5 ದಶಕಗಳ ಬಳಿಕ ಕೋಟೆನಾಡಿಗೆ ಜೈನಮುನಿ

ಚಿತ್ರದುರ್ಗ;

   ಅಹಿಂಸಾ ಯಾತ್ರೆ ಮೂಲಕ ಕೋಟೆನಾಡು ಚಿತ್ರದುರ್ಗಕ್ಕೆ ಜೈನಮುನಿಗಳು 51 ವರ್ಷಗಳ ಬಳಿಕ ಆಗಮಿಸಿದ್ದಾರೆ. ಈ ಮೊದಲು ಶ್ರೀ ಆಚಾರ್ಯ ತುಳಿಸಿ ಅವರು 1968ರ ಮೇ 24ರಂದು ಆಗಮಿಸಿದ್ದರು. ಅದಾದ ತರುವಾಯ ಈಗ ಶ್ರೀ ಮಹಾಪ್ರಮಣ್‍ಜಿ ಅವರು ಬಂದಿದ್ದಾರೆ

    ಸದ್ಬಾವಣೆ, ನೈತಿಕತೆ ಹಾಗೂ ವ್ಯಸನ ಮುಕ್ತಿಯ ಮಹತ್ವ ಸಾರಲು ಭಾರತದ 20 ರಾಜ್ಯಗಳು ಸೇರಿದಂತೆ ಮೂರು ದೇಶಗಳಲ್ಲಿ ಹಮ್ಮಿಕೊಂಡಿರುವ ತೇರಾಪಂಥ್ ಧರ್ಮ ಸಂಘದ 11ನೇ ಆಚಾರ್ಯ, ಜೈನಮುನಿ ಶ್ರೀಮಹಾ ಶ್ರಮಣಜಿ ಅವರ ಕಾಲ್ನಡಿಗೆಯ ಅಹಿಂಸಾ ಯಾತ್ರಾ ಭಾನುವಾರ ಚಿತ್ರದುರ್ಗದಲ್ಲಿ ನಡೆಯಿತು

     ಹೊಳಲ್ಕೆರೆ ರಸ್ತೆಯಿಂದ ಪಾದಯಾತ್ರೆ ಮೂಲಕ ನಗರಕ್ಕೆ ಸಹವರ್ತಿ ಸಾಧು, ಸಾಧ್ವಿಯರೊಂದಿಗೆ ಅಗಮಿಸಿದ ಜೈಜಮುನಿಗಳವರನ್ನು ನಗರದ ಹೊರವಲಯದ ಕನಕ ವೃತ್ತದ ಬಳಿ ಸಾವಿರಾರು ಮಂದಿ ಜೈನ ಸಮುದಾಯದ ವಿದ್ಯಾರ್ಥಿಗಳು, ಯುವ ಜನರು, ಮಹಿಳೆಯರು ಸೇರಿದಂತೆ ಇನ್ನಿತರೆ ಸಮುದಾಯದವರು ಬರ ಮಾಡಿಕೊಂಡರು ಕನಕ ವೃತ್ತದಿಂದ ಹೊಳಲ್ಕೆರೆ ರಸ್ತೆ ಮಾರ್ಗವಾಗಿ ಗಾಂಧಿ ವೃತ್ತದ ಮೂಲಕ ಹೆಜ್ಜೆ ಹಾಕಿ ಸಾಮರಸ್ಯದ ಸಂದೇಶ ಸಾರುತ್ತಾ ಗುಮಾಸ್ತ ಕಾಲೋನಿಯ ತೇರಾಪಂಥ್ ಭವನಕ್ಕೆ ತಲುಪಿದರು
ನಂತರ ತೇರಾಪಂಥ್ ಭವನದ ಬಳಿಯ ಆವರಣದಲ್ಲಿ ನಡೆದ ಧರ್ಮ ಸಭೆಯಲ್ಲಿ ಶ್ರೀಮಹಾ ಶ್ರಮಣಜಿ ಪ್ರವಚನ ನೀಡಿದರು.

    ಜೈನಮುನಿಗಳು ಸಮಾಜದಲ್ಲಿ ಎಲ್ಲರೂ ಶಾಂತಿ ಸಹಬಾಳ್ವೆಯಿಂದ ಬದುಕಬೇಕು. ದೇಶದಲ್ಲಿ ಶಾಂತಿ ನೆಲೆಸಬೇಕು ಎಂದು ಆಶಿಸಿದರು
ನಂತರ ತೇರಾಪಂಥ್ ಭವನದಿಂದ ಪಾದಯಾತ್ರೆ ಮುಂದುವರೆಸಿದ ಮುನಿಗಳು, ನಗರದ ಹೊರವಲಯಲ್ಲಿರುವ ಸ್ಟೆಪ್ಪಿಂಗ್ ಸ್ಟೋನ್ ಶಾಲೆಯಲ್ಲಿ ವಾಸ್ತ್ಯವ್ಯ ಹೂಡಿದರು. ಸೋಮವಾರ ಬೆಳಿಗ್ಗೆ ಪಾದಯಾತ್ರೆಯ ಮೂಲಕ ಹಿರಿಯೂರಿಗೆ ತೆರಳಲಿದ್ದಾರೆ.

    ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ತೇರಾಪಂಥ್‍ಸಭಾದ ಅಧ್ಯಕ್ಷ ಶಾಂತಿಲಾಲ್ ಜೀ ಕೋಠಾರಿ, ತೇರಾಪಂಥ್ ಯುವಕ್ ಪರಿಷತ್‍ನ ವಿನೋದ್ ಭಾಷ್ನಾ, ಕಾರ್ಯದರ್ಶಿ ವಿನೋದ್ ಭಾಷ್ನಾ, ತೇರಾಪಂಥ್ ಮಹಿಳಾ ಘಟಕದ ಕವಿತಾ ಕುಮಾರಿ ಜೈನ್, ಪ್ರಮೀಳಾ ಕೋಠಾರಿ, ಧನರಾಜ್, ಭರತ್ ಜೀರಾವಾಲ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು

ಪಾದಯಾತ್ರೆ ಪ್ರವರ್ತಕ;

    ಅಹಿಂಸಾ ಯಾತ್ರೆಯ ಪ್ರವರ್ತಕ ಆಚಾರ್ಯ ಶ್ರೀಮಹಾಪ್ರ ಶ್ರಮಣ್ ಅವರು 1962ರಲ್ಲಿ ಮೇ 12ರಂದು ರಾಜಸ್ಥಾನದ ಸರದಾರ ಶಹರ್‍ನಲ್ಲಿ ಜನ್ಮತಾಳಿದರು. 1974ರ ಮೇ 5ರಂದು ಜೈಮುನಿಯಾಗಿ ದೀಕ್ಷೆ ಪಡೆದರು. ಬಳಿಕ ಅಣುವ್ರತ ಆಂದೋಲನದ ಪ್ರವರ್ತಕ ರಾದರು. ( ಜಾತಿ ವಾದ, ಕೋಮುಗಲಭೆ, ವರದಕ್ಷಿಣೆ ವಂಚನೆ, ಇನ್ನಿತರೆ ಸಾಮಾಜಿಕ ಅನಿಷ್ಠಗಳ ವಿರುದ್ದ ಆಂದೋಲನ)
ಬಳಿಕ ತೇರಾಪಂಥ್ ಧರ್ಮ ಸಂಘದ 11ನೇ ಅಚಾರ್ಯರಾದರು. ಇದೀಗ ಅಹಿಂಸಾ ಯಾತ್ರೆಯ ಪ್ರವರ್ತಕರಾಗಿ ದೇಶದ ಉದ್ದಗಲಕ್ಕೂ ಪಾದಯಾತ್ರೆ ನಡೆಸುತ್ತಿರುವ ಜೈನಮುನಿಗಳು ನೇಪಾಳ್, ಭೂತಾನ್ ದೇಶಗಳಲ್ಲೂ ಹೆಜ್ಜೆ ಹಾಕಿ ಮತ್ತೆ ಭಾರತದಲ್ಲಿ ಪಾದಯಾತ್ರೆ ಮುಂದುವರೆಸಿದ್ದಾರೆ. ಸುಮಾರು 14 ಸಾವಿರಕ್ಕೂ ಹೆಚ್ಚು ಕಿ.ಮೀ.ಪಾದಯಾತ್ರೆ ಗುರಿ ಹೊಂದಿದ್ದಾರೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link