಿಸುತ್ತಿವೆ. ಮೊದಲ ದಿನದಂದೆ ಗುರುಭವನದಲ್ಲಿ ರಾತ್ರಿ ನಡೆದ ಮಹಿಳಾ ಮತ್ತು ಪುರುಷರ ಕಬ್ಬಡಿ ಪಂದ್ಯಗಳನ್ನು ನೋಡಲು ಜನಸಾಗರವೇ ಹರಿದಿ ಬಂದಿದ್ದು ಕ್ರೀಡಾಭಿಮಾನಿಗಳು ಆಟಗಾರರಿಗೆ ಪ್ರೋತ್ಸಾಹ ಕೊಡುತ್ತಿರುವುದು ಕಂಡು ಬಂದಿತು. ಮಹಿಳೆಯರಿಗೆ ಪ್ರತ್ಯೇಕ, ಪುರುಷರಿಗೆ ಪ್ರತ್ಯೇಕವಾಗಿ ಕೂತು ನೋಡುವಂತೆ ಮಾಡಲಾಗಿದೆ. ಹೊರಗಡೆಯಲ್ಲೂ ಕಬ್ಬಡಿ ವೀಕ್ಷಣೆ ನೋಡಲು ಭೃಹದಾಕಾರವಾದ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲೂ ಜನ ವೀಕ್ಷಣೆ ಮಾಡುತ್ತಿದ್ದು ಕಂಡು ಬಂದಿತು.
ಇಲ್ಲಿ ನಡೆಯುವ ಕ್ರೀಡೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳು ರಾಜ್ಯದ ಗಮನ ಸೆಳೆಯುವಲ್ಲಿ ಸಫಲವಾಗಿದೆ. ಜನವರಿ ತಿಂಗಳಲ್ಲಿ 9 ದಿನಗಳ ಕಾಲ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಅತ್ಯಂತ ಸಂಭ್ರಮ, ಸಡಗರದಿಂದ ಮತ್ತು ವೈಶಿಷ್ಟಪೂರ್ಣವಾಗಿ ನಡೆದು ರಾಜ್ಯದ ಗಮನ ಸೆಳೆದಿದ್ದು, ಈಗ ಜಗಳೂರು ಪಟ್ಟಣದಲ್ಲಿ ರಾಜ್ಯ ಮಟ್ಟದ ಜಿಎಂಎಸ್ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್ ಪ್ರೋ ಕಬಡ್ಡಿ ಪಂದ್ಯಾವಳಿಗಳು ಮೂರು ದಿವಸಗಳ ಕಾಲ ನಡೆಯುತ್ತಿದ್ದು, ಕ್ಷೇತ್ರದ ಜನತೆಗೆ ವಿಶೇಷವಾದಂತ ಕ್ರೀಡಾ ಮನರಂಜನೆ ನೀಡಿದೆ. ಅಲ್ಲದೇ ಯುವಕ-ಯುವತಿಯರಿಗೆ ರಾಜ್ಯಾಧ್ಯಂತ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳನ್ನು ನೋಡುವ ಅವಕಾಶ ದೊರಕಿದೆ.
ಶಾಸಕ ಎಸ್,ವಿ ರಾಮಚಂದ್ರ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾಗಾಗ ನಡೆಸುವ ಕ್ರೀಡೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮಗಳು ಸಹ ವಿಶೇಷ ರೀತಿಯಲ್ಲಿ ಜನರನ್ನು ಆಕರ್ಷಿಸಿ ಅವರಿಗೆ ಒಂದು ರೀತಿಯ ಸಾಂಸ್ಕøತಿಕ ರಾಯಬಾರಿ ಪಟ್ಟ ನೀಡಲಾಗಿದೆ.
ಕ್ರೀಡಾ ರಾಯಬಾರಿ: ರಾಮಚಂದ್ರ ಅವರ ಕ್ರೀಡಾ ಮನೋಭಾವ ಕಬಡ್ಡಿ ಆಟದ ಬಗೆಗಿನ ಅವರ ಕಾಳಜಿ, ಪ್ರೋತ್ಸಹದ ಹಿನ್ನೆಲೆ ಯಲ್ಲಿ ಕರ್ನಾಟಕ ಕಬಡ್ಡಿ ಅಸೋಸಿಯೇಷನ್ ಉಪಾಧ್ಯಕ್ಷರಾದ ಪ್ರಸಾದ್ ಬಾಬು ಅವರು ಶುಕ್ರವಾರ ನಡೆದ ಕಬಡ್ಡಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಎಸ್.ವಿರಾಮಚಂದ್ರ ಅವರನ್ನು ಕಬಡ್ಡಿ ಕ್ರೀಡಾ ರಾಯಬಾರಿಯಾಗಿ ನೇಮಕ ಮಾಡಿರುವುದಾಗಿ ಘೋಷಿಸಿದ್ದು, ಅವರ ಅಭಿಮಾನಿಗಳಲ್ಲಿ ಅಪಾರ ಸಂತಸ ತಂದಿದೆ.
ಶಾಸಕರಾದ ಎಸ್.ವಿ.ಆರ್. ಕ್ರೀಡಾ ಮತ್ತು ಸಾಂಸ್ಕತಿಕ ಸೇವೆ ಹಿನ್ನೋಟ:
• 1998ರಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿಗಳ ಆಯೋಜನೆ,
• 2007-08 ರಲ್ಲಿ ಅಂತರಾಜ್ಯ ಸಾಂಸ್ಕತಿಕ ಉತ್ಸವ ಆಯೋಜನೆಯಲ್ಲಿ 22 ರಾಜ್ಯಗಳ ಸಾಂಸ್ಕತಿ ಕಲಾ ತಂಡಗಳು ಭಾಗವಹಿಸಿದ್ದವ,
• 2008-09ರಲ್ಲಿ ರಾಜ್ಯ ಮಟ್ಟದ ಆಹ್ವಾನಿತ ಪುರುಷ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜನೆ,
• 2010-11ರಲ್ಲಿ ರಾಜ್ಯಮಟ್ಟದ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ಪೈಕಾ ಕಬಡ್ಡಿ, ಖೋ-ಖೋ ಪಂದ್ಯಾವಳಿಗಳ ಆಯೋಜನೆ.
• 2011-12ರಲ್ಲಿ ಉಚ್ಚಂಗಿದುರ್ಗದಲ್ಲಿ ರಾಜ್ಯ ಮಟ್ಟದ ಹಳ್ಳಿಯ ಸೊಗಡು ಬೀರುವ ಯುವ ಜನೋತ್ಸವ ಸಾಂಸ್ಕøತಿಕ ಕಲಾ ಉತ್ಸವ ಆಯೋಜನೆ.
• 2012-13ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯೋಗದೊಂದಿಗೆ ಹೊನಲು ಬೆಳಕಿನ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕಬಡ್ಡಿ, ಖೋ-ಖೋ ಪಂದ್ಯಾವಳಿಗಳ ಆಯೋಜನೆ
• ಇದೀಗ ಮೂರು ದಿನಗಳ ಕಾಲ ನಡೆಯುತ್ತಿರುವ ರಾಜ್ಯ ಮಟ್ಟದ ಪುರುಷ ಮಹಿಳೆಯರ ಹೊನಲು ಬೆಳಕಿನ ಮ್ಯಾಟ್ ಪ್ರೋ ಕಬಡ್ಡಿ ಪಂದ್ಯಾವಳಿಗಳು ಜನರ ಮನಸೂರಗೊಂಡಿದ್ದು ಕಿಕ್ಕೀರಿದು ಜನ ಸಾಗರ ಹರಿದು ಬರುತ್ತಿದೆ.
ಅಚ್ಚುಕಟ್ಟಾದ ಊಟದ ವ್ಯವಸ್ಥೆ: ರಾಜ್ಯದ ವಿವಿಧ ಜಿಲ್ಲೆಗಳಿಗಳಿಂದ ಆಗಮಿಸಿದ ರಾಜ್ಯ ಮಟ್ಟದ ಪುರುಷ, ಮಹಿಳೆಯರ 60 ಕ್ಕೂ ಹೆಚ್ಚು ತಂಡಗಳು ಆಗಮಿಸಿದ್ದು, ಈ ಎಲ್ಲಾ ಕ್ರೀಡಾಪಟುಗಳಿಗೂ, ತೀರ್ಪುಗಾರರಿಗೂ ವಸತಿ ಹಾಗೂ ತರಳುಬಾಳು ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ತಿಂಡಿ, ಮದ್ಯಾಹ್ನ ಮತ್ತು ರಾತ್ರಿ ವಿವಿಧ ಬಗೆಯ ಊಟವನ್ನು ಅಚ್ಚುಕಟ್ಟಾಗಿ ನೆರವೇರಿಸುವ ಮೂಲಕ ಶಾಸಕ ಎಸ್.ವಿ.ರಾಮಚಂದ್ರರವರೇ ಖುದ್ದು ವೀಕ್ಷಣೆ ಮಾಡುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ