ಜಲ ವೀಳ್ಯ ಯಶಸ್ಸಿಗೆ ಹೋರಾಟ ಸಮಿತಿಯಿಂದ ಕೃತಜ್ಞತೆ ಸಮರ್ಪಣೆ

ಚಿತ್ರದುರ್ಗ

         ಜಿಲ್ಲಾ ನೀರಾವರಿ ಹೋರಾಟ ಸಮಿತಿ ವತಿಯಿಂದ   ಭಾನುವಾರ ಹಮ್ಮಿಕೊಳ್ಳ ಲಾದ ಜಲವೀಳ್ಯ ಕಾರ್ಯಕ್ರಮ ಯಶಸ್ಸಿಗೆ ಬೆಂಬಲಕ್ಕೆ ನಿಂತ ಎಲ್ಲ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮಠಾಧೀಶರು,ರೈತ ಮತ್ತು ಕಮ್ಯುನಿಸ್ಟ್ ಸಂಘಟನೆಗಳಿಗೆ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಕೃತಜ್ಞತೆ ಸಲ್ಲಿಸಿದೆ.

       ಅಜ್ಜಂಪುರ ಸಮೀಪದ ಬೆಟ್ಟದತಾವರೆಕೆರೆ ಪಂಪ್ ಹೌಸ್ ಬಳಿ ಜಲವೀಳ್ಯ ಕಾರ್ಯಕ್ರಮಕ್ಕೆ ತೆರಳಲು ಖಾಸಗಿ ಬಸ್ಸುಗಳ ಸಂಘದ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹಾಗೂ ಕಾರ್ಯದರ್ಶಿ ಜಿ.ಬಿ.ಶೇಖರ್ ಹತ್ತು ಬಸ್ಸುಗಳ ಒದಗಿಸಿದ್ದಲ್ಲದೇ ಸ್ವತಹ ಕಾರ್ಯಕ್ರಮಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೌ`Áಗ್ಯ ಬಸವರಾಜನ್ ಎರಡು ಬಸ್ಸುಗಳಲ್ಲಿ ತಮ್ಮ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜನರನ್ನು ಕಳಿಸಿದ್ದರು. ವೀರಶೈವ ಸಮಾಜದಿಂದ ಒಂದು ಬಸ್ಸಿನಲ್ಲಿ ಮಹಿಳೆಯರು ಆಗಮಿಸಿ ಜಲವೀಳ್ಯ ನೀಡಿದರು.

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೋಟೆ ಮಂಜುನಾಥ್ , ಎಪಿಎಂಸಿ ಶಶಿಧರ, ಮಾಜಿ ಅಧ್ಯಕ್ಷ ತಿಮ್ಮಾರೆಡ್ಡಿ, ದಲಾಲರ ಸಂಘದ ಕಾರ್ಯದರ್ಶಿ ಕೋಗುಂಡೆ ದ್ಯಾಮಣ್ಣ 1200 ಮಂದಿಗೆ ಊಟದ ವ್ಯವಸ್ಥೆ ಜವಾಬ್ದಾರಿ ವಹಿಸಿಕೊಳ್ಳುವುದರ ಮೂಲಕ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರೆಂದು ಹೋರಾಟ ಸಮಿತಿ ಸ್ಮರಿಸಿದೆ.

ಬಸವಕೇಂದ್ರ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾಶರಣರು, ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಪೀಠದ ಡಾ.ಶಾಂತವೀರ ಸ್ವಾಮೀಜಿ, ಉಪ್ಪಾರ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ವಿಶ್ವೇಶ್ವರಯ್ಯ ನೀರಾವರಿ ನಿಗಮದ ತಾಂತ್ರಿಕ ಸಲಹೆಗಾರ ಚೆಲುವರಾಜು, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಚಳ್ಳಕೆರೆ ಶಾಸಕ ರಘುಮೂರ್ತಿ, ಜಿಲ್ಲಾ ಪಂಚಾಯಿತಿ ಅ`ಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಮುರುಘರಾಜೇಂದ್ರ ಒಡೆಯರ್ ,ಡಾ.ಬಂಜಗೆರೆ ಜಯಪ್ರಕಾಶ್ , ರೈತ ಸಂಘದ ರಾಜ್ಯ ಪ್ರ`Áನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ರಾಜ್ಯಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಬಸ್ತಿಹಳ್ಳಿ ಸುರೇಶ್ ಬಾಬು, ಕೆ.ಆರ್  ದಯಾನಂದ್ , ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುದ್ದಾಪುರ ನಾಗರಾಜ್ ,ಕಟ್ಟಡ ಕಾರ್ಮಿಕರ ಸಂಘದ  ಕುಮಾರ್ , ಸಿಪಿಐನ ಸುರೇಶ್ ಬಾಬು, ಸಿ.ವೈ.ಶಿವರುದ್ರಪ್ಪ, ಜಗಳೂರು ಹೋರಾಟ ಸಮಿತಿಯ ಜೆ.ಯಾದವರೆಡ್ಡಿ, ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ , ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟದ ಅಧ್ಯಕ್ಷ ಕೆ.ಎಂ.ವೀರೇಶ್ ಸೇರಿದಂತೆ ಎಲ್ಲರಿಗೂ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಒಟ್ಟು ಹದಿಮೂರು ಬಸ್ಸುಗಳು, 53 ಕಾರುಗಳಲ್ಲಿ ಜನತೆ ಜಲ ವೀಳ್ಯ ನೀಡಲು ತೆರಳಿದ್ದರು.

 

Recent Articles

spot_img

Related Stories

Share via
Copy link
Powered by Social Snap